ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಗವಾನ್ ಈಶ್ವರನ ಜೈಲು
WD
ನಂಬಿದರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ ಈ ಬಾರಿ ನಾವು ನಿಮಗೆ ವಿಚಿತ್ರ ಜೈಲು ಮತ್ತು ಆ ಜೈಲಿನಲ್ಲಿರುವ ಕೈದಿಗಳನ್ನು ಪರಿಚಯಿಸುತ್ತಿದ್ದೇವೆ. ಈ ಜೈಲನ್ನು ಮಹದೇವನ ಜೈಲೆಂದು ಕರೆಯುವುದರಿಂದ ವಿಚಿತ್ರ ಜೈಲೆನಿಸಿದೆ. ನೂರಕ್ಕೂ ಹೆಚ್ಚು ಕೈದಿಗಳಿಗೆ ಈ ಜೈಲು ವಾಸಸ್ಥಳವಾಗಿದೆ.

ಆದರೆ ದುಷ್ಕರ್ಮಗಳಿಗೆ ಶಿಕ್ಷೆ ಪಡೆದು ಬಂಧಿತರಾಗಿರುವ ಕೈದಿಗಳು ಇವರಲ್ಲ. ಅವರು ಮಾಡಿದ ಪಾಪಗಳು ಕಾಯಿಲೆಗಳ ಸ್ವರೂಪದಲ್ಲಿ ಕಾಣಿಸಿಕೊಂಡು ಆ ಪಾಪಗಳಿಂದ ಪ್ರಾಯಶ್ಚಿತ ಹೊಂದಲು ಕೈದಿಗಳಾಗಿದ್ದಾರೆ ಎಂಬ ನಂಬಿಕೆ ಇಲ್ಲಿ ಬೇರೂರಿದೆ.

ಮಧ್ಯಪ್ರದೇಶದ ನೀಮಚ್ ನಗರದ ಬಳಿಯಿರುವ ಈ ಜೈಲಿನ ಖ್ಯಾತಿ ನಮಗೂ ತಲುಪಿ, ಅಲ್ಲಿಗೆ ತೆರಳಲು ತಕ್ಷಣವೇ ಯೋಜಿಸಿದೆವು. ನಾವು ಅಲ್ಲಿಗೆ ತೆರಳಿದಾಗ ಕಂಬಿಗಳ ಒಳಗೆ ಒಳಗೆ ಅನೇಕ ಮಂದಿ ಕೈದಿಗಳಿರುವುದನ್ನು ಕಂಡು ನಾವು ಆಶ್ಚರ್ಯಚಕಿತರಾದೆವು. ಕೈದಿಗಳಲ್ಲೊಬ್ಬನನ್ನು ಪ್ರಶ್ನಿಸಿದಾಗ ತಾನು ಕಾಯಿಲೆಯಿಂದ ನರಳುತ್ತಿದ್ದು, ಅದರಿಂದ ಚೇತರಿಸಿಕೊಂಡ ಬಳಿಕ ಭಗವಾನ್ ಈಶ್ವರನ ಪೂರ್ವಾನುಮತಿಯೊಂದಿಗೆ ತನ್ನ ಊರಿಗೆ ಹಿಂತಿರುಗುವುದಾಗಿ ಹೇಳಿದ. ಅವನಂತೆ ಇನ್ನೂ ಅನೇಕ ಮಂದಿ ಕೈದಿಗಳು ಜೈಲಿನ ಒಳಗೆ ಬಂದಿಯಾಗಿದ್ದರು. ಅವರೆಲ್ಲರೂ ಭಗವಾನ್ ಶಿವನ ಭಕ್ತಿಯಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿದ್ದರು. ತಮ್ಮ ದೇಹಗಳಿಗೆ ಮಣ್ಣನ್ನು ಮೆತ್ತಿಕೊಂಡಿದ್ದ ಅವರು ದೇವಸ್ಥಾನದ ಆವರಣದಲ್ಲಿ, ಶಿವನ ಹೆಸರನ್ನು ಗಟ್ಟಿಧ್ವನಿಯಲ್ಲಿ ಪಠಿಸುವ “ಶಿವನಾದ”ದಲ್ಲಿ ಭಾಗವಹಿಸಿದ್ದರು.

WD
ಸ್ವಯಂ ಉದ್ಭವವಾಗಿದೆಯೆಂದು ನಂಬಲಾಗಿರುವ ತಿಲಿಸಾವ ಮಹದೇವ್ ಎಂಬ ಶಿವಲಿಂಗ ಅಲ್ಲಿ ನೆಲೆಯಾಗಿದೆ. ಸ್ಥಳೀಯ ನಿವಾಸಿಯೊಬ್ಬರು ಹೇಳುವ ಪ್ರಕಾರ ಈ ದೇವಸ್ಥಾನವು 2000 ವರ್ಷಗಳಷ್ಟು ಪ್ರಾಚೀನ ಕಾಲದ್ದು. ಗಂಗಾ ನದಿಯ ಮೂಲವೆಂದು ಸ್ಥಳೀಯವಾಗಿ ನಂಬಿರುವ ಕೊಳವೊಂದು ದೇವಸ್ಥಾನದ ಆವರಣದಲ್ಲಿದೆ.

WD
ಈ ಕೊಳದಲ್ಲಿರುವ ಮಣ್ಣು ಯಾವುದೇ ಕಾಯಿಲೆಯನ್ನಾದರೂ ಗುಣಪಡಿಸುತ್ತದೆಂದು ಜನರು ನಂಬಿದ್ದಾರೆ ಮತ್ತು ಚಿಕಿತ್ಸೆಗೆ ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಅವರು ಅನುಸರಿಸಬೇಕಾಗುತ್ತದೆ. ಕಾಯಿಲೆಗಳ ರೂಪದಲ್ಲಿ ಕಾಣಿಸಿಕೊಂಡಿರುವ ತಮ್ಮ ಪಾಪಗಳನ್ನು ತೊಳೆಯಲು ಜನರು ಇಲ್ಲಿ ಕೈದಿಗಳಂತೆ ವಾಸ್ತವ್ಯ ಮಾಡಬೇಕಾಗಿದೆ.
ವೀಡಿಯೋ ವೀಕ್ಷಿಸಿ
  1 | 2  >> 
ಫೋಟೋಗ್ಯಾಲರಿ
ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಚೋರವಾಡ ಜಾತ್ರೆಯ ದೆವ್ವಗಳು  
ಸೊಲೊಮನ್‌ನ ಲಾಡ್ಜ್‌ನ ನಿಗೂಢ ರಹಸ್ಯ  
ಸಂತಾನ ಕರುಣಿಸುವ ಅಂಬಾವಳಿ ಮಾತೆ  
ಮಾನವ ಬದುಕಿನ ಮೇಲೆ ಗುರುವಿನ ನೆರಳು  
ಇಲ್ಲಿ ರಾತ್ರಿ ತಂಗಿದರೆ ಬೆಳಿಗ್ಗೆ ಅಧಿಕಾರ ಭಂಗ!  
ತ್ರಿಶೂಲ ಬಾಬಾನೂ ಮತ್ತು ಆಪರೇಷನ್ನೂ