ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಂಡೋಸಲ್ಫಾನ್‌: ಪವಾರ್ ವಿರುದ್ಧ ಕತ್ತಿ ಮಸೆದ ಶೋಭಾ (Endosulphan, Sharad Pawar, Shobha)
ದೇಶದಲ್ಲಿ ಎಂಡೋ ಸಲ್ಫಾನ್‌ ನಿಷೇಧಿಸುವುದಿಲ್ಲ ಎಂಬರ್ಥದ ಮಾತುಗಳನ್ನಾಡಿರುವ ಕೇಂದ್ರ ಕೃಷಿ ಸಚಿವ ಶರದ್‌ ಪವಾರ್‌ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಎಂಡೋಸಲ್ಫಾನ್‌ ನಿಷೇಧವನ್ನು ಮುಂದುವರಿಸಲಾಗುವುದು, ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಶ್ವತವಾಗಿ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಎಂಡೋಸಲ್ಫಾನ್‌ ನಿಷೇಧಕ್ಕೆ ರೈತರು ವಿರೋಧಿಸುತ್ತಿದ್ದಾರೆ ಎಂದು ಶರದ್‌ ಪವಾರ್ ಹೇಳಿರುವುದು ಸತ್ಯಕ್ಕೆ ದೂರವಾದ ಸಂಗತಿ, ಎಂಡೋಸಲ್ಫಾನ್‌ ಉತ್ಪಾದಕ ಕಂಪನಿಗಳ ಹಿತಾಸಕ್ತಿ ಕಾಪಾಡಲು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಕರಂದ್ಲಾಜೆ ಆಪಾದಿಸಿದ್ದಾರೆ.

ಪಶ್ಚಿಮ ಬಂಗಾಳ, ಪಂಜಾಬ್‌, ಹರಿಯಾಣ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಕೇರಳ ರಾಜ್ಯಗಳಲ್ಲಿ ರೈತರು ಎಂಡೋಸಲ್ಫಾನ್‌ ಬಳಕೆಯ ದುಷ್ಪರಿಣಾಮ ಅನುಭವಿಸಿದ್ದಾರೆ. ಸಚಿವ ಪವಾರ್‌ ಅವರು ಪ್ರಾಮಾಣಿಕರಾಗಿದ್ದರೆ ಎಂಡೋ ಸಲ್ಫಾನ್‌ನಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಅಧ್ಯಯನ ನಡೆಸಬೇಕು ಎಂದರು.

ಎಂಡೋಸಲ್ಫಾನ್‌ನಿಂದಾಗಿ ಕನಿಷ್ಠ 6 ಸಾವಿರ ಜನರು ನಾನಾ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಆಪಾದಿಸಿದರು.

ರಾಜ್ಯ ಸರಕಾರ ಫೆ.17ರಿಂದ ಎಂಡೋಸಲ್ಫಾನ್‌ ಬಳಕೆಯನ್ನು 60 ದಿನಗಳ ಕಾಲ ನಿಷೇಧಿಸಿತ್ತು.ಇದನ್ನು ಪ್ರಶ್ನಿಸಿ ಎಂಡೋಸಲ್ಫಾನ್‌ ಉತ್ಪಾದಕರ ಸಂಘ ಹೈಕೋರ್ಟ್‌‌ನಲ್ಲಿ ಅರ್ಜಿ ಸಲ್ಲಿಸಿತ್ತು.

ಎಂಡೋಸಲ್ಫಾನ್‌ ಬಳಕೆಯನ್ನು ಶಾಶ್ವತವಾಗಿ ನಿಷೇಧಿಸಲು ಕೇಂದ್ರ ಸರಕಾರ ಅನುಮತಿ ನೀಡುವವರೆಗೂ ತಾತ್ಕಾಲಿಕ ನಿಷೇಧ ಮುಂದುವರಿಸುವ ಪ್ರಸ್ತಾವನೆಯನ್ನು ಸಂಪುಟದ ಮುಂದಿಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೋರುವುದಾಗಿ ತಿಳಿಸಿದರು.
ಇವನ್ನೂ ಓದಿ