ಸರ್ವಜ್ಞ | ಪ್ರಚಲಿತ | ವಿಮಾನ ದುರಂತ | ರಾಷ್ಟ್ರೀಯ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ದೇವೇಗೌಡ್ರ ಸಹವಾಸ ಮಾಡದಂತೆ ಡೀವಿಗೆ ಎಚ್ಚರಿಸಿದ್ದೆ: ವಿಶ್ವನಾಥ್ (Deve Gowda | jds | Sadananda Gowda | bjp | Vishwanath | Congress | Kpcc | bjp Dispute | Kumaraswamy | Karnataka News)
WD
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹವಾಸ ಮಾಡಬೇಡಿ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಎಚ್ಚರಿಕೆ ಕೊಟ್ಟಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಿಲ್ಲ. ಹಾಗಾಗಿ ಗೌಡರ ಸಹವಾಸ ಮಾಡಿದ್ದರ ಪರಿಣಾಮ ಡೀವಿ ಸಂಕಷ್ಟ ಎದುರಿಸುವಂತಾಗಿದೆ ಎಂದು ಕಾಂಗ್ರೆಸ್ ಸಂಸದ ಎಚ್.ವಿಶ್ವನಾಥ್ ಟೀಕಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾನಂದ ಗೌಡರು ದೇವೇಗೌಡರ ಸಹವಾಸ ಮಾಡಿದ್ದರಿಂದಲೇ ಯಡಿಯೂರಪ್ಪ ಅಸಮಾಧಾನಗೊಳ್ಳಲು ಕಾರಣವಾಗಿದೆ. ದೇವೇಗೌಡರ ಅಣತಿಯಂತೆ ಸರ್ಕಾರ ನಡೆಯುತ್ತಿದೆ ಎಂದು ಆರೋಪಿಸಿದರು.

ನಾಲ್ಕು ವರ್ಷಗಳ ಹಿಂದೆ ಜನ ಬಿಜೆಪಿ ಮೇಲೆ ಅಭಿಮಾನವಿಟ್ಟು ಅಧಿಕಾರದ ಗದ್ದುಗೆಗೆ ಏರಿಸಿದರು. ಆದರೆ ಬಿಜೆಪಿ ಮುಖಂಡರು ಜನರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ. ಅಷ್ಟೇ ಅಲ್ಲ ರಾಜ್ಯವನ್ನೇ ಅರಾಜಕತೆಯತ್ತ ಕೊಂಡೊಯ್ದು, ಅಭಿವೃದ್ಧಿಯಾಗದಂತೆ ತಮ್ಮ ವೈಯಕ್ತಿಕ ತೇವಲಿಗಾಗಿ ಕಚ್ಚಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸದಾನಂದ ಗೌಡರು ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ದೇವೇಗೌಡರ ಅಣತಿಯಂತೆ ಸರ್ಕಾರ ನಡೆಸುತ್ತಿದ್ದಾರೆ ಎಂದು ಯಡಿಯೂರಪ್ಪ ಆಪ್ತರು ಆರೋಪಿಸಿದ್ದು, ಆ ಕಾರಣದಿಂದ ಸದಾನಂದ ಗೌಡರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸುವ ಸಲುವಾಗಿ ರಣತಂತ್ರ ರೂಪಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ವಿಶ್ವನಾಥ್ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಇವನ್ನೂ ಓದಿ
WebduniaWebdunia