WD ರಹಸ್ಯ, ರೋಚಕತೆಯ ಅದ್ಭುತ ಪಯಣ ನಮ್ಮನ್ನು ಸುತ್ತಾಡಿಸುತ್ತಾ ಕೊನೆಗೆ ಮಧ್ಯಪ್ರದೇಶದ ಉಜ್ಜಯಿನಿ ಬಳಿ ಇರುವ ಒಂದು ಕುಗ್ರಾಮಕ್ಕೆ ತಂದು ನಿಲ್ಲಿಸಿದೆ. ವೈದ್ಯ ವಿಜ್ಞಾನಕ್ಕೆ ಸವಾಲೆಸೆಯುವ ರೀತಿಯಲ್ಲಿ ಈ ಗ್ರಾಮದ ವೃದ್ಧೆಯೊಬ್ಬಳು ರೋಗಿಯ ದೇಹದಲ್ಲಿ ಅಡಗಿರುವ ಕಲ್ಲುಗಳನ್ನು ತನ್ನ ಬಾಯಿಯಿಂದ ಹೊರತೆಗೆಯುತ್ತಾಳೆ ಎಂದು ಕೇಳಿದ್ದೆವು.ಇತ್ತ ನಂಬುವಂತೆಯೂ ಇಲ್ಲ, ಅತ್ತ ಬಿಡುವಂತೆ ಕೂಡ ಇಲ್ಲ. ಸರಿ ಪರೀಕ್ಷೆ ಮಾಡಿಯೇ ಬಿಡೋಣ ಎಂದು ತೀರ್ಮಾನಿಸಿ ನಾವು ಈ ಪ್ರಯಾಣ ಆರಂಭಿಸಿದ್ದೆವು.ಕಿಡ್ನಿ ಕಲ್ಲುಗಳನ್ನು ಬಾಯಿಯಿಂದಲೇ