ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೃತ್ಯು ಕೂಪ ಈ ಘಾಟ್
WD
ಈ ಬಾರಿಯ ನಮ್ಮ ನಂಬಿಕೆ, ಅಪನಂಬಿಕೆಗಳ ಪಯಣದಲ್ಲಿ ಎದುರಾಗಿರುವುದು ಮೃತ್ಯು ಕೂಪ ಎಂದು ಹೆಸರು ಪಡೆದಿರುವ ಮಾನ್ಪುರ್ ಘಾಟ್. ಆಗ್ರಾ- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಇದು ಅಕ್ಷರಶಃ ವಾಹನ ಚಾಲಕರಿಗೆ ಮೃತ್ಯು ಕೂಪ. ಸುಳಿವು ಸಿಗದ ತಿರುವುಗಳು ಆಗಾಧ ಪ್ರಪಾತಗಳ ಸಾಗುವ ಈ ಹೆದ್ದಾರಿಯಲ್ಲಿ ಅಪಘಾತಗಳು ಎನ್ನುವ ಸಂಗತಿ ಇಲ್ಲಿನವರಿಗೆ ಮತ್ತು ಪೊಲೀಸರಿಗೆ ಹೊಸತಲ್ಲ.

ಹಾಗೇ ನೋಡಿದರೆ ಸಹ್ಯಾದ್ರಿ ಬೆಟ್ಟಗಳ ಅಡಿಯಲ್ಲಿ ಬರುವ ಘಾಟ್‌ಗಳಿಗಿಂತ ಕಡಿದಾದ ರಸ್ತೆಯನ್ನು ಮಾನ್ಪುರ್ ಘಾಟ್ ಹೊಂದಿಲ್ಲವಾದರೂ ಇಲ್ಲಿ ಪದೇ ಪದೇ ಅಪಘಾತಗಳು ಆಗುತ್ತವೆ. ಕಾರಣ ಇಷ್ಟೇ ಅದು ಅತೃಪ್ತ ಆತ್ಮಗಳ ತವರು. ಎನ್ನುವುದು ಅಲ್ಲಿನವರ ಅನಿಸಿಕೆ.
WD

ಇಷ್ಟೇಲ್ಲ ಕೇಳಿದ ಮೇಲೆ ನಮಗೂ ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ. ನಮ್ಮದು ಹೊರಟಿತು ಸವಾರಿ ಮಾನ್ಪುರ್ ಘಾಟ್‌ನತ್ತ. ಘಾಟ್‍‌ನಲ್ಲಿ ನಮ್ಮ ವಾಹನ ಸಾಗುತ್ತಿದ್ದಂತೆ ಕೆಲಕಾಲ ನಮ್ಮಗಳ ಎದೆಯಲ್ಲಿ ಬತ್ತ ಕುಟ್ಟಿದಂತಾಗಿತ್ತು ಅದು ಬೇರೆ ಮಾತು ಬಿಡಿ. ಸ್ವಲ್ಪ ದೂರ ಸಾಗುತ್ತಲೇ ನಮಗೆ ಎದುರಾಗಿದ್ದು "ಭೈರವನ ಮಂದಿರ" ಇಲ್ಲಿಂದ ಹಾದು ಹೋಗುವ ವಾಹನಗಳ ಚಾಲಕರು ಕೆಳಗಿಳಿದು ಭೈರವನಿಗೆ ಶರಣು ಹೇಳಿ ಮುಂದೆ ಸಾಗುವುದು. ಅಪ್ಪಿತಪ್ಪಿ ಭೈರವನಿಗೆ ಶರಣು ಹೇಳದೇ ಹಾಗೇ ಸಾಗಿದವನಿಗೆ ಅಪಘಾತ ಕಟ್ಟಿಟ್ಟ ಬುತ್ತಿಯಂತೆ.
WD

ಅಲ್ಲಿಯೇ ಇದ್ದ ಟ್ರಕ್ ಡ್ರೈವರ್ ಪಪ್ಪು ಮಾಲವೀಯನನ್ನು ಕರೆದು ಏನಿದು ಮಾನ್ಪುರ್ ಘಾಟ್ ಕಥೆ ಎಂದು ಕೇಳಿದೇವು. ಹಲವಾರು ವರುಷಗಳಿಂದ ಇದೇ ರಸ್ತೆಯಲ್ಲಿ ಸಾಗಿದ್ದೇನೆ. ಕಣ್ಣಾರೇ ಸಾವುಗಳನ್ನು ನೋಡಿದ್ದೇನೆ. ಈ ರಸ್ತೆಯ ತುಂಬ ಅತೃಪ್ತ ಆತ್ಮಗಳು ಅಡ್ಡಾಡುತ್ತಿರುತ್ತವೆ ಆದ್ದರಿಂದಲೇ ಇಲ್ಲಿನ ಭೈರವನಿಗೆ ಶರಣು ಹೇಳುವುದು ಎಂದು ಹೇಳಿದ.

ಸರಕಾರ ಕೂಡ ಇಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತದೆ. ಘಾಟ್‌ ಪ್ರವೇಶಕ್ಕೆ ಮುನ್ನ ನಿಮ್ಮ ವಾಹನದ ಬ್ರೆಕ್ ಪರೀಕ್ಷಿಸಿ ಎನ್ನುವುದು ಕೂಡ ಒಂದು.

ಇಲ್ಲಿ ನಾವು ಒಂದು ಅಂಶ ಗಮನಿಸಿದ್ದು ಅಂದರೆ ಟ್ರಕ್ ಡ್ರೈವರ್‌ಗಳು ನಿರ್ಲಕ್ಷ್ಯದ ಪರಮಾವಧಿಯಲ್ಲಿ ವಾಹನ ಚಾಲನೆ ಮಾಡುತ್ತಿರುವುದು. ಹೀಗಾಗಿಯೇ ಅಪಘಾತಗಳು ಇಲ್ಲಿ ಆಗುವುದು ಸಹಜ ಅಲ್ಲವೇ?
WD

ಕೆಲವರಿಗೆ ಇಲ್ಲಿ ಆಗುತ್ತಿರುವ ಅವಘಡಗಳತ್ತ ಗಮನ ಇಲ್ಲ ಆದರೂ ಅವರಿಗೆ ದೆವ್ವಗಳ ಭಯವೂ ಇಲ್ಲ. ಆದರೂ ಅವರು ಇಲ್ಲಿನ ಭೈರವನಿಗೆ ಕೈಮುಗಿಯುತ್ತಾರೆ. ಪೊಲೀಸರಿಗಂತೂ ಇಲ್ಲಿ ಆಗುವ ಅಪಘಾತಗಳು ಅವುಗಳಿಂದ ಆಗುವ ಸಾವುಗಳು ನಿತ್ಯ ನಿರಂತರ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಅಲ್ಲವೇ ?
ವೀಡಿಯೋ ವೀಕ್ಷಿಸಿ
ಫೋಟೋಗ್ಯಾಲರಿ
ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು
ಕಾದ ಕೆಂಡದ ಹಾದಿ ತುಳಿಯುವರೀ ಸ್ತ್ರೀಯರು!  
"ಗಲ್" ಎಂಬ ವಿಚಿತ್ರ ಹಬ್ಬದ ಸುತ್ತ...  
ಸಮಯದೊಡೆಯ ಬಾಲಾ ಪೀರ್ ಬಾಬಾ  
ಅಂಗ ವೈಕಲ್ಯ ಗುಣಪಡಿಸುವ ಗುರುಶರಣ್ ಬಾಬಾ  
ಪವಾಡ ಪುರುಷ - ಸತ್ಯ ಸಾಯಿಬಾಬಾ  
ಶಿವಬಾಬಾ ಜಾತ್ರೆಗೆ ಸಾವಿರಾರು ಕುರಿಗಳ ಬಲಿ