ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಕನ್ನಡವೇ ಸತ್ಯ ಕನ್ನಡವೇ ನಿತ್ಯ'; ವಿಶ್ವ ಸಮ್ಮೇಳನಕ್ಕೆ ವರ್ಣರಂಚಿತ ತೆರೆ (Belagavi | World Kannda Meet | Karnataka | Kannada)
ಕಳೆದ ಮೂರು ದಿನಗಳಲ್ಲಿ ಕುಂದಾನಗರಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಭರ್ಜರಿ ಯಶಸ್ಸು ಕಂಡಿದೆ. ಸಮ್ಮೇಳಕ್ಕೆ ಹರಿದು ಬಂದಿರುವ ಲಕ್ಷಾಂತರ ಜನಸಮೂಹವೇ ಇದಕ್ಕೆ ಸಾಕ್ಷಿಯಾಗಿದ್ದಾರೆ. ಇದರಂತೆ ಭಾನುವಾರ ಸಮ್ಮೇಳನಕ್ಕೆ ವರ್ಣರಂಚಿತ ತೆರೆ ಕಂಡಿದೆ.

ಕಳೆದ ಮೂರು ದಿನಗಳಲ್ಲಿ ಗಡಿನಾಡು, ಹೊರನಾಡು ಮತ್ತು ಹೊರದೇಶಗಳಿಂದ ಸಾವಿರಾರು ಜನರು ಹರಿದು ಬಂದಿದ್ದರು. ಕೊನೆಯ ದಿನವಾದ ಭಾನುವಾರ ಭಾರಿ ಜನದಟ್ಟನೆ ಕಂಡುಬಂದಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ವಿಶ್ವ ಕನ್ನಡ ಸಮ್ಮೇಳನ ಗಡಿನಾಡಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಸಮ್ಮೇಳನದ ಯಶಸ್ಸಿಗಾಗಿ ಹಗಲಿರುಳು ದುಡಿದ ಸಂಘಟಕರ ಶ್ರಮ ಸಾರ್ಥಕವೆನಿಸಿದೆ.

ಎಲ್ಲಿ ನೋಡಿದರೆ ಕನ್ನಡದ ಧ್ವಜಗಳು ರಾರಾಜಿಸುತ್ತಿದ್ದವು. ಜನರು ಹಗಲು ರಾತ್ರೆಯೆನ್ನದೇ ಜಾತ್ರೆಗೆ ಬಂದಂತೆ ಹರಿದು ಬರುತ್ತಿದ್ದರು. ಇದು ಸಮ್ಮೇಳನದ ಭಾರಿ ಯಶಸ್ಸಿಗೆ ಕಾರಣವಾಗಿತ್ತು.

ವಸ್ತು ಪ್ರದರ್ಶನ, ಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ, ಸಾಹಿತ್ಯ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಗಾಯನ, ನಾಟಕ ಜತೆ ಹತ್ತು ಹಲವು ಚಿಂತನ ಗೋಷ್ಠಿಗಳು ಜನಮನ ಗೆದ್ದವು.

ಸಮ್ಮೇಳನದ ಭರ್ಜರಿ ಯಶಸ್ಸಿನಿಂದ ಪುಳಕಿತರಾಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವುದಾಗಿ ಘೋಷಿಸಿದ್ದಾರೆ.
ಇವನ್ನೂ ಓದಿ