ಎಲ್ಲ ಶಿವ ಮಹಿಮೆ ! ಭಾರತದಲ್ಲಿ ಯಾವುದೋ ಏನೇನು ಆಗುತ್ತದೋ... ಎಲ್ಲವೂ ಆಧ್ಯಾತ್ಮದ ತಳಹದಿಯ ಮೇಲೆ ನಿಂತಿರುತ್ತದೆ. ವಿಜ್ಞಾನ ಕೂಡ ಭಾರತೀಯರಿಗೆ ಆಧ್ಯಾತ್ಮ. ಭಗವಂತನ ಲೀಲೆ.
ಕೇವಲ ಯೋಗದಿಂದ ರೋಗಗಳನ್ನು ಗುಣಪಡಿಸಬಲ್ಲೆ ಎಂದು ಹೇಳುವವರು ಇದ್ದಾರೆ. ಅಂತಹವರಲ್ಲಿ ಕೆಲವರು ರೋಗಿಗಳಿಗೆ ಮೋಸ ಮಾಡಿದ ಉದಾಹರಣೆಯೂ ಇದೆ. ಏಡ್ಸ್, ಕ್ಯಾನ್ಸರ್ ಕೂಡ ಗುಣಪಡಿಸಬಲ್ಲೆ ಎಂದು ಹೇಳುವ ವ್ಯಕ್ತಿಯೊಬ್ಬನನ್ನು ನಿಮಗೆ ನಮ್ಮ ತಂಡ ಪರಿಚಯಿಸುತ್ತಿದೆ. ನಂಬುವುದು ಬಿಡುವುದು ನಿಮಗೇ ಬಿಟ್ಟ ವಿಷಯ.
ಈ ಕುರಿತ ಮಾಹಿತಿ ಫೋಟೋ ಗ್ಯಾಲರಿ ಇಲ್ಲಿದೆ ಕ್ಲಿಕ್ಕಿಸಿ.
ತ್ರ್ಯಂಬಕೇಶ್ವರ ಪ್ರವಾಸದ ಸಮಯದಲ್ಲಿ ಈ ಬಗ್ಗೆ ವಿಷಯ ತಿಳಿಯಿತು - ಇಲ್ಲೊಬ್ಬ ಬಾಬಾ ಇದ್ದಾನೆ, ಅವನ ಕೈಯಲ್ಲಿ ಹರಳೊಂದು ಸ್ಟೆತೋಸ್ಕೋಪ್ ಅವತಾರ ತಾಳುತ್ತದೆ ಅಂತ... ಸರಿ.. ಹರಳು ಬಾಬಾನನ್ನು ಹುಡುಕಿಕೊಂಡು ಯಥಾರೀತಿ ನಮ್ಮ ಪಯಣ ಸಾಗಿತು. ರಘುನಾಥ್ ಬಾಬಾ ಅಲಿಯಾಸ್, ಉರ್ಫ್ ಫಾರ್ಸಿವಾಲೇ ಬಾಬಾ ಇರುವುದು ನಾಸಿಕ್-ತ್ರ್ಯಂಬಕ ರಸ್ತೆಯಲ್ಲಿರುವ ಒಂದು ಹಳ್ಳಿಯಲ್ಲಿ.
ಗಿಡಮೂಲಿಕೆಗಳಿಂದ ಏಡ್ಸ್, ಕ್ಯಾನ್ಸರ್ ಗುಣಪಡಿಸಬಹುದು ಎಂಬ ವಾದವನ್ನು ನೀವು ಒಪ್ಪುತ್ತೀರಾ? ಇಲ್ಲಿ ಚರ್ಚಿಸಿ.
|