ಈ ಬಾರಿಯ ನಂಬಿಕೆಯ ಅಪನಂಬಿಕೆಯ ಪಯಣದಲ್ಲಿ ಸಿಕ್ಕಿದ್ದು ಕರೇಡಿ ಮಾತೆ. ಮಧ್ಯ ಪ್ರದೇಶದ ಶಾಜಪುರ್ ಜಿಲ್ಲೆಯಿಂದ ಕರೇಡಿ ಎಂಬ ಕುಗ್ರಾಮದ ಗ್ರಾಮದೇವತೆ ಈ ಕರೇಡಿ ಮಾತೆ. ಒಂದು ದಿನ ಈ ಮಾತೆಯ ಭುಜಜದಿಂದ ಹರಿದ ನೀರಿನ ಘಟನೆಯ ಸುತ್ತ ನಮ್ಮ ನಂಬಿಕೆ, ಅಪನಂಬಿಕೆ ಪಯಣ ಸಾಗುತ್ತದೆ.
ದೇವಿಯ ಭುಜದಿಂದ ಚಿಮ್ಮಿಂದ ನೀರು, ಇಲ್ಲಿನವರಿಗೆ ಅಮೃತಪ್ರಾಯವಾಗಿದೆ.ಹರಿದ ನೀರುವ ಅಮೃತ ಸಮಾನ ಎಲ್ಲ ರೋಗಗಳಿಗೆ ರಾಮಬಾಣ ಎನ್ನುವುದು ಇದೀಗ ಸುತ್ತಲಿನ ಗ್ರಾಮಸ್ಥರಲ್ಲಿ ಹುಟ್ಟಿದ ನಂಬಿಕೆ. ಕರೇಡಿ ಗ್ರಾಮ ದೇವತೆಯ ಮಂದಿರದತ್ತ ಸಾಗಿದ ನಮ್ಮ ಪಯಣ. ಮೊದಲು ನೋಡಿದ್ದು ಮಂದಿರದ ಪಕ್ಕದಲ್ಲಿನ ಕೊಳ. ಕಲ್ಲಿನ ಮೂರ್ತಿ ಭುಜದಲ್ಲಿ ಇರುವ ಸಣ್ಣ ತೂತು ಈ ನೀರು ಚಿಮ್ಮುವ ತಾಣ. ಮೊದಲೆರಡು ದಿನ ಸತತವಾಗಿ ತೂತಿನಲ್ಲಿ ಅವಿತ ನೀರು ತೆಗೆದ ಪೂಜಾರಿ ನಂತರ ಸತತ ಹರಿದು ಬರುವ ನೀರನ್ನು ನೋಡಿ ಇದು ದೇವಿಯ ಮಹಿಮೆ ಎಂದ. ಅಲ್ಲಿಂದ ಶುರುಗೊಂಡ ಬಾಯಿ ಮಾತಿನ ಪ್ರಚಾರ ಇಂದು ಸಾವಿರಾರು ಜನರನ್ನು ಕರೇಡಿಗೆ ಬರುವಂತೆ ಮಾಡಿದೆ.
|