WDWD ಕೆಲವರಿಗೆ ಕಾರಿರುಳ ರಾತ್ರಿಯ ಪಯಣಗಳು ರೋಚಕ ಅನುಭವ ನೀಡುತ್ತವೆ. ಇನ್ನು ಕೆಲವರಿಗೆ ಸಾಧನೆಯಲ್ಲಿ ಸಾಗಿ ತಮ್ಮ ಗುರಿ ಮುಟ್ಟಲು ನಟ್ಟಿರುಳ ರಾತ್ರಿಯಲ್ಲಿ ಸ್ಮಶಾನದ ಶವಗಳೇ ಬೇಕು. ಇಷ್ಟಾರ್ಥ ಸಿದ್ದಿಗಾಗಿ ನಡೆಯುವ ಈ ಚಿದಂಬರ ರಹಸ್ಯದ ಸಾಧನೆಗಳು ನಿಜವಾಗಿ ಪ್ರಕೃತಿ ಮತ್ತು ದೇವರನ್ನು ತೃಪ್ತಿಗೊಳಿಸಬಲ್ಲವೇ ಎನ್ನುವ ಪ್ರಶ್ನೆಗೆ ಉತ್ತರವಂತೂ ಇನ್ನೂ ನಮಗೆ ಸಿಕ್ಕಿಲ್ಲ. ಆದರೆ ಅಂತಹ ಸಾಧನೆಯೊಂದನ್ನು ನೋಡುವ ಅವಕಾಶದಲ್ಲಿ ರೋಮಾಂಚನ ಅನುಭವಿಸಿದ ಪ್ರಸಂಗವೊಂದು ನಮಗೆ ಎದುರಾಗಿತ್ತು ! ಇಲ್ಲಿ