ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೆ ಬಿಕ್ಕಟ್ಟು: ಯಡಿಯೂರಪ್ಪ v/s ಅನಂತ್ ಬಣ ಬಲಪ್ರದರ್ಶನ (BJP | Yeddyurappa | Ananth kumar | Illegal Mining Report | Lokayukta | Renukacharya)
PR
ಅಕ್ರಮ ಗಣಿಗಾರಿಕೆ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇದೀಗ ರಾಜೀನಾಮೆ ನೀಡಬೇಕೆಂಬ ಹೈಕಮಾಂಡ್ ಸೂಚನೆಗೆ ಬಿ.ಎಸ್.ಯಡಿಯೂರಪ್ಪ ಸೆಡ್ಡು ಹೊಡೆದಿದ್ದರೆ, ಮತ್ತೊಂದೆಡೆ ಯಡಿಯೂರಪ್ಪ ರಾಜೀನಾಮೆ ನೀಡುವುದಿಲ್ಲ ಎಂಬ ಸಿಎಂ ಪರ ಬಣ ಹೇಳುತ್ತಿದ್ದರೆ, ಅನಂತ್ ಕುಮಾರ್ ಬಣ ಯಡಿಯೂರಪ್ಪ ರಾಜೀನಾಮೆ ಅನಿವಾರ್ಯ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಎರಡು ಬಣಗಳಾಗಿರುವುದು ಗೋಚರಿಸತೊಡಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಯಡಿಯೂರಪ್ಪ ರಾಜೀನಾಮೆ ಕುರಿತಂತೆ ಬೆಂಗಳೂರಿಗೆ ಆಗಮಿಸಿರುವ ಪಕ್ಷದ ವರಿಷ್ಠರಾದ ರಾಜನಾಥ್ ಸಿಂಗ್ ಹಾಗೂ ಅರುಣ್ ಜೇಟ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಮಾತುಕತೆ ನಡೆಸಿದ್ದರು. ನಂತರ ರಾಜನಾಥ್ ಸಿಂಗ್, ಜೇಟ್ಲಿ, ಧರ್ಮೇಂದ್ರ ಪ್ರಧಾನ್ ನೇರವಾಗಿ ಯಡಿಯೂರಪ್ಪ ಮನೆಗೆ ಆಗಮಿಸಿ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಯಡಿಯೂರಪ್ಪ ಪರ ಸುಮಾರು 70ಕ್ಕೂ ಅಧಿಕ ಶಾಸಕರು, 14 ಸಂಸದರು ಹಾಗೂ 20ಕ್ಕೂ ಅಧಿಕ ವಿಧಾನಪರಿಷತ್ ಸದಸ್ಯರು ತಮ್ಮ ಬೆಂಬಲ ಸೂಚಿಸಿರುವುದು ಸಮಸ್ಯೆ ಬಗೆಹರಿಸುವಲ್ಲಿ ಹೈಕಮಾಂಡ್ ವಿಫಲವಾಗಿದೆ.

ಸಿಎಂ ಹಾಗೂ ಅನಂತ್ ಬಣ ಬಲಪ್ರದರ್ಶನ:
ರಾಜ್ಯರಾಜಕಾರಣಕ್ಕೆ ಸಂಬಂಧಿಸಿದಂತೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅನಂತ್ ಕುಮಾರ್ ಶುಕ್ರವಾರ ನೇರವಾಗಿ ರಂಗಪ್ರವೇಶ ಮಾಡಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣ ಎನ್ನಲಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಮತ್ತೊಂದೆಡೆ ಯಡಿಯೂರಪ್ಪ ನಿವಾಸದಲ್ಲಿ 70ಕ್ಕೂ ಅಧಿಕ ಶಾಸಕರು ಸಾಥ್ ನೀಡುವ ಮೂಲಕ ಎರಡು ಬಣಗಳಾಗಿರುವುದು ಸ್ಪಷ್ಟವಾದಂತಾಗಿದೆ.

ಸಿಎಂ ರಾಜೀನಾಮೆ ಕೊಡ್ಬೇಕು-ಸಚಿವ ರಾಮದಾಸ
ಇಂದು ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸಂಸದ ಡಿಬಿ ಚಂದ್ರೇಗೌಡ, ಸಚಿವ ರೇಣುಕಾಚಾರ್ಯ, ಶಾಸಕ ಬಿಪಿ ಹರೀಶ್ ಅವರು ಯಡಿಯೂರಪ್ಪನವರೇ ತಮ್ಮ ನಾಯಕರು ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಏತನ್ಮಧ್ಯೆ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್, ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಲೇಬೇಕು. ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂಬುದಾಗಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಅಲ್ಲದೇ 57ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್ ಸೂಚನೆಗೆ ಬದ್ಧರಾಗಿರುವುದಾಗಿ ತಿಳಿಸುವ ಮೂಲಕ ಯಡಿಯೂರಪ್ಪ ಬಣಕ್ಕೆ ಸೆಡ್ಡು ಹೊಡೆದಿದ್ದಾರೆ.

ರಾಮದಾಸ್ ಹೈಕಮಾಂಡಾ?:ರೇಣುಕಾಚಾರ್ಯ ಕಿಡಿ
ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು. ನಮ್ಮ ಬಳಿಯೂ 57 ಶಾಸಕರಿದ್ದಾರೆ ಎಂಬ ರಾಮದಾಸ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅಬಕಾರಿ ಸಚಿವ ರೇಣುಕಾಚಾರ್ಯ, ಯಾರ್ರೀ...ಅದು...ರಾಮದಾಸ್ ಹೈಕಮಾಂಡಾ?. ನಾವು ಹೈಕಮಾಂಡ್ ಜತೆ ಮಾತನಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಬಣ ಇಲ್ಲ, ಯಡಿಯೂರಪ್ಪ ರಾಜೀನಾಮೆ ಅನಿವಾರ್ಯ-ಅರವಿಂದ ಲಿಂಬಾವಳಿ
ಬಿಜೆಪಿಯಲ್ಲಿ ಯಾವುದೇ ಬಣಗಳಿಲ್ಲ, ನಾವೆಲ್ಲ ಒಂದಾಗಿದ್ದೇವೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ ಅನಂತ್ ಕುಮಾರ್ ಆಪ್ತರಾಗಿರುವ ಅರವಿಂದ ಲಿಂಬಾವಳಿ, ಯಡಿಯೂರಪ್ಪ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಲೇಬೇಕು. ಹಾಗಾಗಿ ಅವರು ರಾಜೀನಾಮೆ ನೀಡುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬಿಜೆಪಿ, ಯಡಿಯೂರಪ್ಪ, ಅನಂತ್ ಕುಮಾರ್, ಅಕ್ರಮ ಗಣಿ ವರದಿ, ಲೋಕಾಯುಕ್ತ, ರೇಣುಕಾಚಾರ್ಯ