ಈ ಬಾರಿಯ ನಮ್ಮ ನಂಬಿಕೆ, ಮೂಢನಂಬಿಕೆಗಳ ಪಯಣದಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಘಟಿಸಿದ ಒಂದು ಅಪರೂಪದ ಘಟನೆಯನ್ನು ಬಿಡಿಸಿ ಇಡುವ ಪ್ರಯತ್ನ ಮಾಡುತ್ತಿದ್ದೆವೆ. ಮಧ್ಯ ಪ್ರದೇಶದ ಮೌ ಬಳಿ ಈ ಕಥೆಯ ಕಥಾನಕ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ.
ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಅವರಿಂದ ನಡೆದ ಒಂದು ಎನ್‌ಕೌಂಟರ್ ಸಾವಿರಾರು ಜನರ ಪ್ರಾಣ ಹರಣಕ್ಕೆ ಕಾರಣವಾಯಿತು ಎಂದರೆ ನಂಬುತ್ತಿರಾ. ನಂಬಿಕೆ ನಿಮಗೆ ಬಿಟ್ಟದ್ದು. ಆದರೆ ಮಧ್ಯ ಪ್ರದೇಶದ ಮೌ ಸುತ್ತ ಮುತ್ತಲಿನ ಪ್ರದೇಶದಲ್ಲಿ ಇರುವ ಭೀಲ್ಲರು ಇದನ್ನು ನಂಬುತ್ತಾರೆ.
ಭೀಲ್ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ತಾಂತ್ಯಾ ಭೀಲ್ ಎಂಬ ಭಾರತದ ರಾಬಿನ್ ಹುಡ್, ಬ್ರಿಟಿಷರನ್ನು ದೋಚಿ ಅವರಿಂದ ಕಿತ್ತು ಕೊಂಡ ವಸ್ತುಗಳನ್ನು ಬಡವರಿಗೆ ದೀನ ದಲಿತರಿಗೆ ದಾನ ಮಾಡುತ್ತಿದ್ದನಂತೆ. ಅವನ ದರೋಡೆಯ ಕಾಟ ತಡೆಯದ ಬ್ರಿಟಿಷರು ಮತ್ತು ಬ್ರಿಟಿಷ್ ಪೊಲೀಸ್ ಒಂದು ದಿನ ಎನ್‌ಕೌಂಟರ್ ಮಾಡಿತು. ತಾಂತ್ಯಾ ಭೀಲ್ ಎನ್‌ಕೌಂಟರ್ ಆದ ಸ್ಥಳವೇ ಸಾವಿರಾರು ಜನರ ಜೀವ ಹರಣ ಮಾಡಲು ಪ್ರಾರಂಭಿಸಿತು. ಪಾತಾಳ ಪಾನಿ ಜಲಪಾತದ ಹತ್ತಿರವೇ ಹಾದು ಹೋಗಿದ್ದ ರೈಲ್ವೆ ಟ್ರ್ಯಾಕಿನ ಬಳಿ ತಾಂತ್ಯಾ ಭೀಲ್ ಪೊಲೀಸರ ಗುಂಡಿಗೆ ಆಹುತಿಯಾದ. ಅವನು ಸತ್ತ ಮೇಲೆ ರೈಲುಗಳ ಅಪಘಾತಕ್ಕೆ ಈಡಾಗುವುದು ಹೆಚ್ಚಿತು.
|