ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಂಡೋಸಲ್ಫಾನ್ ನಿಷೇಧಕ್ಕೆ ಕೇಂದ್ರ ಮೀನಮೇಷ: ಕರಂದ್ಲಾಜೆ (UPA | Shobha karandlaje | BJP | Yeddyurappa | Congress)
Bookmark and Share Feedback Print
 
ವ್ಯಾಪಕ ಪ್ರತಿಭಟನೆಯ ನಂತರವೂ ಎಂಡೋಸಲ್ಫಾನ್ ನಿಷೇಧಕ್ಕೆ ಕೇಂದ್ರ ಸರಕಾರ ಹಿಂದೇಟು ಹಾಕುತ್ತಿರುವುದರ ಹಿಂದೆ ಕೀಟನಾಶಕ ಕಂಪನಿಗಳ ಕೈವಾಡವಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಎಂಡೋಸಲ್ಫಾನ್ ಕೀಟನಾಶಕವನ್ನು ಭಾರತದಲ್ಲಿ ಪೂರ್ಣರೂಪದಲ್ಲಿ ನಿಷೇಧಿಸುವಂತೆ ಆಗ್ರಹಿಸಿ ಭಾರತೀಯ ಜನತಾ ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಸಂಬಂಧ ನಡೆದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೀಟನಾಟಕ ಕಂಪನಿ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳು ಕೇಂದ್ರ ಸರಕಾರವನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿವೆ. ಕೇಂದ್ರ ಸರಕಾರ ದೇಶದ ಒಳಿತಿಗಿಂತಲೂ ಹೆಚ್ಚಾಗಿ ಈ ಕಂಪನಿಗಳ ಹಿತಾಸಕ್ತಿ ಕಾಯ್ದುಕೊಂಡು ಬಂದಿದೆ ಎಂದವರು ದೂರಿದರು. ಇದರ ಪರಿಣಾಮ ತರಕಾರಿಯಿಂದ ಹಿಡಿದು ಮಾನವರು ಸೇವಿಸುವ ಎಲ್ಲ ಪದಾರ್ಥಗಳೂ ವಿಷಮಯವಾಗಿವೆ ಎಂದರು.ಸಂತ್ರಸ್ತರಿಗೆ ಕೇರಳ ಸರಕಾರ ನೀಡುತ್ತಿರುವ ಸೌಲಭ್ಯ ಅಪೂರ್ಣವಾಗಿದೆ. ಇದರಿಂದ ನೊಂದ ಜನರಿಗೂ ಅನ್ಯಾಯವಾಗಿದೆ ಎಂದವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ