ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
"ಗಲ್" ಎಂಬ ವಿಚಿತ್ರ ಹಬ್ಬದ ಸುತ್ತ...
WD
ಈ ಬಾರಿಯ ನಮ್ಮ ನಂಬಿಕೆ,ಮೂಢನಂಬಿಕೆಗಳ ಪಯಣ ಸಾಗುತ್ತಿರುವುದು ಮಧ್ಯ ಪ್ರದೇಶದ ಮಾಳ್ವಾದತ್ತ. ಲಂಕಾಧೀಶ ರಾವಣನ ಸುಪುತ್ರ ಮೇಘನಾದ್ ಇಲ್ಲವೇ ಇಂದ್ರಜೀತುವಿನ ಜಾತ್ರೆಯ ಸಂದರ್ಭದಲ್ಲಿ ಭಕ್ತಿಯ, ಹರಕೆಯ ಹೆಸರಿನಲ್ಲಿ ಇಲ್ಲಿನ ಬುಡಕಟ್ಟು ಜನರು ತಮ್ಮ ದೇಹ ದಂಡಿಸಿಕೊಳ್ಳುವುದನ್ನು ನೋಡಿದರೆ ಹೆದರಿಕೆಯಾಗುತ್ತದೆ. ಭಯವಾಗುತ್ತದೆ. ಬನ್ನಿ ಈ ಬಾರಿ ಗಲ್ ಎಂಬ ವಿಚಿತ್ರ ಹಬ್ಬದ ಸುತ್ತ ಸಾಗುವಾ...

ಮೇಘನಾಥ್‌ನಲ್ಲಿ ತಮ್ಮ ಇಷ್ಠಾರ್ಥಗಳಿಗೆ ಹರಕೆ ಸಲ್ಲಿಸುವ ಈ ಜನರು ಹರಕೆ ಕೈಗೂಡಿದ ನಂತರ ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಉದ್ದಲಾಗಿ ನಿಲ್ಲಿಸಿರುವ ಬಿದಿರಿನ ಕಂಬಕ್ಕೆ ಅಡ್ಡಲಾಗಿ ಇರುವ ಕೊಕ್ಕೆಗಳನ್ನು ತಮ್ಮ ಬೆನ್ನುಗಳಲ್ಲಿ ಸಿಕ್ಕಿಸಿಕೊಂಡು ನೇತಾಡುತ್ತ ಪ್ರದಕ್ಷಿಣೆ ಹಾಕುವುದು ಹರಕೆಯ ತಿರಿಸುವ ಸಂಪ್ರದಾಯದ ವೈಖರಿ.

ಈ ರೀತಿ ಹರಕೆ ಹೊತ್ತವರನ್ನು "ಪಡಿಯಾರ"ಗಳು ಎಂದು ಕರೆಯುತ್ತಾರೆ. ಪಡಿಯಾರಗಳು ಹೇಳುವಂತೆ ಅವರಿಗೆ ಯಾವುದೇ ಬಾಧೆಯಾಗುವುದೇ ಇಲ್ಲವಂತೆ.

WD
ಭವರ್ ಸಿಂಗ್ ಎನ್ನುವ ಪಡಿಯಾರನ ಮಾತುಗಳಲ್ಲೇ ಕೇಳಿ ಆ ಹರಕೆ ತಿರಿಸುವ ಅನುಭೂತಿಯನ್ನು ಕಳೆದ ವರ್ಷ ಮಗ ಹುಟ್ಟಲಿ ಎಂದು ಹರಕೆ ಹೊತ್ತಿದ್ದನಂತೆ. ಅವನಿಗೆ ಈಗ ಮಗುವಾಗಿದೆ. ಗಲ್ ಹಾಕಿಕೊಂಡು ಪ್ರದಕ್ಷಿಣೆ ಮಾಡುವ ಮೂಲಕ ಮೇಘನಾಥನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾನೆ.

WD
ಗಲ್ ಏರುವ ಮುನ್ನ ಪಡಿಯಾರಗಳ ಬೆನ್ನಿಗೆ ಅರಿಷಿಣ ಬಳಿಯಲಾಗುತ್ತದೆ. ಆದರೂ ಸಹಿತ ಗಲ್ ಹಾಕಿಕೊಂಡು ನೇತಾಡುವ ಸಮಯದಲ್ಲಿ ಪಡಿಯಾರಗಳು ಗಾಯಗೊಳ್ಳುವುದು ಉಂಟು. ಈ ರೀತಿ ಬೆನ್ನಿಗೆ ಚುಚ್ಚಿದ ಕೊಕ್ಕೆಯ ಕಾರಣ ಅಪಾರವಾದ ರಕ್ತ ಸ್ರಾವ ಕೂಡ ಆಗುತ್ತದೆ. ವೈದ್ಯರು ಇದು ಸರಿಯಲ್ಲ ಗಾಯಕ್ಕೆ ಸೊಂಕಿಗೆ ಈಡಾಗಬಹುದು ಎಂದರೂ ಕೇಳುವುದಿಲ್ಲ ಈ ಪಡಿಯಾರಗಳು. ಇದು ಸಂಪ್ರದಾಯ ಹಾಗೆಲ್ಲ ನಿಲ್ಲಿಸಲಿಕ್ಕಾಗುವುದಿಲ್ಲ ಎಂದು ಹೇಳುತ್ತಾರೆ ಹಾಗಿದ್ದರೇ ನಿಮ್ಮ ಅನಿಸಿಕೆ ಏನು ?

ಈ ಸಂಪ್ರದಾಯದ ಮೂಲ ಇವರೆಗೆ ಯಾರಿಗೂ ಗೊತ್ತಿಲ್ಲ ಹಾಗೆಯೇ ಶತಶತಮಾನಗಳಿಂದ ಬೆಳೆದು ಬಂದಿದೆ. ರಾವಣನ ಮಗ ಮೇಘನಾದನನ್ನು ದೈವದ ರೂಪದಲ್ಲಿ ಸ್ವೀಕರಿಸಿದ್ದಾರೆ. ಹಾಗಿದ್ದರೆ ಏನು ಇದು ?
ವೀಡಿಯೋ ವೀಕ್ಷಿಸಿ
ಫೋಟೋಗ್ಯಾಲರಿ
ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಸಮಯದೊಡೆಯ ಬಾಲಾ ಪೀರ್ ಬಾಬಾ  
ಅಂಗ ವೈಕಲ್ಯ ಗುಣಪಡಿಸುವ ಗುರುಶರಣ್ ಬಾಬಾ  
ಪವಾಡ ಪುರುಷ - ಸತ್ಯ ಸಾಯಿಬಾಬಾ  
ಶಿವಬಾಬಾ ಜಾತ್ರೆಗೆ ಸಾವಿರಾರು ಕುರಿಗಳ ಬಲಿ  
ಇವನು ಭಾರತ ರಾಬಿನ್ ಹುಡ್  
ರೋಗ 'ಒದ್ದೋಡಿಸೊ' ವೈದ್ಯ ಇಲ್ಲಿದ್ದಾನೆ…!