ಸರ್ವಜ್ಞ | ಪ್ರಚಲಿತ | ವಿಮಾನ ದುರಂತ | ರಾಷ್ಟ್ರೀಯ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಹಂತಕಿ ಶುಭಾ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ (Girish | Murder Case | Shubha | Suprime Court)
ಸಾಫ್ಟ್‌ವೇರ್ ಉದ್ಯೋಗಿ ಬಿ.ವಿ.ಗಿರೀಶ್‌ ಹತ್ಯೆ ಪ್ರಕರಣದ ಆರೋಪಿ ವಕೀಲೆ ಶುಭಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

2003ರ ನವೆಂಬರ್ 30ರಂದು ಗಿರೀಶ್ ಮತ್ತು ಶುಭಾ ನಡುವೆ ನಿಶ್ಚಿತಾರ್ಥ ನಡೆದಿತ್ತು. ಆದರೆ, ಅರುಣ್ ವರ್ಮಾ ಎಂಬಾತನನ್ನು ಪ್ರೀತಿಸುತ್ತಿದ್ದ ಶುಭಾ ತನ್ನ ಪ್ರೀತಿ ಉಳಿಸಿಕೊಳ್ಳಬೇಕೆಂದು ಸಂಚು ಹೂಡಿ ಇನ್ನಿಬ್ಬರ ಸಹಾಯದಿಂದ ರಿಂಗ್ ರಸ್ತೆಯಲ್ಲಿ ಡಿಸೆಂಬರ್ 3ರಂದು ಹತ್ಯೆ ಮಾಡಿಸಿದ್ದಳು. ಹತ್ಯೆಯ ನಂತರ ಯಾರೋ ಕೊಲೆ ಮಾಡಿದ್ದಾರೆ ಎಂಬಂತೆ ವರ್ತಿಸಿದ್ದಳು. ಆದರೆ, ಆಕೆ ಪ್ರಿಯತಮನಿಗೆ ಮಾಡಿದ್ದ ಫೋನ್ ಮತ್ತು ಎಸ್ಎಮ್ಎಸ್ ಗಳ ಸಹಾಯದಿಂದ ಆಕೆಯನ್ನು ಪೊಲೀಸರು ಬಲೆಗೆ ಬೀಳಿಸಿದ್ದರು.

ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ 17ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಒಂಟಿಗೋಡಿ ಅವರು ನಿವೃತ್ತ ಯೋಧ ಥಾಮಸ್‌ ಸೇರಿದಂತೆ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳು ಹಾಗೂ ಶುಭಾ ಮತ್ತು ಅರುಣ್‌ ನಡುವೆ ನಡೆದ ದೂರವಾಣಿ ಸಂಭಾಷಣೆಯ ಆಧಾರದ ಮೇಲೆ ಶುಭಾ ಹಾಗೂ ಇತರೆ ಮೂರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ತ್ವರಿತ ನ್ಯಾಯಾಲಯವು ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿದ್ದ ಶುಭಾ ತಾನು ಅಮಾಯಕಿ ಎಂದು ಮಾಡಿದ್ದ ಮನವಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಶುಭಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌‌ ಕೆಳ ನ್ಯಾಯಾಲಯ ನೀಡಿರುವ ತೀರ್ಪನ್ನು ಎತ್ತಿ ಹಿಡಿದಿದೆ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಮಹಿಳೆ ಎಂಬ ಕಾರಣಕ್ಕೆ ಶುಭಾಗೆ ಜಾಮೀನಿ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದರಿಂದಾಗಿ ಆರೋಪಿ ಶುಭಾಗೆ ಸೆರೆವಾಸ ಖಚಿತವಾಗಿದೆ.ಇವನ್ನೂ ಓದಿ
ಇದನ್ನು ಸಹ ಶೋಧಿಸು: ಗಿರೀಶ್, ಹತ್ಯೆ ಪ್ರಕರಣ, ಶುಭಾ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಕನ್ನಡ ಸುದ್ದಿ, ಕರ್ನಾಟಕ ನ್ಯೂಸ್ ಆನ್ಲೈನ್