ಅವರ ಕಾರಾಗೃಹವಾಸ ಮುಗಿದ ಬಳಿಕ ಭಗವಾನ್ ಶಿವನು ಅವರನ್ನು ಆರೋಗ್ಯವಂತರನ್ನಾಗಿ ಮಾಡುತ್ತಾನೆಂದು ಜನರ ನಂಬಿಕೆಯಾಗಿದೆ.ಕಾಯಿಲೆಯಿಂದ ಮುಕ್ತಿ ಹೊಂದಲು ಮೊದಲಿಗೆ ರೋಗಿ(ಮಾನಸಿಕ ಸಮಸ್ಯೆಗಳಿಂದ ನರಳುವ ರೋಗಿಗಳೇ ಹೆಚ್ಚು) ದೇವಸ್ಥಾನದ ಆಡಳಿತ ವರ್ಗಕ್ಕೆ ಮನವಿ ಪತ್ರ ಕಳಿಸುತ್ತಾನೆ. ಅವನ ಮನವಿಗೆ ಒಪ್ಪಿಗೆ ಸೂಚಿಸಿದ ಬಳಿಕ ಆಡಳಿತಮಂಡಳಿಯು ಅವನಿಗೆ ಬ್ಯಾಡ್ಜ್ ಸಂಖ್ಯೆ ನೀಡುತ್ತದೆ. ಅವನ ಊಟ, ತಿಂಡಿಗಳ ಖರ್ಚನ್ನು ಆಡಳಿತವರ್ಗನಿಭಾಯಿಸುತ್ತದೆ.. ಕೈದಿ ಕೊಳದಲ್ಲಿ ಪ್ರತಿನಿತ್ಯ ಸ್ನಾನಮಾಡಬೇಕೆಂಬ ನಿಯಮವಿದೆ. ಸ್ನಾನವಾದ ಬಳಿಕ ಭಾರವಾದ ಕಲ್ಲನ್ನು ತಲೆಯ ಮೇಲೆ ಹೇರಿಕೊಂಡು ದೇವಸ್ಥಾನದ ಸುತ್ತ ಐದು ಸುತ್ತುಬರಬೇಕು. ದೇವಸ್ಥಾನದ ಆವರಣವನ್ನು ಚೊಕ್ಕಟವಾಗಿಡುವುದು ಕೂಡ ಕೈದಿಗಳ ಜವಾಬ್ದಾರಿಯಾಗಿದೆ.
ಈ ರೀತಿಯಾಗಿ ಕೈದಿಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಬಂದೀಖಾನೆಯಲ್ಲಿ ಕಳೆಯುತ್ತಾರೆ. ಭಗವಾನ್ ಶಿವ ಕೈದಿಯ ಕನಸಿನಲ್ಲಿ ಕಾಣಿಸಿಕೊಂಡು ಅವನು ರೋಗಮುಕ್ತನಾಗಿದ್ದಾನೆಂದು ಆದೇಶಿಸಿದ ಕೂಡಲೇ ಕೈದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆಡಳಿತವರ್ಗದ ಅಧಿಕಾರಿಗೆ ಕೂಡ ಇದೇ ರೀತಿಯ ಕನಸು ಕಾಣಿಸಿಕೊಂಡಾಗ ಮಾತ್ರ ರೋಗಿಯ ಬಿಡುಗಡೆಗೆ ಕಾಗದಪತ್ರಗಳನ್ನು ಸಿದ್ಧಪಡಿಸುತ್ತಾರೆ. ಆಗ ಮಾತ್ರ ರೋಗಿ ನಿರೋಗಿಯೆನಿಸಿಕೊಂಡು ಜೈಲಿನಿಂದ ಬಂಧಮುಕ್ತನಾಗುತ್ತಾನೆ.
ಇಡೀ ಪ್ರಕ್ರಿಯೆ ಅಸ್ವಾಭಾವಿಕ ಎಂಬಂತೆ ನಮಗೆ ಕಂಡುಬಂತು. ಅದನ್ನು ನಂಬುವುದೇ ಕಷ್ಟವೆನಿಸಿತು. ಆದರೆ ತಮ್ಮ ಸ್ವಂತ ಬಂಧುಗಳು ಈ ಜೈಲಿಗೆ ಸೇರಿದ ಬಳಿಕ ಗುಣಮುಖರಾಗಿದ್ದಾರೆಂದು ಕೆಲವು ಜನರು ಹೇಳಿದಾಗ ನಂಬುವುದೋ, ಬಿಡುವುದೋ ಎಂಬ ಸಂದಿಗ್ಧಕ್ಕೆ ನಾವು ಸಿಲುಕಿದೆವು. ನೀವು ಈ ಬಗ್ಗೆ ಏನು ಅಭಿಪ್ರಾಯ ತಳೆದಿದ್ದೀರಿ, ಇದನ್ನು ನಿಜವಾಗಲೂ ನಂಬುವಿರಾ... ನಮಗೆ ಬರೆದುಕಳಿಸಿ.
|