ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಗ ವೈಕಲ್ಯ ಗುಣಪಡಿಸುವ ಗುರುಶರಣ್ ಬಾಬಾ
ಎಲ್ಲ ರೀತಿಯ ದೈಹಿಕ ಅಂಗ ವಿಕಲತೆಗಳನ್ನು ಗುಣಪಡಿಸುತ್ತೆನೆ ಎನ್ನುವ ಪಂಡೊಖರ್ ಗ್ರಾಮದ ಗುರುಶರಣ್ ಬಾಬಾನ ಕುರಿತು ಈ ಬಾರಿಯ ನಮ್ಮ ನಂಬಿಕೆ, ಮೂಢನಂಬಿಕೆಯ ಕಥಾ ಸರಣಿಯಲ್ಲಿ ಬಿತ್ತರಿಸುತ್ತಿದ್ದೇವೆ.
WD

ಬುಂದೇಲಖಂಡ್ ಗುಡ್ಡಗಾಡು ಪ್ರದೇಶದಲ್ಲಿ ದೂರದಲ್ಲಿ ಇರುವ ಪಂಡೋಖರ್ ಗ್ರಾಮದಲ್ಲಿ ಇರುವವನೇ ಈ ಗುರುಶರಣ್ ಬಾಬಾ. ಹಲವಾರು ವರ್ಷಗಳಿಂದ ಅಲ್ಲಿಯೇ ಇರುವ ಬಾಬಾ ಸುತ್ತಮುತ್ತಲಿನ ಗ್ರಾಮಗಳಿಗೂ ಆಗಾಗ ಪ್ರವಾಸ ಮಾಡುತ್ತಿರುತ್ತಾನೆ ಅದು ಬೇರೆ ಮಾತು.

ನಿತ್ಯ ಬರುವ ರೋಗಿಗಳನ್ನು ಕರೆದು ಮಾತನಾಡಿಸದೇಯೇ ಇದೇ ನಿನ್ನ ರೋಗ ನೋಡು ಎಂದು ತುಂಡು ಪೇಪರಿನಲ್ಲಿ ಬರೆದು ತೋರಿಸುತ್ತಾನೆ. ಅಲ್ಲದೇ ಹಾಗೆಯೇ ರೋಗಿಯೊಂದಿಗೆ ಒಂದೇರಡು ಮಾತನಾಡಿ ಸರಿ ಒಂದೆರಡು ಹೆಜ್ಜೆ ಹಾಕು ಎಂದು ಹೇಳುತ್ತಾನೆ. ಇದೇ ನೋಡಿ ವಿಚಿತ್ರ ಹಲವಾರು ದಿನಗಳಿಂದ ನಡೆಯಲಿಕ್ಕಾಗದೇ ಹಾಸಿಗೆ ಹಿಡಿದು ಬಿದ್ದಿರುವ ವ್ಯಕ್ತಿ ಹಾವಾಡಿಗನ ಪುಂಗಿಯ ನಾದಕ್ಕೆ ತಲೆತೂಗುವ ನಾಗರನಂತೆ ಸುಮ್ಮನೆ ಒಂದೇರಡು ಹೆಜ್ಜೆ ಹಾಕಿ ಬಿಳುತ್ತಾನೆ. ಏನಿದು ಆ ಬಾಬಾನ ಮಾಂತ್ರಿಕ ಶಕ್ತಿ ? ಅದು ಹೇಗೆ ಸಾಧ್ಯ ?

ನಾವು ನೋಡಿದ್ದೇವೆ ಖುದ್ಧಾಗಿ. ಕೈಲಾಗದ ರೋಗಿಗಳು ನಡೆದಿದ್ದನ್ನು. ಇದೇ ಸಮಯದಲ್ಲಿ ನಡೆಯಲಿಕ್ಕಾಗದೇ ಹಾಸಿಗೆಯಲ್ಲಿ ಬಿದ್ದಿದ್ದ ವ್ಯಕ್ತಿ ಬಾಬಾನ ಆಶಿರ್ವಾದದಿಂದ ಗುಣಮುಖನಾದವನು ಎಂದು ಹೇಳಿಕೊಂಡು ಬಂದವನು. ಬಾಬಾನ ಕಾಲಿಗೆ ಬಿದ್ದು ಮಾಲೆ ಹಾಕಿ ನಿನ್ನ ಆಶಿರ್ವಾದ ಹೀಗೆ ಇರಲಿ ಪ್ರಭು ಎಂದಿರಬೇಕು ಮನದಲ್ಲಿ.
WD


ತಮ್ಮ ಅಂಗ ವೈಕಲ್ಯ ಗುಣ ಪಡಿಸಿಕೊಳ್ಳಲು ಇಲ್ಲಿಗೆ ಬರುವವರು ಕನಿಷ್ಠ ಐದು ಅಮಾವಾಸ್ಯೆಯಾದರೂ ಇಲ್ಲಿಗೆ ಬರಬೇಕು. ಮತ್ತು ತಪ್ಪದೇ ನೀಡಿರುವ ಪವಿತ್ರ ದಾರವನ್ನು ಕಟ್ಟಿಕೊಳ್ಳಲೇಬೇಕು. ಅಂದರೆ ಮಾತ್ರ ಆಂಜನೇಯನ ಆಶಿರ್ವಾದ ಲಭ್ಯವಾಗುತ್ತದೆ ಎಂದು ಹೇಳುತ್ತಾನೆ. ಆದರೆ ಮೂಳೆ ತಜ್ಞ ಡಾ ಜಯೇಶ್ ಷಾ ಹೇಳುವುದೇ ಬೇರೆ. ಕೆಲ ಬಾರಿ ಆವೇಶದ ಭರದಲ್ಲಿ ಈ ರೀತಿ ನಡೆಯುವುದು ಸಹಜ. ಆದರೆ ಅದರಿಂದ ಬೆನ್ನು ಮೂಳೆ ಆಘಾತಕ್ಕೆ ಈಡಾಗಬಹುದು.

ಮಾನಸಿಕವಾಗಿ ಅಸ್ವಸ್ಥತೆಯಲ್ಲಿ ಇರುವವರನ್ನು ಆವೇಶದ ಮಾತುಗಳನ್ನಾಡಿ ಗುಣಪಡಿಸಬಹುದು ಆದರೆ ಅಂತಹ ಪ್ರಕರಣಗಳು ಸಾವಿರಕ್ಕೊಂದು ಎನ್ನುತ್ತಾರೆ. ಹಾಗಿದ್ದರೆ ನಿಮ್ಮ ಅನಿಸಿಕೆ ಏನು?
ವೀಡಿಯೋ ವೀಕ್ಷಿಸಿ
ಫೋಟೋಗ್ಯಾಲರಿ
ಗುರುಶರಣ್ ಬಾಬಾನ ಪೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಪವಾಡ ಪುರುಷ - ಸತ್ಯ ಸಾಯಿಬಾಬಾ  
ಶಿವಬಾಬಾ ಜಾತ್ರೆಗೆ ಸಾವಿರಾರು ಕುರಿಗಳ ಬಲಿ  
ಇವನು ಭಾರತ ರಾಬಿನ್ ಹುಡ್  
ರೋಗ 'ಒದ್ದೋಡಿಸೊ' ವೈದ್ಯ ಇಲ್ಲಿದ್ದಾನೆ…!  
ಕರೇಡಿವಾಲಿ ಮಾತೆಯ ಮಹಿಮೆ  
ಪರಾಕ್ರಮದ ಕ್ರೀಡೆ ಜಲ್ಲಿಕಟ್ಟು ಅನಾಗರಿಕವೇ?