ನಿಂತು- ನಿಂತು ಬರುವ ನೋವಿನ ನರಳಿಕೆ, ಅರಚಾಟ, ಚೀರಾಟ... ಲೌಕಿಕ ಜಗತ್ತಿನ ಪರಿವೆ ಇಲ್ಲದೆ ವಿಚಿತ್ರವಾಗಿ ವರ್ತಿಸುವವರು ದೆವ್ವ ಪಿಶಾಚಿಗಳಿಂದ ಮುಕ್ತಿ ಪಡೆಯಲು ಬರುವ ಮಾಂತ್ರಿಕ ಕಣಿವೆಯೇ ‘ಹುಸೇನ್ ಟೇಕ್ರಿ’ ಜಗತ್ತು.
ಹುಸೇನ್ ಟೇಕ್ರಿ ಕುರಿತು ಕೇಳಿಯಾಗಿತ್ತು. ಆದರೆ ಅದೇನು ಅನ್ನುವುದು ಇನ್ನೂ ನಮಗೆ ಚಿದಂಬರ ರಹಸ್ಯವಾಗಿ ಕಾಡುತ್ತಿತ್ತು. ಅಲ್ಲಿಗೆ ಬರುವವರು ತಮಗೆ ಹಿಡಿದ ದೆವ್ವದಿಂದ ಮುಕ್ತಿಯಾಗಲು ದಿನಾ ಕೊಳಕು ನೀರಿನ ಹೊಂಡದಲ್ಲಿ ಸ್ನಾನ ಮಾಡುತ್ತಾರೆ ಎಂದು ಕೇಳಿದ್ದೆವು.
ಹುಸೇನ್ ಟೇಕ್ರಿಗೊಂದು ಬಾರಿ ಭೇಟಿ ನೀಡಿದರೆ ಹೇಗೆ ? ಎನ್ನುವುದು ಮನದಲ್ಲಿ ಸುಳಿದದ್ದೇ ತಡ, ಮಾರನೆ ದಿನ ನಮ್ಮ ಸವಾರಿ ಹುಸೇನ್ ಟೇಕ್ರಿಯಲ್ಲಿ ಹಾಜರ್...
ಹುಸೇನ್ ಟೇಕ್ರಿಯ ವಿಸ್ಮಯ ತಾಣದ ಕುರಿತು ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ಇನ್ನು ಒಳಗೆ ಹೆಜ್ಜೆ ಇಡಬೇಕೊ ಬೇಡವೊ ಅನ್ನೊ ವಿಚಾರ ತಲೆಯಲ್ಲಿ ಹೊಕ್ಕಿತ್ತು. ಅಷ್ಟರಲ್ಲಿ ನಮಗಾಗಿ ಬರೆದ ಸ್ವಾಗತ ಗೀತೆಯ ಥರ... ಅರೆ.... ಬಾಬಾ ರೆ... ಹಾಡಿನೊಂದಿಗೆ ಹಿಮ್ಮೇಳ- ಮುಮ್ಮೇಳಗಳು ಕಿವಿಗೆ ಬಿದ್ದಿದ್ದೆ ತಡ ಒಳನುಗ್ಗಿಯಾಗಿತ್ತು.
ಅಲ್ಲಿ ಜಮುನಾ ಬಾಯಿ ಎಂಬಾಕೆಯ ಹಾಡಿಗೆ ಕೌಸರ್ ಬಿ ಸಾಥ್ ನೀಡುತ್ತಿದ್ದಳು. ಅವರ ಇನ್ನು ಕೆಲವರು ವಿವಿಧ ಲೋಕಗಳ ಪ್ರವಾಸದಲ್ಲಿದ್ದವರಂತೆ, ಏನೋ ಕಳೆದುಕೊಂಡವರಂತೆ, ಅಳುತ್ತಾ, ಚೀರುತ್ತಾ, ತಲೆಯನ್ನು ಜೋರಾಗಿ ಅಲ್ಲಾಡಿಸುತ್ತಾ, ನೆಲದಲ್ಲಿ ಬಿದ್ದು ಹೊರಳಾಡುತ್ತಾ ಇದ್ದರೆ, ಮತ್ತಷ್ಟು ಮಂದಿಯನ್ನು ಸರಪಳಿಯಿಂದ ಬಿಗಿಯಲಾಗಿತ್ತು.
ಜಮುನಾಬಾಯಿಯ ಗಂಡನನ್ನು ಈಕೆಗೆ ಏನಾಗಿದೆ ಎಂದು ಕೇಳಿದೆವು. “ಸುಮಾರು ಎರಡ್ ವಾರದಿಂದ ಹುಚ್ಚಿಯಂಗೆ ಆಡ್ತವಳೆ, ನಮ್ಮೂರ ಫಕೀರ್ ಈ ಅಯ್ಯಮ್ಮಂಗೆ ದೆಯ್ಯ ಹಿಡಕಂಡ್ತೈತೆ, ಹುಸೇನ್ ಟೇಕ್ರಿಗೆ ಕರ್ಕೊಂಡ್ಹೋಗು ಅಂತ ಎಳ್ದ್ರು. ಅದಿಕೆ ಇಲ್ಲಿಗೆ ಬಂದ್ಹೀವಿನಿ. ಇನ್ನು ಅದಿನೈದ್ ದಿನ ಇರ್ಬೇಕು” ಎಂದು ಮುಗಿಸಿದ್ದ. ಅಷ್ಟರಲ್ಲಿ ಜಮುನಾ ಇನ್ನೊಂದು ರಾಗದ ಅಲಾಪನೆ ಶುರು ಮಾಡಿದ್ದಾಗಿತ್ತು.
ದೆವ್ವ ಭೂತಗಳ ಇರುವಿಕೆಯ ಬಗ್ಗೆ ನೀವೇನು ಹೇಳುವಿರಿ? ಇಲ್ಲಿ ಚರ್ಚೆ ಮಾಡಿ.
|