ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶೋಭಾ ಸಮರ: ರಾಜ್ಯದಲ್ಲಿ 32 ಲಕ್ಷ ಅಕ್ರಮ ಗ್ಯಾಸ್ ಸಂಪರ್ಕ (illegal LPG connections | Bangalore | Shobha Karandlaje | sugar | kerosene)
ನಕಲಿ ಪಡಿತರ ಚೀಟಿ ಮತ್ತು ಅಕ್ರಮ ಅಡುಗೆ ಅನಿಲ ಸಂಪರ್ಕ ವಿರುದ್ಧ ಸಮರ ಸಾರಿರುವ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವೆ ಶೋಭಾ ಕರಂದ್ಲಾಜೆ, ನಗರ-ಪಟ್ಟಣ ಪ್ರದೇಶದಲ್ಲಿ 18.37 ಲಕ್ಷ ನಕಲಿ ಪಡಿತರ ಚೀಟಿ ಮತ್ತು 32.32 ಲಕ್ಷ ನಕಲಿ ಅಡುಗೆ ಅನಿಲ ಸಂಪರ್ಕ ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಡಿತರ ಚೀಟಿ ಮತ್ತು ಅಡುಗೆ ಅನಿಲ ಸಂಪರ್ಕ ಹೊಂದಿರುವವರ ಮನೆಯ ವಿದ್ಯುತ್ ಮೀಟರ್‌ನ ಆರ್.ಆರ್.ಸಂಖ್ಯೆಗೆ ಪಡಿತರ ಚೀಟಿ, ಅಡುಗೆ ಅನಿಲ ಸಂಪರ್ಕದ ಸಂಖ್ಯೆಯನ್ನು ಹೊಂದಾಣಿಕೆ ಮಾಡುವ ಮೂಲಕ ಅಕ್ರಮಗಳನ್ನು ಪತ್ತೆ ಹಚ್ಚಲಾಗಿದೆ. ಅರ್ಹ ಮತ್ತು ಅನರ್ಹ ಪಡಿತರ ಚೀಟಿದಾರರ ಸಂಪೂರ್ಣ ವಿವರ ವೆಬ್‌ಸೈಟ್‌ನಲ್ಲಿ (ahara.kar.nic.in) ಲಭ್ಯವಿದೆ. ಮೊಬೈಲ್ ಫೋನ್ ಮೂಲಕವೂ (9243355223)ಎಸ್ಎಂಎಸ್ ಮಾಡುವ ಮೂಲಕ ವಿವರ ತಿಳಿದುಕೊಳ್ಳಬಹುದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಒಂದಕ್ಕಿಂತ ಹೆಚ್ಚಿನ ಕಾರ್ಡ್, ಅಡುಗೆ ಅನಿಲ ಸಂಪರ್ಕಗಳನ್ನು ಹೊಂದಿರುವ ಗ್ರಾಹಕರನ್ನು ಪಟ್ಟಿ ಮಾಡಿ ಅಂತಹ ಸಂಪರ್ಕಗಳನ್ನು 15 ದಿನಗಳ ಕಾಲ ಅಮಾನತಿಲ್ಲಿ ಇಡಲಾಗಿದೆ. ನಿಗದಿತ ಅವಧಿಯೊಳಗೆ ಸಂಬಂಧಪಟ್ಟವರು ನಿಖರವಾದ ಮಾಹಿತಿ ನೀಡಿದರೆ ಮಾತ್ರ ಆ ಸಂಪರ್ಕಗಳನ್ನು ಮುಂದುವರಿಸಲಾಗುತ್ತದೆ ಇಲ್ಲದಿದ್ದರೆ ಶಾಶ್ವತವಾಗಿ ರದ್ದುಪಡಿಸಲಾಗುವುದು ಎಂದು ಹೇಳಿದರು.

ನಗರ-ಪಟ್ಟಣ ಪ್ರದೇಶದ 52,24,150 ಪಡಿತರ ಚೀಟಿದಾರರ ಪೈಕಿ ಇದುವರೆಗೆ 35,89,911 ಪಡಿತರ ಚೀಟಿದಾರರು ಮಾತ್ರ ವಿದ್ಯುತ್ ಮೀಟರ್‌ನ ಆರ್.ಆರ್.ಸಂಖ್ಯೆ ನೀಡಿದ್ದಾರೆ. 2,62,568 ಪಡಿತರ ಚೀಟಿದಾರರು ತಾವು ವಿದ್ಯುತ್ ಬಳಸುತ್ತಿಲ್ಲ ಎಂದು ಹೇಳಿದ್ದು, ಅಂತಹ ಪಡಿತರ ಚೀಟಿಗಳನ್ನು ಸದ್ಯಕ್ಕೆ ಮುಂದುವರಿಸಲಾಗುವುದು ಎಂದರು.

ವಿದ್ಯುತ್ ಮೀಟರ್ ಆರ್.ಆರ್.ಸಂಖ್ಯೆಗೆ ಹೊಂದಾಣಿಕೆಯಾಗದ, ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳು ಇರುವ 17,59,397 ಪ್ರಕರಣಗಳು ಪತ್ತೆಯಾಗಿವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಅಂತಹ ಕಾರ್ಡ್‌ಗಳನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 75,55,156 ಅಡುಗೆ ಅನಿಲ ಸಂಪರ್ಕಗಳಿದ್ದು, 47,80,510 ಗ್ರಾಹಕರು ಮಾತ್ರ ಮಾಹಿತಿ ನೀಡಿದ್ದಾರೆ. ಈ ಪೈಕಿ 43,22,327 ಸಂಪರ್ಕದಾರರ ಮಾಹಿತಿ ಮಾತ್ರ ಆರ್.ಆರ್.ಸಂಖ್ಯೆಯೊಂದಿಗೆ ಹೊಂದಾಣಿಕೆಯಾಗಿದೆ. ಪಡಿತರ ಚೀಟಿ, ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲ ಗ್ರಾಹಕರು, ತಮ್ಮ ಸಂಪರ್ಕವನ್ನು ಮುಂದುವರಿಸಲಾಗಿದೆಯೇ ಇಲ್ಲವೇ ಎಂದು ಆನ್‌ಲೈನ್ ಮೂಲಕ ತಿಳಿದುಕೊಳ್ಳಬಹುದು ಎಂದು ಹೇಳಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಶೋಭಾ ಕರಂದ್ಲಾಜೆ, ಗ್ಯಾಸ್ ಸಂಪರ್ಕ, ಪಡಿತರ ಚೀಟಿ, ಬೆಂಗಳೂರು, ಕರ್ನಾಟಕ