ಮಂದಿರದ ಮುಖ್ಯ ವ್ಯವಸ್ಥಾಪಕ ವಿಶ್ವನಾಥ ಗೆಹ್ಲೊಟ್ ಅವರು ಇಲ್ಲಿ ಸಾಕಷ್ಟು ಅಚ್ಚರಿಯ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳುತ್ತಾರೆ. ಬಾವಿಯಲ್ಲಿ ಸ್ನಾನ ಮಾಡುವುದರಿಂದ ಕಾಯಿಲೆಗಳು, ಅದರಲ್ಲಿ ಮುಖ್ಯವಾಗಿ ಪಾರ್ಶ್ವವಾಯು ರೋಗದಿಂದ ಮುಕ್ತಿ ಪಡೆದಿದ್ದಾರೆ ಎನ್ನುವ ಅವರು, ನವರಾತ್ರಿಯಲ್ಲಿ ಇಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗುತ್ತಿದ್ದು, ಈ ಸಮಯದಲ್ಲಿ ನೂರಾರು ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸುತ್ತಾರೆ ಎನ್ನುತ್ತಾರೆ.
ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈಗ ಬಾವಿಯ ನೀರನ್ನು ಭಕ್ತರು ತಂಗಿರುವ ರೂಮುಗಳಲ್ಲಿನ ಸ್ನಾನ ಗೃಹಗಳಿಗೆ ಟ್ಯಾಂಕ್ ಮೂಲಕ ಪೂರೈಸಲಾಗುತ್ತಿದೆ ಎಂದು ಮಾಡಲಾಗಿರುವ ಬದಲಾವಣೆಯ ಬಗ್ಗೆಯೂ ಅವರು ಹೇಳಿದರು.
ಭಾದ್ವಾ ಮಾತಾ ಮಂದಿರದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
"ಕಳೆದ ಮೂರು ವರ್ಷಗಳಿಂದ ನಾನು ಪಾರ್ಶ್ವವಾಯು ರೋಗದಿಂದ ಬಳಲುತ್ತಿರುವೆ. ಈಗ ಇಲ್ಲಿಗೆ ಬಂದು ಒಂಬತ್ತು ದಿನಗಳಾದವು. ಬಾವಿಯಲ್ಲಿ ಸ್ನಾನ ಮಾಡಿದ ನಂತರ ನಾನು ನನ್ನ ಕಾಲುಗಳ ಮೇಲೆ ನಿಲ್ಲುವಂತಾಗಿದ್ದೇನೆ. ಇನ್ನು ಮೂರು ದಿನ ಇಲ್ಲಿ ಸ್ನಾನ ಮಾಡಿದ ನಂತರ ಸಂಪೂರ್ಣ ಗುಣಮುಖನಾಗುತ್ತೇನೆ” ಎಂದು ನಾವು ಭೇಟಿಯಾದ ಅಂಬಾರಾಮಜಿ ವಿಶ್ವಾಸದಿಂದ ಹೇಳುವುದನ್ನು ಕೇಳಿ ನಮಗೆ ಆಶ್ಚರ್ಯವಾಯಿತು. ಅಂಬಾರಾಮಜಿ ತರಹ ಅಶೋಕ ಎನ್ನುವ ಬಾಲಕ ಕೂಡ ಕೇವಲ ಐದು ದಿನಗಳಲ್ಲಿ ಗುಣಮುಖನಾಗಿದ್ದಾನೆ.
ರಾಧೆಶ್ಯಾಮ ಎನ್ನುವ ಇಲ್ಲಿಯ ಅಂಗಡಿಯ ಮಾಲಿಕ ಸುಮಾರು ದಿನಗಳ ಹಿಂದೆ ಬಾವಿಯ ನೀರನ್ನು ವಿಜ್ಞಾನಿಗಳು ಪರೀಕ್ಷೆ ಮಾಡಲು ತೆಗೆದುಕೊಂಡು ಹೋಗಿರುವುದಾಗಿಯೂ, ಮತ್ತು ನೀರಿನಲ್ಲಿ ರಕ್ತಸಂಚಾರ ವೃದ್ಧಿಸುವ ಅಂಶಗಳಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದೂ ಹೇಳುತ್ತಾನೆ.
ಕಾಯಿಲೆ ಗುಣಪಡಿಸುವಲ್ಲಿ ನಂಬಿಕೆ/ವಿಶ್ವಾಸವೇ ಮುಖ್ಯ ಅನ್ನುತ್ತೀರಾ? ಇಲ್ಲಿ ಚರ್ಚಿಸಿ.
|