ರುಚಿಯಾದ ನಿಂಬೆ ರಸಂ ಮಾಡೋದು ಹೇಗೆ ಗೊತ್ತಾ

ಬೆಂಗಳೂರು, ಬುಧವಾರ, 12 ಸೆಪ್ಟಂಬರ್ 2018 (14:04 IST)

ಬಿಸಿ ಬಿಸಿಯಾದ ರುಚಿಯಾದ ರುಚಿಯಾದ ರಸಂ ಮಾಡಿಕೊಂಡು ತಿಂದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ರಸಂಗಳು ಮಳೆಗಾಲಕ್ಕೆ ಹೇಳಿ ಮಾಡಿಸಿದ ಪದಾರ್ಥವಾಗಿದೆ. ಚಳಿಗಾಲದಲ್ಲಿ ಅನ್ನದೊಂದಿಗೆ ಮಾಡಿಕೊಂಡು ತಿಂದರೆ ಬಾಯಿ ಚಪ್ಪರಿಸುವಂತಾಗುತ್ತದೆ. ಹೀಗೆ ಎಲ್ಲಾ ಋುತುಮಾನದಲ್ಲಿ ಮಾಡುವಂತಹ ರಸಂಗಳಲ್ಲಿಯೂ ಹಲವಾರು ವೈವಿಧ್ಯದ ರಸಂಗಳಿವೆ. ರುಚಿಯಾದ ನಿಂಬೆ ರಸಂ ಅನ್ನು ಅವಸರದ ಸಮಯದಲ್ಲಿಯೂ ಮಾಡಿಕೊಂಡು ತಿನ್ನಬಹುದು. ಹಾಗಾದರೆ ಮಾಡೋದು ಹೇಗೆ ಅಂತಾ ತಿಳಿಸಿಕೊಡ್ತೀವಿ.. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
 
* 1 ಕಪ್ ತೊಗರಿಬೇಳೆ 
* 1 ಚಮಚ ಜೀರಿಗೆ ಮತ್ತು ಮೆಣಸಿನಪುಡಿ
* 4 ರಿಂದ 5 ಕರಿಬೇವಿನ ಎಲೆ
* 2 ಹಸಿಮೆಣಸಿನಕಾಯಿ
* ಕೊತ್ತಂಬರಿ
* 1 ನಿಂಬೆಹಣ್ಣು (1/2 ಕಪ್ ನಿಂಬೆರಸ)
* 1/4 ಚಮಚ ಅರಿಶಿನ
* 2 1/2 ಕಪ್ ನೀರು
* ಸ್ವಲ್ಪ ಇಂಗು
* 1/4 ಕಪ್ ಸಾಸಿವೆ
* ಎಣ್ಣೆ, ಉಪ್ಪು, 1/2 ಕಪ್ ಸಕ್ಕರೆ
 
ಮಾಡುವ ವಿಧಾನ :
 
ಮೊದಲೇ 1 ಕಪ್ ತೊಗರಿಬೇಳೆಯನ್ನು ಸ್ವಲ್ಪ ಅರಿಶಿನ ಮತ್ತು 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಬೇಕು. ಬೇಯಿಸಿದ ಬೇಳೆಯನ್ನು ಚೆನ್ನಾಗಿ ಮಸೆದು ಒಂದೆಡೆ ಇಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಇಂಗು, ಜೀರಿಗೆ, ಮೆಣಸಿನ ಪುಡಿ, ಹಸಿಮೆಣಸಿನಕಾಯಿ ಮತ್ತು ಅರಿಶಿನ ಬೆರೆಸಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಎರಡು ಕಪ್ ನೀರು ಬೆರೆಸಿ ಕುದಿಸಬೇಕು. ಇದಕ್ಕೆ ಈಗಾಗಲೇ ಮಸೆದಿದ್ದ ಬೇಳೆ ಬೆರೆಸಿ ಸ್ವಲ್ಪ ಸಕ್ಕರೆ ಮತ್ತು ರುಚಿಗೆ ತಕ್ಕಂತೆ ಉಪ್ಪನ್ನು ಬೆರೆಸಿ ತಿರುಗಿಸಬೇಕು. ಕೆಲವು ನಿಮಿಷಗಳ ನಂತರ ಒಲೆಯನ್ನು ಆರಿಸಿ ಅದಕ್ಕೆ 1/2 ಕಪ್ ನಿಂಬೆರಸವನ್ನು ಬೆರೆಸಿ ಕದಡಿಸಬೇಕು. ನಂತರ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿ ಅದರ ಮೇಲೆ ಹಾಕಬೇಕು. ಆಗ ಸವಿಯಲು ಸಿದ್ಧ. ಈ ರಸಂ ಅನ್ನು ಅನ್ನದ ಜೊತೆಗೂ ಸೇರಿಸಿ ತಿನ್ನಬಹುದು. ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೊಟ್ಟೆ ಚೆನ್ನಾಗಿ ಬೆಂದಿದೆಯೇ ಎಂದು ತಿಳಿಯಲು ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್

ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದನ್ನು ಹಸಿಯಾಗಿ ಕುಡಿಯುವ ಬದಲು ಬೇಯಿಸಿ ತಿಂದರೆ ...

news

ಒಮ್ಮೆ ಮಿಲನಕ್ರಿಯೆ ಮಾಡಿದ ಬಳಿಕ ಮತ್ತೊಮ್ಮೆ ಮಾಡಲು ಎಷ್ಟು ಸಮಯ ತೆಗೆದುಕೊಳ್ಳಬೇಕು?

ಬೆಂಗಳೂರು: ಒಂದೇ ದಿನ ಎರಡು ಬಾರಿ ಮಿಲನ ಕ್ರಿಯೆ ನಡೆಸಬೇಕೆಂದರೆ ಎಷ್ಟು ಸಮಯದ ಬಿಡುವು ತೆಗೆದುಕೊಳ್ಳಬೇಕು? ...

news

ವೀಳ್ಯದೆಲೆಯ ವಿಧ ವಿಧವಾದ ತಿನಿಸುಗಳು

ವೀಳ್ಯದೆಲೆ ಎಂದರೆ ತಕ್ಷಣ ನೆನಪಾಗುವುದು ತಾಂಬೂಲ. ಎಲ್ಲಾ ಶುಭ ಸಮಾರಂಭದಲ್ಲಿ ಹೆಚ್ಚಾಗಿ ಬಳಸುವ ಎಲೆಯೂ ಇದೇ ...

news

ರಕ್ತವನ್ನು ಶುದ್ಧೀಕರಿಸುವ ಆಹಾರ ಪದಾರ್ಥಗಳ ಬಗ್ಗೆ ತಿಳಿದಿದೆಯೇ?

ನಮ್ಮ ದೇಹದ ಎಲ್ಲಾ ಕ್ರಿಯೆಗಳು ರಕ್ತ ಪರಿಚಲನೆಯನ್ನು ಅವಲಂಬಿಸಿದೆ. ರಕ್ತದ ಶುದ್ಧೀಕರಣದ ಕೊರತಯಿಂದ ...

Widgets Magazine