ಮದಿರೆ ಸೇವಿಸುವ ವಿಗ್ರಹವನ್ನು ಎಂದಾದರೂ ನೋಡಿದ್ದೀರಾ? ನೋಡಿಲ್ಲದಿರಬಹುದು. ಪ್ರತಿಮೆಯೊಂದು ಮದ್ಯ ಸೇವಿಸುವುದು ಸಾಧ್ಯವೇ? ವಿಗ್ರಹ ಎಂಬುದು ಜೀವವಿಲ್ಲದ ವಸ್ತು ಮತ್ತು ನಿರ್ಜೀವ ವಸ್ತುಗಳಿಗೆ ಹಸಿವು, ಬಾಯಾರಿಕೆಯ ಆಗಲಾರದು ಎಂಬುದು ನಮ್ಮ ಅನುಭವದಿಂದ ತಿಳಿದ ಸಂಗತಿ... ಆದರೆ... ಉಜ್ಜಯಿನಿಯ ಕಾಲಭೈರವನ ಪ್ರತಿಮೆಯು ಇದಕ್ಕೆ ಹೊರತಾದದ್ದು. ಭಕ್ತಾದಿಗಳು ಕಾಲಭೈರವನ ಪ್ರತಿಮೆಗೆ ವೈನ್ ಅರ್ಪಿಸುತ್ತಾರೆ ಮತ್ತು ಅವರ ಎದುರಲ್ಲೇ ಈ ಪ್ರತಿಮೆಯು ಈ ಮದ್ಯವನ್ನು ಸೇವಿಸುತ್ತದೆ!
"ನೀವು ನಂಬುವಿರಾ" ಎಂಬ ಸರಣಿಯ ಅಂಗವಾಗಿ, ಈ ನಿಗೂಢತೆಯ ಹಿಂದಿರುವ ನಿಜಾಂಶವನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸಿದೆವು. ಈ ಕಥೆಯ ಹಿಂದಿರುವ ವಾಸ್ತವಿಕತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ನಾವು ಮಹಾಕಾಲೇಶ್ವರನ (ಈಶ್ವರನ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲೊಂದು) ನಗರಿ ಉಜ್ಜಯಿನಿಯತ್ತ ಪಯಣ ಬೆಳೆಸಿದೆವು. ಇದಕ್ಕೆ ದೇವಾಲಯಗಳ ನಗರಿ ಎಂಬ ಖ್ಯಾತಿಯೂ ಇದೆ. ಆದರೆ ನಮ್ಮ ಗುರಿ ಇದ್ದುದು ಮಹಾಕಾಲೇಶ್ವರ ಮಂದಿರದಿಂದ 5 ಕಿ.ಮೀ. ದೂರದಲ್ಲಿರುವ ಕಾಲಭೈರವನ ಆಲಯ. ನಾವಾಗಲೇ ಮಂದಿರದ ಮುಖ್ಯದ್ವಾರ ತಲುಪಿದ್ದೆವು.
ವೈನ್ ಸೇವಿಸುವ ಕಾಲಭೈರವನ ಮಂದಿರದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ಮಂದಿರದ ಹೊರಗೆ ವೈನ್ ಬಾಟಲಿಗಳು, ಹೂವುಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನಿಟ್ಟಿರುವ ಹಲವು ಅಂಗಡಿಗಳು ಇದ್ದವು. ಕೆಲವು ಭಕ್ತರು ನಮ್ಮೆದುರೇ ಆ ಮಳಿಗೆಗಳಿಂದ ವೈನ್ ಬಾಟಲಿ ಖರೀದಿಸುತ್ತಿದ್ದರು.
ಈ ವಿಷಯದ ಬಗ್ಗೆ ಏನಾದರೂ ವಾಸ್ತವಾಂಶದ ಬಗ್ಗೆ ತಿಳಿದಿದೆಯೇ ಎಂದು ನಾವು ಅಂಗಡಿ ಮಾಲೀಕರಲ್ಲೊಬ್ಬನಾದ ರವಿ ವರ್ಮಾನನ್ನು ಕೇಳಿದೆವು. "ಭಗವಾನ್ ಭೈರವನ ಮಂದಿರಕ್ಕೆ ಬರುವ ಪ್ರತಿಯೊಬ್ಬ ಭಕ್ತರೂ ದೇವರಿಗೆ ವೈನ್ ಅರ್ಪಿಸುತ್ತಾರೆ. ವೈನ್ ತುಂಬಿದ ಪಾತ್ರೆಯನ್ನು ಭೈರವನ ಬಾಯಿಗೆ ಹಿಡಿದಾಗ, ವೈನ್ ಈ ಪಾತ್ರೆಯಿಂದ ಮಾಯವಾಗಲು ಆರಂಭವಾಗುತ್ತದೆ" ಎಂದು ಆತ ಉತ್ತರಿಸಿದ್ದಾನೆ.
ಇಂಥ ಆಚರಣೆ, ನಂಬಿಕೆಗಳ ಬಗ್ಗೆ ನಿಮಗೇನನ್ನಿಸುತ್ತದೆ? ಇಲ್ಲಿ ಚರ್ಚಿಸಿ.
|