ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹುಬ್ಬಳ್ಳಿ ಮಾಧುರಿ ಮುಡಿಗೆ 'ಮಿಸ್ ಕರ್ನಾಟಕ' ಕಿರೀಟ (Madhuri | Miss karnataka | Mysore | Reshme | Karnataka | KSIC)
PR
2011ನೇ ಸಾಲಿನ ಕೆಎಸ್ಐಸಿ ಮೈಸೂರು ಸಿಲ್ಕ್ 'ಮಿಸ್ ಕರ್ನಾಟಕ' ಕಿರೀಟವನ್ನು ಹುಬ್ಬಳ್ಳಿಯ ರೂಪದರ್ಶಿ ಮಾಧುರಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಇಂಡಿಯಾ ಕ್ಲಾಸಿಕ್ ಆರ್ಟ್ಸ್ ಮತ್ತು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಹಾಗೂ ಕೆಎಎಸ್ಐಸಿ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 11ಮಂದಿ ರೂಪದರ್ಶಿಗಳು ಭಾಗವಹಿಸಿದ್ದರು.

ಮೂರು ಸುತ್ತುಗಳ ಸ್ಪರ್ಧೆಯಲ್ಲಿ ಅಂತಿಮ ಹಂತಕ್ಕೆ ಏಳು ರೂಪದರ್ಶಿಗಳು ಆಯ್ಕೆಯಾದರು. ಮೊದಲನೇ ರನ್ನರ್ ಅಪ್ ಸ್ಥಾನವನ್ನ ತುಮಕೂರಿನ ಡಿ.ಶ್ವೇತಾ ಹಾಗೂ ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದರು.

ಸ್ಪರ್ಧೆಗೂ ಮೊದಲು ಸುದ್ದಿಗಾರರ ಜತೆ ಮಾತನಾಡಿದ ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ, ಮೈಸೂರು ರೇಷ್ಮೆಗೆ ಪ್ರಪಂಚದಲ್ಲಿಯೇ ಪ್ರತಿಷ್ಠಿತ ಸ್ಥಾನಮಾನ ಇದೆ. 17ನೇ ಶತಮಾನದಿಂದಲೂ ಉದ್ಯಮ ಅಸ್ತಿತ್ವದಲ್ಲಿದೆ. ದೇಶದಲ್ಲಿ 16 ಸಾವಿರ ಮೆಟ್ರಿಕ್ ಟನ್ ರೇಷ್ಮೆ ಉತ್ಪಾದನೆಯಾದರೆ ಅದರಲ್ಲಿ ಕರ್ನಾಟಕದ ಕೊಡುಗೆ ಎಂಟು ಸಾವಿರ ಮೆಟ್ರಿಕ್ ಟನ್ ಎಂದರು.

ಅಬಕಾರಿ ಸಚಿವ ರೇಣುಕಾಚಾರ್ಯ ಮಾತನಾಡಿ, ರಾಜ್ಯದ ಯುವತಿಯರ ಪ್ರತಿಭೆ ಗುರುತಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಸ್ಪರ್ಧೆಯಲ್ಲಿ ಆಯ್ಕೆಯಾದ ರೂಪದರ್ಶಿ ಲಂಡನ್‌ನಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮಾಧುರಿ, ಮಿಸ್ ಕರ್ನಾಟಕ, ಮೈಸೂರು, ರೇಷ್ಮೆ, ಕರ್ನಾಟಕ, ಕೆಎಸ್ಐಸಿ