ಕನಸುಗಳೆಲ್ಲವೂ ಕಾಲ್ಪನಿಕವಾಗಿದ್ದು, ನಿಜ ಜೀವನಕ್ಕೆ ಯಾವುದೇ ಸಂಬಂಧವಿಲ್ಲ ಎಂಬುದು ಸಾಮಾನ್ಯರ ನಂಬಿಕೆ. ಒಂದು ಸಣ್ಣ ಕನಸು, ಒಬ್ಬಾತನ ಜೀವನವನ್ನೇ ಬದಲಾಯಿ ಸಬಹುದು ಎಂಬುದನ್ನು ನೀವು ನಂಬುತ್ತೀರಾ? ಇಲ್ಲ ಅಲ್ಲವೇ ? ಹಾಗಿದ್ದರೆ, ಈ ಬಾರಿ ನಮ್ಮ ‘ನೀವು ನಂಬುವಿರಾ’ ಸರಣಿಯಲ್ಲಿ, ನಾವು ನಿಮ್ಮನ್ನು ಈ ರೀತಿಯ ಪವಾಡ ನಡೆದ ಮಧ್ಯಪ್ರದೇಶದ ಮನಾಸಾ ಎಂಬ ಪುಟ್ಟ ಹಳ್ಳಿಗೆ ಕರೆದೊಯ್ಯುತ್ತಿದ್ದೇವೆ.
ಬಬಿತಾ ಎಂಬ ಬಾಲಕಿ ಹುಟ್ಟಿದಾಗಲೇ ಕೈಗಳು ಮತ್ತು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದಳು. ಕೈಕಾಲುಗಳನ್ನು ಅಲ್ಲಾಡಿಸುವುದು ಆಕೆಗೆ ಸಾಧ್ಯವಿರಲಿಲ್ಲ. ಸಾಮಾನ್ಯ ಮಕ್ಕಳಿ ಗೆ ಹೋಲಿಸಿದರೆ ಆಕೆಯ ದೇಹದ ಇತರ ಅಂಗಗಳು ಕೂಡ ಬಹುಪಾಲು ನಿಷ್ಕ್ರಿಯವಾದಂತಿದ್ದವು. ತಾನಾಗಿಯೇ ನಡೆಯುವುದು, ಎದ್ದು ನಿಲ್ಲುವುದು ಆಕೆಗೆ ಸಾಧ್ಯವಿಲ್ಲ. ಬಹುತೇಕ ಆಕೆ ಹಾಸಿಗೆಯಲ್ಲಿ ಬಿದ್ದುಕೊಂಡೇ ಇರುತ್ತಿದ್ದಳು.
ಆಕೆ ಯೌವನಾವಸ್ಥೆಗೆ ಕಾಲಿಟ್ಟಾಗ, ಅದೊಂದು ರಾತ್ರಿ, ರಾಜಸ್ಥಾನದ ಮಹಾನ್ ಸಂತ ‘ಬಾಬಾ ರಾಮದೇವ್‌ಜಿ’ ಅವರು ಆಕೆಯ ಕನಸಿನಲ್ಲಿ ಕಾಣಿಸಿಕೊಂಡರು. ‘ಏಳು, ಎದ್ದೇ ಳು, ಜನತೆಯ ಸೇವೆ ಮಾಡು’ ಎಂದು ಬಾಬಾ ಆಕೆಗೆ ನಿರ್ದೇಶಿಸಿದರು. ತಕ್ಷಣವೇ ಆಕೆ ಕಾಲುಗಳಲ್ಲಿ ಅದೇನೋ ಚಲನೆಯ ಭಾಸವಾಯಿತು. ಇಂದು, ಬಬಿತಾ ತನ್ನೆಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನಷ್ಟೇ ಅಲ್ಲ, ಅಗತ್ಯವಿರುವವರಿಗೆ ನೆರವನ್ನೂ ತಾನಾಗಿಯೇ ಮಾಡುತ್ತಿದ್ದಾಳೆ !
ದೀರ್ಘಕಾಲದಿಂದ ಕೈನೋವಿನಿಂದ ಬಳಲುತ್ತಿದ್ದ ವಿಜಯ್ ಎಂಬಾತ ಇಲ್ಲಿಗೆ ಬಂದಿದ್ದಾನೆ. ಬಬಿತಾ ಬಗ್ಗೆ ಜನ ಹೇಳುತ್ತಿರುವುದನ್ನು ಕೇಳಿ ಆತ ಚಿಕಿತ್ಸೆಗಾಗಿ ಇಲ್ಲಿಗೆ ಬಂದಿದ್ದ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಕೈನೋವು ಸಾಕಷ್ಟು ಗುಣ ಕಂಡಿದೆ ಎನ್ನುತ್ತಾನೆ ವಿಜಯ್. ಆ ಪ್ರತಿದಿನ ಕೈ ಮಸಾಜಿಗೋಸ್ಕರ ಇಲ್ಲಿ ಬರುತ್ತಿದ್ದಾನೆ.
ಮನಾಸಾ ನಿವಾಸಿಯೇ ಆಗಿರುವ ಸಂತೋಷ್ ಪ್ರಜಾಪತ್ ಎಂಬಾತನಿಗೆ ದೇಹ ಕಿವುಚುವಷ್ಟು ಬೆನ್ನು ನೋವು. ಇದೀಗ ಆತನೂ ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾನೆ. ಬಬಿತಾ ನೀಡುತ್ತಿರುವ ಮಸಾಜು ಚಿಕಿತ್ಸೆಯಿಂದ ನೋವು ಶಮನವಾಗುತ್ತಿದೆ ಎನ್ನುತ್ತಾನೆ ಆತ. ಮಸಾಜಿಗೋಸ್ಕರ ಸಮೀಪದ ಸ್ಥಳಗಳಿಂದಲೂ ಜನರು ಇಲ್ಲಿಗೆ ಬರುತ್ತಿದ್ದಾರೆ.
ಬಬಿತಾಗೆ ಈ ಹಿಂದೆ ತಾನು ಇದ್ದಲ್ಲಿಂದ ಏಳುವುದು ಸಾಧ್ಯವಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾಳೆ ಸ್ಥಳೀಯ ಮಹಿಳೆಯೊಬ್ಬಳು. ಆದರೆ, ಬಾಬಾ ರಾಮದೇವ್ ಕನಸಿನಲ್ಲಿ ಕಾಣಿಸಿಕೊಂಡಂದಿನಿಂದ ಆಕೆ ಎದ್ದು ನಡೆದಾಡುತ್ತಿದ್ದಾಳಂತೆ.
ಈಗ ಆಕೆ ಪಾತ್ರೆ ತೊಳೆಯುವುದು, ಗೋಧಿ ಕ್ಲೀನ್ ಮಾಡುವುದು, ಗುಡಿಸುವುದು... ಹೀಗೆ ಎಲ್ಲವನ್ನೂ ಮಾಡುತ್ತಾಳೆ. ಇದೊಂದು ಪವಾಡವೇ ಸರಿ. ಈ ಪವಾಡದ ಕನಸಿನ ನಂತರ ಗ್ರಾಮದ ಜನರು ಆಕೆಯ ಬಳಿ ಚಿಕಿತ್ಸೆಗಾಗಿ ಆಗಮಿಸಲಾರಂಭಿಸಿದರು.
ನಮ್ಮ ಗುರಿ ಸಾಧಿಸುವಲ್ಲಿ ಕನಸುಗಳು ಸ್ಫೂರ್ತಿ ನೀಡುತ್ತವೆ ಎಂದು ಹೇಳಲಾಗುತ್ತದೆ. ಆದರೆ ಬಬಿತಾಳ ಕನಸು ಆಕೆಯ ಜೀವನವನ್ನೂ ಸಂಪೂರ್ಣವಾಗಿ ಬದಲಿಸಿಬಿಟ್ಟಿದೆ. ಬಬಿ ತಾ ರೂಪದಲ್ಲಿ ಸತ್ಯ ನಿಮ್ಮೆದುರಿಗಿದೆ. ನಂಬುವುದು ಅಸಾಧ್ಯವಲ್ಲವೇ? ಇದು ಕೇವಲ ಭ್ರಮೆಯೇ, ಅಂಧವಿಶ್ವಾಸವೇ ಅಥವಾ ಭಕ್ತಿಯ ಪ್ರತೀಕವೇ? ನೀವೇನಂತೀರಿ ?
|