ಸರ್ವಜ್ಞ | ಪ್ರಚಲಿತ | ವಿಮಾನ ದುರಂತ | ರಾಷ್ಟ್ರೀಯ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ನಿತ್ಯಾನಂದ ಸ್ವಾಮಿ ಬಿಡದಿ ಆಶ್ರಮದ ಸುತ್ತ ನಿಷೇಧಾಜ್ಞೆ ಜಾರಿ (Nithynanda | Bidadi | Sadananda Gowda | Suvarna News | Rasalile | Aarthy rao | Summons | Karnataka News)
PR
ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ನಿತ್ಯಾನಂದ ಸ್ವಾಮಿಯ ಧ್ಯಾನಪೀಠಂ ಆಶ್ರಮದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆಶ್ರಮದ ಸುತ್ತ 500 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಆಶ್ರಮದ ಸುತ್ತ ಗುಂಪುಗೂಡುವಂತಿಲ್ಲ ಎಂದು ಸೂಚಿಸಿದೆ.

ಆಶ್ರಮದ ಸುತ್ತ ಎರಡು ತಿಂಗಳು 144 ಸೆಕ್ಷನ್ ಜಾರಿಯಾಗಿದ್ದು, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ನಿತ್ಯಾನಂದ ಗಡಿಪಾರಿಗೆ ಸಿದ್ದರಾಮಯ್ಯ ಆಗ್ರಹ:
ಏತನ್ಮಧ್ಯೆ ಬಿಡದಿ ಧ್ಯಾನಪೀಠದ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅದರ ಪೀಠಾಧಿಪತಿ ನಿತ್ಯಾನಂದ ಸ್ವಾಮಿಯನ್ನು ಗಡಿಪಾರು ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಔರಾದ್ ತಾಲೂಕಿನ ಜೊನ್ನಿಕೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಡದಿ ಆಶ್ರಮವು ಅಕ್ರಮ ಮತ್ತು ಅನೈತಿಕ ಚಟುವಟಿಕೆಯ ತಾಣವಾಗಿದೆ. ನಿತ್ಯಾನಂದ ಬಂಧನ ಕ್ರಮ ಸಮರ್ಥನೀಯ. ಈ ಹಿಂದೆಯೇ ಆ ಕೆಲಸ ಆಗಬೇಕಿತ್ತು ಎಂದರು.
ಇವನ್ನೂ ಓದಿ
Feedback Print