ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಗರೇಟು, ವಿಸ್ಕಿಪ್ರಿಯ ದೇವರಿಗೆ ಸರಪಳಿಯ ಬಂಧನ!
WD
ಭಕ್ತರು ದೇವರನ್ನೇ ಕಬ್ಬಿಣದ ಸರಪಳಿಯಿಂದ ಬಂಧಿಸಿಟ್ಟ ಘಟನೆಯನ್ನು ಎಲ್ಲಾದರೂ ಕೇಳಿದ್ದೀರಾ? ಹಾಗಾದರೆ ನಮ್ಮ ಜೊತೆಯಲ್ಲಿ ಬನ್ನಿ. ಭಕ್ತಿ ಮತ್ತು ಶ್ರದ್ಧೆಯಿಂದ ತಾವು ಪೂಜಿಸುವ ದೇವರನ್ನು ಭಕ್ತರು ಕಬ್ಬಿಣದ ಸರಪಳಿಯಿಂದ ಬಂಧಿಸಿಟ್ಟ ಕೌತುಕವನ್ನು ತೋರಿಸುತ್ತೇವೆ ಬನ್ನಿ ನಮ್ಮೊಂದಿಗೆ.

ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಮಾಲ್ವಾ -ಆಗಾರ್ ಗ್ರಾಮದಲ್ಲಿ ಕೊಡಸ್ವಾಮಿ ಕಾಳಭೈರವನಾಥ್ ಮಂದಿರವಿದೆ. ಮಂದಿರದಲ್ಲಿ ಕಾಳಭೈರವನಾಥ್ ಮೂರ್ತಿಯನ್ನು ಭಕ್ತರು ಪೂಜಿಸುತ್ತಿದ್ದು, ಕಬ್ಬಿಣದ ಸರಪಳಿಯಿಂದ ಮೂರ್ತಿಯನ್ನು ಬಂಧಿಸಿಟ್ಟಿದ್ದಾರೆ. ಈ ಕುರಿತು ಗ್ರಾಮಸ್ಥರನ್ನು ಪ್ರಶ್ನಿಸಿದಾಗ ಪ್ರಾಚೀನ ಇತಿಹಾಸಕ್ಕೆ ಬೆಳಕು ಬಂದಿತು.

ಕೊಡಸ್ವಾಮಿ ಕಾಳಭೈರವ ಮಂದಿರವು ಝಾಲಾ ರಾಜ್‌ಪೂತ್‌ರು ಹಾಗೂ ಗುಜರಾತಿಗಳಿಗೆ ಸೇರಿದ್ದು, 1481ರಲ್ಲಿ ಝಾಲಾ ರಾಜಪೂತ ವಂಶಸ್ಥನಾದ ರಾಜನ ಕನಸಿನಲ್ಲಿ ದೇವರು ಬಂದು ರಾಜನಿಗೆ 'ನೀನು ರಥವನ್ನು ತೆಗೆದುಕೊಂಡು ಸಾಗುತ್ತಿರು. ಎಲ್ಲಿ ನಿನ್ನ ರಥದ ಚಕ್ರಗಳು ಮುರಿಯತ್ತವೆಯೋ ಆ ಸ್ಥಳದಲ್ಲಿ ಸಾಮ್ರಾಜ್ಯವನ್ನು ನಿರ್ಮಿಸು' ಎಂದು ಆದೇಶಿಸಿದನು. ದೇವರು ಕನಸಿನಲ್ಲಿ ಬಂದು ಹೇಳಿದ್ದನ್ನು ರಾಜನು ಶಿರಸಾವಹಿಸಿ ಪಾಲಿಸಲು ರಥದ ಚಕ್ರ ಮುರಿದ ಸ್ಥಳದಲ್ಲಿ ಕೊಡಸ್ವಾಮಿ ಕಾಳಭೈರವ ಮಹಾರಾಜ್ ಮಂದಿರವನ್ನು ನಿರ್ಮಿಸಿ, ಮಂದಿರದ ಸುತ್ತಲು ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿದನು. ನಂತರದ ದಿನಗಳಲ್ಲಿ ಕೆಲ ರಾಜಪೂತರು ರಾಜಸ್ಥಾನಕ್ಕೆ ಮರಳಿದರೆ ಕೆಲವರು ಅಲ್ಲಿಯೇ ನೆಲೆಸಿದರು.

WD
ರಾಜಸ್ಥಾನಕ್ಕೆ ಮರಳಲು ನಿರಾಕರಿಸಿದ ರಾಜಪೂತರಿಗೆ ದೇವರು ತಮ್ಮ ಜೊತೆ ಕ್ರೂರತೆಯಿಂದ ವರ್ತಿಸುತ್ತಿದ್ದಾನೆ ಎನ್ನುವ ಅನುಭವಕ್ಕೆ ಬಂದರು. ದೇವರು ಮಗುವಿನ ಮೂರ್ತಿಯನ್ನು ಹೊಂದಿದ್ದಾಗ, ಸಿಹಿಯನ್ನು ಕಳ್ಳತನ ಮಾಡುವುದಲ್ಲದೇ ಮಕ್ಕಳನ್ನು ಬಡಿಯುತ್ತಿದ್ದನು. ನಂತರದ ದಿನಗಳಲ್ಲಿ ವಿಸ್ಕಿ ಮತ್ತು ಮದ್ಯಸಾರದ ದುಶ್ಚಟಕ್ಕೆ ಬಿದ್ದನು. ದೇವರ ಶಕ್ತಿಯ ಪ್ರಭಾವ ಹೆಚ್ಚುತ್ತಿದ್ದಂತೆ ಸ್ಥಳೀಯರು ಜೀವ ಭಯದಿಂದ ನಲುಗತೊಡಗಿದರು. ತಾವು ನಂಬಿದ ದೇವರು ತಮ್ಮನ್ನು ಬಿಟ್ಟು ದೂರ ಹೋಗುತ್ತಿರಬಹುದು ಎನ್ನುವ ಆತಂಕ ಕಾಡಹತ್ತಿತು. ದೇವರು ವಲಸೆ ಹೋಗುವುದನ್ನು ತಡೆಯಲು ಜನರು ಸಾಧು ಸಂತರು ಮತ್ತು ಮಂತ್ರವಾದಿಗಳ ಮೊರೆ ಹೋದರು. ಜನರೊಂದಿಗೆ ಚರ್ಚಿಸಿದ ಸಾಧು ಸಂತರು, ಮಂತ್ರವಾದಿಗಳು ಮಂತ್ರಗಳ ಉಚ್ಚಾರಣೆ ಮಾಡುತ್ತಾ ದೇವರನ್ನು ಕಬ್ಬಿಣದ ಸರಪಳಿಯಿಂದ ಹೊರಹೋಗದಂತೆ ಬಂಧಿಸಿದರು. ಅಂದಿನಿಂದ ಇಲ್ಲಿಯವರೆಗೆ ದೇವರು ಬಂಧನದಲ್ಲಿರುವುದನ್ನು ಕಾಣಬಹುದು.

WD
ಭೈರವ ದೇವನು ತಾಮಸಿಕ ಸ್ವರೂಪದವನು. ಭೈರವ ದೇವರು ನೆಲೆಸಿದ ಕೊಡಸ್ವಾಮಿ ಮಂದಿರದಲ್ಲಿ ಭಕ್ತರು ದೇವರಿಗೆ ಸಿಗರೇಟ್ ಮತ್ತು ವಿಸ್ಕಿಯನ್ನು ಅಹಾರವಾಗಿ ನೀಡುತ್ತಾರೆ. ಹಗಲಿನಲ್ಲಿ ಸಿಗರೇಟ್‌ನ್ನು ಲೆಕ್ಕವಿಲ್ಲದಷ್ಟು ಬಾರಿ ಉರಿಸಲಾಗುತ್ತದೆ.

ದೇವರಿಗೆ ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತಿದ್ದರೂ ದೇವರನ್ನು ಕಬ್ಬಿಣದ ಸರಪಳಿಯಿಂದ ಬಂಧಮುಕ್ತಗೊಳಿಸಲು ಭಕ್ತರು ಸಿದ್ದವಿಲ್ಲ. ಸರಪಳಿಯನ್ನು ಬಿಚ್ಚಿದಲ್ಲಿ ದೇವರು ಕ್ರೂರವಾಗಿ ನಡೆದುಕೊಳ್ಳಬಹುದು ಅಥವಾ ತಮ್ಮಿಂದ ಶಾಶ್ವತವಾಗಿ ದೂರ ಹೋಗಬಹುದು ಎನ್ನುವ ಭಯ ಭಕ್ತರನ್ನು ಕಾಡುತ್ತಿದೆ. ಭಕ್ತರು ಪೂಜೆಗಾಗಿ ತಂದ ವಿಸ್ಕಿಯನ್ನು ಭಕ್ತರಿಗೆ ಗೊತ್ತಿಲ್ಲದಂತೆ ಭೈರವ ದೇವರು ವಿಸ್ಕಿಯನ್ನು ಕುಡಿದು ಬಿಡುತ್ತಾನೆ .

ಈ ಕುರಿತಂತೆ ನಿಮಗೇನು ಅನಿಸಿತು? ಇಲ್ಲಿ ಬರೆಯಿರಿ.
ವೀಡಿಯೋ ವೀಕ್ಷಿಸಿ
ಮತ್ತಷ್ಟು
ಮಹಾಆರತಿ- ದೆವ್ವಬಾಧೆಗಿದು ಮುಕ್ತಿ  
ದೈವ ಸಂಪ್ರೀತಿಗೆ ಮುಳ್ಳಿನ ಹಾಸಿಗೆಯಲ್ಲಿ ಹೊರಳಾಟ  
ಹೆಂಗಸರಿಂದ ಏಟು ತಿನ್ನಿಸಿಕೊಳ್ಳುವ ಜಾತ್ರೆ  
ಹುಟ್ಟುವ ಮಗು ಗಂಡಾಗಬೇಕೆ? ಗುಳಿಗೆ ನುಂಗಿ!  
ಮೃತ್ಯು ಕೂಪ ಈ ಘಾಟ್  
ಕಾದ ಕೆಂಡದ ಹಾದಿ ತುಳಿಯುವರೀ ಸ್ತ್ರೀಯರು!