ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೋರವಾಡ ಜಾತ್ರೆಯ ದೆವ್ವಗಳು
WD
ಭಾರತದ ಆತ್ಮವು ಗ್ರಾಮಗಳಲ್ಲಿ ಅಡಗಿದೆ. ಗ್ರಾಮಗಳು ಮೇಳಗಳು ಅಥವಾ ಜಾತ್ರೆಗಳಿಗೆ ಸುಪ್ರಸಿದ್ಧವಾಗಿವೆ. ಮೇಳಗಳು ಸಾಮಾನ್ಯವಾಗಿ ಒಂದೇ ಸ್ವರೂಪದ್ದಾಗಿರುತ್ತದೆ. ಜನರು ಮೇಳಗಳಲ್ಲಿ ಖರೀದಿಸುವಿಕೆ ಮತ್ತು ವಿವಿಧ ಬಗೆಯ ಮನರಂಜನೆಗಳಲ್ಲಿ ಸಂತೋಷಪಡುತ್ತಾರೆ. ಆದರೆ ಕೆಲವು ಮೇಳಗಳು ಮಾಮೂಲಿ ಮೇಳಗಳಿಗಿಂತ ಭಿನ್ನವಾಗಿರುತ್ತದೆ ಮತ್ತು ಜನರ ಗಮನವನ್ನು ಅಪಾರವಾಗಿ ಸೆಳೆಯುತ್ತದೆ.

ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ಪ್ರಸಂಗದಲ್ಲಿ ನಾವು ಮೇಳಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಎಲ್ಲ ವಿನೋದಗಳ ನಡುವೆ ಭೂತಗಳು ಸಹ ಗೋಚರಿಸುವ ಮೇಳಕ್ಕೆ ನಿಮ್ಮನ್ನು ಕರೆದೊಯ್ಯಲು ಇಚ್ಛಿಸುತ್ತೇವೆ. ನಂಬುವುದು ಕಷ್ಟವೆನಿಸುತ್ತಿದೆಯೇ...ಆದರೆ ಇದು ನಿಜ. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಚೋರವಾಡ ಗ್ರಾಮದಲ್ಲಿ ಇಂತಹ ಒಂದು ಮೇಳವನ್ನು ಆಯೋಜಿಸಲಾಗುತ್ತದೆ.

ಪ್ರತಿವರ್ಷ ದತ್ತಜಯಂತಿಯ ದಿವಸ ಭೂತಗಳ ಮೇಳ ಇಲ್ಲಿ ಆಯೋಜಿಸಲಾಗುತ್ತದೆ. ದತ್ತಜಯಂತಿಯ ದಿವಸ ಪ್ರೇತಾತ್ಮದ ಪ್ರಭಾವಕ್ಕೆ ಒಳಗಾದ ಜನರು ಸ್ವಯಂಪ್ರೇರಿತರಾಗಿ ಈ ಸ್ಥಳಕ್ಕೆ ಆಗಮಿಸುತ್ತಾರೆಂಬ ನಂಬಿಕೆ ಬೇರೂರಿದೆ. ಈ ಜನರು ಇಲ್ಲಿಗೆ ಭೇಟಿ ನೀಡಿದ ಕೂಡಲೇ ಅವರನ್ನು ಹಿಡಿದ ಭೂತ ಬಿಟ್ಟುಹೋಗುತ್ತದೆ ಎಂದು ನಂಬಲಾಗಿದೆ.
WD

ಈ ವಿಷಯವನ್ನು ಕೇಳಿದ ನಾವು ಜಲಗಾಂವ್‌ನ ಚೋರವಾಡ ಗ್ರಾಮದತ್ತ ಪ್ರಯಾಣ ಆರಂಭಿಸಿದೆವು. ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಕೆಲವು ಜನರ ಗುಂಪುಗಳು ನಮ್ಮ ಕಣ್ಣಿಗೆ ಬಿದ್ದವು. ಪ್ರತಿಯೊಂದು ಗುಂಪಿನಲ್ಲಿ ರೋಗಗ್ರಸ್ಥರಂತೆ ಕಾಣಿಸಿದ ಒಬ್ಬಿಬ್ಬರು ಜನರಿದ್ದರು. ನಾವು ಗುಂಪಿನ ಜನರನ್ನು ಮಾತಿಗೆಳೆದಾಗ ರೋಗಗ್ರಸ್ಥರು ಪ್ರೇತಾತ್ಮಗಳ ಪ್ರಭಾವಕ್ಕೆ ಒಳಗಾಗಿದ್ದು ಅವರನ್ನು ಜಾತ್ರೆಗೆ ಕರೆದೊಯ್ಯುತ್ತಿರುವುದಾಗಿ ಅವರ ಜತೆಗಾರರು ಉತ್ತರಿಸಿದರು.
ವೀಡಿಯೋ ವೀಕ್ಷಿಸಿ
  1 | 2  >> 
ಫೋಟೋಗ್ಯಾಲರಿ
ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಸೊಲೊಮನ್‌ನ ಲಾಡ್ಜ್‌ನ ನಿಗೂಢ ರಹಸ್ಯ  
ಸಂತಾನ ಕರುಣಿಸುವ ಅಂಬಾವಳಿ ಮಾತೆ  
ಮಾನವ ಬದುಕಿನ ಮೇಲೆ ಗುರುವಿನ ನೆರಳು  
ಇಲ್ಲಿ ರಾತ್ರಿ ತಂಗಿದರೆ ಬೆಳಿಗ್ಗೆ ಅಧಿಕಾರ ಭಂಗ!  
ತ್ರಿಶೂಲ ಬಾಬಾನೂ ಮತ್ತು ಆಪರೇಷನ್ನೂ  
ಚೂರಿಯಿಂದ ಗೀರಿ ಏಡ್ಸ್ ಗುಣಮಾಡ್ತೀನಿ ಅಂತಾನೆ...!