ಇಂವ ಫೋನಲ್ಲೇ ಹಾವಿನ ಮಂತ್ರ ಹೇಳುತ್ತಾನೆ!
ರಾಮಭಾಗ್ ಪೊಲೀಸ್ ಸ್ಟೇಷನ್ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಯಶವಂತ್ ಭಾಗವತ್ ಅವರು ಹಾವು ಕಡಿದವರಿಗೆ ಮಂತ್ರ ಮೂಲಕ, ಅದೂ ಪೋನಿನಲ್ಲೇ ಹೇಳುವ ಮೂಲಕ ಚಿಕಿತ್ಸೆ ನೀಡುತ್ತಾರೆ ಎಂಬ ಸುದ್ದಿ ನಮ್ಮ ಕುತೂಹಲವನ್ನು ವಿಶೇಷವಾಗಿ ಕೆರಳಿಸಿತು. ಕಿವಿಗೆ ಬಿದ್ದ ಸುದ್ದಿಗಳ ಸತ್ಯಾಸತ್ಯತೆ ಓದುಗ ಮಹಾಪ್ರಭುವಿಗೆ ಬಿಟ್ಟ ವಿಚಾರ. ಆದರೂ ನಾವು ಕಣ್ಣಾರೆ ಕಂಡ ಘಟನೆಯ ವಿವರ ಇಲ್ಲಿ ನೀಡುತ್ತಿದ್ದೇವೆ.
ನಾವು ರಾಮಭಾಗ್ ಪ್ರದೇಶಕ್ಕೆ ಹೋದ ಮೇಲೆ ಗೊತ್ತಾಗಿದ್ದು ಈ ವ್ಯಕ್ತಿ ಒಬ್ಬ ಪೊಲೀಸ್ ಸಿಬ್ಬಂದಿ ಎಂದು. ಕಳೆದ 25 ವರ್ಷದಿಂದ ಸರಕಾರಿ ಸೇವೆಯಲ್ಲಿರುವ ಯಶವಂತ್ ಭಾಗವತ್ ಹೇಳುವಂತೆ, ಹಾವು ಕಡಿದ ವ್ಯಕ್ತಿಯ ಕಿವಿಯಲ್ಲಿ ನಿರ್ದಿಷ್ಟ ಸಂಸ್ಕೃತ ಶ್ಲೋಕಗಳನ್ನು ಉಸುರುವ ಮೂಲಕ ಹಾವು ಕಡಿದ ವ್ಯಕ್ತಿಯನ್ನು ಗುಣಮುಖವಾಗಿಸಬಹುದು.
ಯಶವಂತ್ ಭಾಗವತ್ ಫೋನ್ ಚಿಕಿತ್ಸಾ ವಿಧಾನದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ...
ಅಷ್ಟರಲ್ಲಿ ಪೋನು ರಿಂಗಾಯಿತು. ಅಲ್ಲದೆ ನಮಗೂ ಕೂಡ ಆ ವ್ಯಕ್ತಿ ಪೋನಿನಲ್ಲಿ ಹಾವು ಕಡಿತಕ್ಕೆ ಯಾವ ರೀತಿ ಉಪಚರಿಸುತ್ತಾರೆಂಬುದನ್ನು ಕಣ್ಣಾರೆ ಕಾಣುವ ಅವಕಾಶ ಸಿಕ್ಕಿತು. ಮೊದಲು ಅವರು ರೋಗಿಯ ತಾಯಿಯ ಹೆಸರು ಹಾಗೂ ಸಂಪೂರ್ಣ ವಿಳಾಸ ಕೇಳಿದರು. ಆಮೇಲೆ ಕೆಲ ಸಂಸ್ಕೃತ ವಾಕ್ಯಗಳನ್ನು ಪೋನಿನಲ್ಲಿ ಉಸುರಿದರು. ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂಬುದು ಗಮನಕ್ಕೆ ಬಂದ ಮೇಲೆ ತೆಂಗಿನ ಕಾಯಿಯನ್ನು ಒಡೆಯಲು ತಿಳಿಸಿದರು. ಬಳಿಕ ಆ ವ್ಯಕ್ತಿಗೆ ಸ್ವಲ್ಪ ಉಪ್ಪು ತಿನ್ನುವಂತೆ ಹೇಳಿದ್ದು ರೋಗಿಗೆ ಉಪ್ಪಿನ ರುಚಿಯ ಅನುಭವಕ್ಕೆ ಬಂದ ಮೇಲೆ ರೋಗಿ ಗುಣಮುಖವಾಗಿರುವುದಾಗಿ ಖಾತ್ರಿಯಾಯಿತೆಂದು ಯಶವಂತ್ ತಾನು ರೋಗಿಗಳನ್ನು ಉಪಚರಿಸುವ ರೀತಿಯನ್ನು ವಿವರಿಸಿದರು.
ಯಶವಂತ್ ಅವರ ಚಿಕಿತ್ಸೆಯಿಂದ ಗುಣವಾದ ಸರ್ಮಾನ್ ಎನ್ನುವ ವ್ಯಕ್ತಿಯ ಅನುಭವವನ್ನು ಅವರ ಮಾತಲ್ಲೇ ಕೇಳೋಣ. “ಒಂದು ದಿನ ಮನೆ ಸ್ವಚ್ಚಗೊಳಿಸುತ್ತಿದ್ದ ಸಮಯದಲ್ಲಿ ನನ್ನ ಎರಡೂ ಕಾಲಿಗೆ ಹಾವು ಕಡಿಯಿತು. ನಾನು ತಕ್ಷಣ ಯಶವಂತ್ ಭಾಗವತ್ಜೀ ಅವರ ಬಳಿ ತೆರಳಿದ್ದು, ಅವರು ಕೆಲವೇ ನಿಮಿಷಗಳಲ್ಲಿ ನನ್ನನ್ನು ಗುಣಪಡಿಸಿದರು” ಎಂದು ವಿವರ ನೀಡಿದರು.
ಹಾವು ಕಡಿತದಿಂದ ವಿಷವೇರಿದ ವ್ಯಕ್ತಿಯನ್ನು ದೂರವಾಣಿ ಮೂಲಕ ಮಾತನಾಡುತ್ತಾ ಗುಣಪಡಿಸಬಹುದು ಎಂಬ ವಿಷಯದ ಬಗ್ಗೆ ನೀವೇನನ್ನುತ್ತೀರಿ? ಇಲ್ಲಿ ಚರ್ಚಿಸಿ.
|