ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀರಿನಿಂದಲೇ ರೋಗ ಗುಣಪಡಿಸುವ ಮಹಿಳೆ  Search similar articles
WD
ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ ಜಲ ಚಿಕಿತ್ಸೆಯಿಂದ ಕ್ಯಾನ್ಸರ್, ಟ್ಯೂಮರ್ ಸೇರಿದಂತೆ ಎಲ್ಲ ವಿಧದ ರೋಗಗಳನ್ನು ಗುಣಪಡಿಸುತ್ತೇನೆ. ನನಲ್ಲಿ ದೈವಿ ಶಕ್ತಿಯಿದೆ ಎಂದು ಹೇಳುವ ದೆಹಲಿ ನಿವಾಸಿಯಾಗಿರುವ ಇಂದಿರಾ ದೇವಿಯನ್ನು ಪರಿಚಯಿಸುತ್ತಿದ್ದೇವೆ.

ಇಂದಿರಾ ದೇವಿಯವರ ಚಿಕಿತ್ಸೆ ನೀಡುವ ವಿಧಾನವು ಭಿನ್ನತೆಯಿಂದ ಕೂಡಿರುತ್ತದೆ. ರೋಗಿಗಳಿಗೆ ತಮ್ಮ ತಮ್ಮ ಮನೆಯಿಂದಲೇ ನೀರನ್ನು ತರುವಂತೆ ಹೇಳುತ್ತಾರೆ. ಆನೀರನ್ನು ರೋಗಿಗೆ ಚಿಕಿತ್ಸೆ ಮಾಡುವ ಸ್ಥಳದಲ್ಲಿ ನೀರನ್ನು ಸಿಂಪಡಿಸುತ್ತಾಳೆ. ನಂತರ ರೋಗಿಗೆ ನೀರನ್ನು ಕುಡಿಯಲು ಹೇಳುತ್ತಾಳೆ. ಹೂವು ಹಾಗೂ ಬಾಳೆ ಹಣ್ಣನ್ನು ನೀರಿನೊಂದಿಗೆ ನೀಡಲಾಗುತ್ತದೆ. ನೀರಿನಲ್ಲಿ ಹಾಕಿದ ಹೂವುಗಳಿಂದ ರೋಗಿಯ ಚಿಕಿತ್ಸಾ ಭಾಗಕ್ಕೆ ಉಜ್ಜುತ್ತಾರೆ.

WD
ವಿವಿಧೆಡೆಯಿಂದ ರೋಗದಿಂದ ಬಳಲುತ್ತಿರುವ ಜನರು ಚಿಕಿತ್ಸೆಗಾಗಿ ಇಂದಿರಾ ದೇವಿಯವರ ಮನೆಬಾಗಿಲಿಗೆ ಬರುತ್ತಾರೆ. ತಮ್ಮಲ್ಲಿರುವ ದೈವಿಶಕ್ತಿಯ ಅನುಗ್ರಹದಿಂದ ರೋಗಿಗಳನ್ನು ಗುಣಪಡಿಸಲಾಗುತ್ತದೆ. ತಾವು ರೋಗಿಯ ಚಿಕಿತ್ಸಾ ಭಾಗಕ್ಕೆ ಸ್ಪರ್ಷಿಸಿದಲ್ಲಿ ನೋವು ಮತ್ತು ದುಖಃವನ್ನು ದೂರಮಾಡುವುದಾಗಿ ಇಂದಿರಾ ದೇವಿ ಹೇಳುತ್ತಾರೆ.

ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲವೆಂದು ಹೇಳುತ್ತಾರೆ. ಆದರೆ ಮಂದಿರದ ಆವರಣದಲ್ಲಿ ಹಬ್ಬಿರುವ ವದಂತಿ ಕುರಿತು ಕೇಳಿದಾಗ, ಚಿಕಿತ್ಸೆಗಾಗಿ ಬರುವ ಭಕ್ತರು 20ರೂಗಳಿಂದ 50 ರೂ.ವರೆಗೆ ನೀಡುತ್ತಾರೆ. ಇದರಲ್ಲಿ ಯಾವ ತಪ್ಪು ಇಲ್ಲವೆಂದು ಇಂದಿರಾ ದೇವಿ ಖಡಾಖಂಡಿತವಾಗಿಹೇಳುತ್ತಾರೆ.

WD
ಇನ್ನೊಂದೆಡೆ ರೋಗಿ ಹಾಗೂ ಆತನ ಕುಟುಂಬ ವರ್ಗದವರು ಇಂದಿರಾ ದೇವಿಯವರು ರೋಗವನ್ನು ಗುಣಪಡಿಸುವರು ಎನ್ನುವ ಆಶಾಭಾವನೆಯಿಂದ ಪದೇ ಪದೇ ಬರುತ್ತಾರೆ. ಆದರೆ ಇಲ್ಲಿಯವರೆಗೆ ಇಂದಿರಾ ದೇವಿಯವರು ತಮ್ಮ ದೈವಿಶಕ್ತಿಯಿಂದ ರೋಗವನ್ನು ಗುಣಪಡಿಸಿದ ಬಗ್ಗೆ ಯಾವುದೇ ಸಾಕ್ಷಾಧಾರಗಳು ಇಲ್ಲ. ಆದರೂ ಜನರು ಇಂದಿರಾ ದೇವಿಯವರ ದೈವಿ ಶಕ್ತಿಯನ್ನು ನಂಬುತ್ತಾರೆ.

ತಾವು ಇಂತಹ ದೈವಿಶಕ್ತಿಯನ್ನು ನಂಬುತ್ತೀರಾ? ಅಥವಾ ದೈವಿಶಕ್ತಿಯ ಹೆಸರಿನಲ್ಲಿ ನಂಬಿಸುವ ಕಪಟ ತಂತ್ರವೇ? ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ.....
ವೀಡಿಯೋ ವೀಕ್ಷಿಸಿ
ಫೋಟೋಗ್ಯಾಲರಿ
ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಈ ಮಂದಿರ ಶಾಪಗ್ರಸ್ತವೋ ವರದಾಯಕವೋ?  
ಸಿಗರೇಟು, ವಿಸ್ಕಿಪ್ರಿಯ ದೇವರಿಗೆ ಸರಪಳಿಯ ಬಂಧನ!  
ಮಹಾಆರತಿ- ದೆವ್ವಬಾಧೆಗಿದು ಮುಕ್ತಿ  
ದೈವ ಸಂಪ್ರೀತಿಗೆ ಮುಳ್ಳಿನ ಹಾಸಿಗೆಯಲ್ಲಿ ಹೊರಳಾಟ  
ಹೆಂಗಸರಿಂದ ಏಟು ತಿನ್ನಿಸಿಕೊಳ್ಳುವ ಜಾತ್ರೆ  
ಹುಟ್ಟುವ ಮಗು ಗಂಡಾಗಬೇಕೆ? ಗುಳಿಗೆ ನುಂಗಿ!