ನಾವು ಈ ರೀತಿಯ ವಿಚಿತ್ರ ವರ್ತನೆಗಳಿಂದ ದಂಗಾಗಿ ಹೊರಬಂದು ಜೀತೇಂದ್ರ ಪಟೇಲ್ ಎಂಬವರನ್ನು ಈ ಕುರಿತು ಕೇಳಿದಾಗ, 'ನನ್ನ ಹೆಂಡತಿಯ ದೇಹವನ್ನು ದೆವ್ವ ಆವರಿಸಿಕೊಂಡಿತ್ತು. ಅವಳು ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ, ಊಟ ಕೂಡಾ ಮಾಡುತ್ತಿರಲಿಲ್ಲ. ಆದರೆ ಇಲ್ಲಿಗೆ ಕರೆದುಕೊಂಡು ಬಂದ ಮೇಲೆ ಸ್ವಲ್ಪ ಗುಣಮುಖವಾಗಿದೆ' ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಜಿತೇಂದ್ರ ಪಟೇಲ್ ಅವರಂತೆ ಅಲ್ಲಿ ನೆರೆದಿದ್ದ ಅನೇಕ ಭಕ್ತರು ತಾವು ಇಲ್ಲಿಗೆ ಭೇಟಿ ನೀಡಿ ಮಹಾಆರತಿ ಮಾಡಿದ ನಂತರ ತಾವು ಸ್ವಲ್ಪ ಮಟ್ಟಿಗೆ ಗುಣಮುಖರಾಗಿರುವುದಾಗಿ ಹೇಳಿದರು. ಜಮುನಾಬಾಯಿ ಎಂಬವರು, ದತ್ತ ದೇವರ ದರ್ಶನ ಮಾಡಿದ ನಂತರ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ, ಎಲ್ಲ ದತ್ತ ದೇವರ ಮಹಿಮೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಘಟನೆಯ ನಂತರ ನಾವು ವೈದ್ಯರಲ್ಲಿ ಈ ಕುರಿತು ಕೇಳಿದಾಗ, ಕೆಲವರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅವರು ಸಂಪೂರ್ಣವಾಗಿ ಹುಚ್ಚರಾಗಿರುವುದಿಲ್ಲ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂದರು.
ದೆವ್ವದ ಕಾಟ ಮತ್ತು ಮಾನಸಿಕ ಅಸಮತೋಲನಕ್ಕೆ ಸಂಬಂಧವಿದೆ ಎಂದು ನಿಮಗನಿಸುತ್ತದೆಯೇ? ಅನಿಸಿಕೆಯನ್ನು ಇಲ್ಲೇ ಕೆಳಗೆ ಬರೆಯಿರಿ.
|