ಜನ್ಮಕುಂಡಲಿಯಲ್ಲಿನ ಗ್ರಹಗತಿಗಳು ವ್ಯಕ್ತಿಯ ಶ್ರೇಯಸ್ಸಿಗೆ ಧಕ್ಕೆ ತರಲು ಸಾಧ್ಯವೇ ? ವ್ಯಕ್ತಿಯನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿ ಜೀವನದಲ್ಲಿ ಜರ್ಜರಿತನನ್ನಾಗಿ ಮಾಡುತ್ತವೆಯೆ ? ಇಂತಹ ವಿಚಾರಗಳ ಕುರಿತು ಮಾತನಾಡುವುದು ಆಗಲಿ ಅಭಿಪ್ರಾಯ ವ್ಯಕ್ತಪಡಿಸುವುದು ಆಗಲಿ ಸಾಧ್ಯವಿಲ್ಲದ ಮಾತು. ಕೆಲವರು ಇದು ಶುದ್ದ ಸುಳ್ಳು ಎಂದು ವಾದಿಸಬಹುದು. 21 ನೇ ಶತಮಾನದಲ್ಲಿ ಇದ್ದರೂ ಸಾವಿರಾರು ಜನರು ಗ್ರಹದೋಷಗಳನ್ನು ನಂಬುತ್ತಾರೆ.ಅಂತಹ ನಂಬಿಕೆಯಲ್ಲಿ ಕಾಲಸರ್ಪ ಯೋಗವೂ ಒಂದು.
ನಂಬಿಕೆ, ಅಪನಂಬಿಕೆಗಳ ನಡುವೆ ಸಾಗುತ್ತಿರುವ ನಮ್ಮ ಪಯಣ ಸದ್ಯ ತ್ರ್ಯಂಬಕೇಶ್ವರ ಎಂಬ ಗ್ರಾಮಕ್ಕೆ ಬಂದು ನಿಂತಿದೆ. ಮಹಾರಾಷ್ಟ್ರದ ನಾಸಿಕ್ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಗ್ರಾಮ ಕಾಲ ಸರ್ಪ ಯೋಗ ವಿಮೋಚನೆಗೆ ಪ್ರಸಿದ್ದಿ ಪಡೆದಿದೆ ಎಂಬ ಪ್ರತೀತಿ ಇದೆ. ಗ್ರಾಮಕ್ಕೆ ತೆರಳಿ ಅಲ್ಲಿ ನಡೆಯುವ ಸರ್ಪದೋಷ ವಿಮೋಚನೆಗಳನ್ನು ಕಣ್ಣಾರೆ ಕಾಣಬೇಕು ಎಂಬ ಉತ್ಸಾಹ ಮೇಲಾಗಿ ತಣಿಯದ ಕುತೂಹಲ ನಮ್ಮನ್ನಿಂದು ತ್ರ್ಯಂಬಕ ಗ್ರಾಮಕ್ಕೆ ಬರುವಂತೆ ಮಾಡಿದೆ. ಗ್ರಾಮಕ್ಕೆ ಹೋಗುವುದಕ್ಕೆ ಎಂದು ನಾವು ಟ್ಯಾಕ್ಸಿಗೆ ಕಾಯುತ್ತಿದ್ದೆವು. ಅಲ್ಲಿಗೆ ಬಂದ ಒಂದು ಟ್ಯಾಕ್ಸಿಯನ್ನೇರಿ ತ್ರ್ಯಂಬಕದತ್ತ ಸಾಗಿತು ನಮ್ಮ ನಂಬಿಕೆ, ಅಪನಂಬಿಕೆಗಳ ಪಯಣ
ಟ್ಯಾಕ್ಸಿ ಡ್ರೈವರ್ ಗಣಪತ್ ವಾಚಾಳಿ ಬಾಯಿಗೆ ಬಂದದ್ದು ಬಡಬಡಿಸುತ್ತ ನೀವೆಲ್ಲಿಂದ ಬಂದಿದ್ದಿರಾ? ಏನು ಸಮಸ್ಯೆ? ನಾರಾಯಣ ನಾಗಬಲಿ ಮಾಡಿಸುತ್ತೀರಾ ? ಪೂಜಾರಿಯನ್ನು ಗೊತ್ತು ಮಾಡಿದ್ದೀರಾ ? ಇಲ್ಲದೇ ಇದ್ದರೆ ನನಗೆ ಗೊತ್ತಿರುವವರು ಒಬ್ಬರು ಇದ್ದಾರೆ. ಅವರ ಬಳಿ ಕರೆದುಕೊಂಡು ಹೊಗುತ್ತೇನೆ. ಈ ಎಲ್ಲ ಮಾತುಗಳಿಗೆ ನಮ್ಮದು ಒಂದೇ ಉತ್ತರ ಅದು ಮೌನ.
ತ್ರ್ಯಂಬಕೇಶ್ವರ ಮಂದಿರದಲ್ಲಿ ಕಾಳಸರ್ಪದೋಷ ನಿವಾರಣೆ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ. ಇಲ್ಲಿಗೆ ಪ್ರತಿವರ್ಷ ಸಾವಿರಾರು ಜನರು ಸರ್ಪ ದೋಷ ನಿವಾರಣೆಗೆ ಬರುತ್ತಾರೆ ಎಂದೂ ಹೇಳಿದ. ಅವನ ಮಾತಿಗೆ ಕೊನೆ ಅಂತೂ ಇರಲಿಲ್ಲ. ಪಯಣಕ್ಕೂ ಅಂತ್ಯ ಇಲ್ಲದೆ ನಮಗೆ ಬೇಕಿದ್ದ ತ್ರ್ಯಂಬಕ ಬಂದಿತು. ಗಣಪತ್ಗೆ ಬಾಡಿಗೆಯನ್ನು ನೀಡಿ ಅವನ ಕೊರೆತದಿಂದ ಅಂತೂ ಮುಕ್ತಿ ಪಡೆದು ದೇವಸ್ಥಾನದ ಪ್ರಾಂಗಣಕ್ಕೆ ಕಾಲಿಟ್ಟೆವು. ಇಡೀ ವಾತಾವರಣ ಮಹಾಮೃತ್ಯುಂಜಯ ಮಂತ್ರ ಮತ್ತು ಶಿವಸ್ತುತಿಗಳಿಂದ ಪ್ರತಿಧ್ವನಿಸುತ್ತಿತ್ತು. ಹತ್ತಿರದಲ್ಲಿ ಇದ್ದ ಕುಶ್ವರತ್ ತೀರ್ಥದಲ್ಲಿ ಮಿಂದ ಭಕ್ತರು ಮತ್ತು ದೋಷ ಪರಿಹಾರಕ್ಕೆ ಎಂದು ಬಂದವರು ಶುಭ್ರ ವಸ್ತ್ರ ಧರಿಸಿ ಕಾಲ ಸರ್ಪ ಯೋಗ ಪೂಜೆಗೆ ಸನ್ನದ್ದರಾಗುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಅಕ್ಷರಸ್ಥ ಜನರೇ ಹೆಚ್ಚಾಗಿ ಅತಿಲೌಕಿಕ ವಿಷಯಗಳತ್ತ ಆಕರ್ಷಿತರಾಗುತ್ತಿದ್ದಾರೆ. ಈ ಕುರಿತು ನೀವೇನು ಹೇಳುವಿರಿ? ಇಲ್ಲಿ ಚರ್ಚಿಸಿ.
|