ಯಾವುದೇ ರೀತಿಯ ಔಷಧವಿಲ್ಲದೆ, ಕರ್ರಗಿನ ಶಾಲು ಧರಿಸುವ ಮೂಲಕವೇ ರೋಗವೊಂದನ್ನು ಓಡಿಸಬಹುದೇ? ಈ ಬಾರಿಯ ‘ನೀವು ನಂಬುವಿರಾ’ ಸರಣಿಯಲ್ಲಿ ನಾವು ನಿಮಗೆ ಪರಿಚಯ ಮಾಡಿಸುತ್ತಿರುವುದು ಈ ರೀತಿಯ ವಿಸ್ಮಯವೊಂದನ್ನು. ದುರ್ಗಾ ದೇವಿಯ ಆಶೀರ್ವಾದ ಫಲದಿಂದ ಎಲ್ಲ ರೋಗಗಳಿಗೂ ಈ ರೀತಿ ಚಿಕಿತ್ಸೆ ನೀಡಬಲ್ಲೆ ಎನ್ನುವ ವ್ಯಕ್ತಿಯೊಬ್ಬನನ್ನು ಈ ಬಾರಿ ನಾವು ಪರಿಚಯಿಸುತ್ತಿದ್ದೇವೆ.
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಬಡಾಗಾಂವ್ ಎಂಬ ಹಳ್ಳಿಯಲ್ಲಿದ್ದಾನೆ ಗಣೇಶ್ ಭಾಯಿ. ರೋಗಗಳನ್ನು ಗುಣಪಡಿಸಲು ಅವರು ಬಳಸುತ್ತಿರುವ ವಿಧಾನ ಅತ್ಯಂತ ವಿಚಿತ್ರವಾದುದು. ಆತ ತನ್ನ ಶಾಲನ್ನು ರೋಗಿಗೆ ಸುತ್ತುತ್ತಾನೆ ಮತ್ತು ತನ್ನ ಕೈಯಿಂದ ರೋಗಿಯನ್ನು ತಟ್ಟುತ್ತಾನೆ. ದುರ್ಗಾ ಮಾತೆಯ ಕೃಪಾಶೀರ್ವಾದದಿಂದ ಏಡ್ಸ್, ಸಕ್ಕರೆ ಕಾಯಿಲೆ, ಲಕ್ವ, ಪೋಲಿಯೋ ಮತ್ತು ಕ್ಯಾನ್ಸರ್ ಸೇರಿದಂತೆ ಯಾವುದೇ ರೋಗವನ್ನೂ ಗುಣಪಡಿಸಬಲ್ಲೆ ಎನ್ನುತ್ತಾನೆ ಗಣೇಶ್ ಭಾಯಿ.
ಭಾರೀ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಇಲ್ಲಿ ಜನ ಬರುತ್ತಾರೆ. ಚಿಕಿತ್ಸೆಗಾಗಿ ರೋಗಿಯೊಬ್ಬ ಮೂರರಿಂದ ಐದು ಬಾರಿ ಇಲ್ಲಿ ಬರಬೇಕಾಗುತ್ತದೆ. ಗಣೇಶ್ ಭಾಯಿಗೆ ಒಳ್ಳೆಯ ಹೆಸರಿದ್ದು, ಬೇರೆ ರಾಜ್ಯಗಳಿಂದಲೂ ಜನ ಇಲ್ಲಿ ಬರುತ್ತಾರೆ. ನೀವು ನಂಬಿದ್ರೆ ನಂಬಿ, ಇದೆಲ್ಲಾ ನಡೆಯೋದು ಪೊಲೀಸರ ಕಣ್ಣೆದುರಲ್ಲೇ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ ಮತ್ತು ಸ್ಥಳೀಯ ಪೊಲೀಸರು ಕಟ್ಟೆಚ್ಚರದಿಂದ, ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ಅವರು ಕೂಡ ಗಣೇಶ ಭಾಯಿಯನ್ನು ನಂಬುತ್ತಾರೆ.
ತನ್ನನ್ನು ಬಾಬಾ, ಮಹಾರಾಜ್ ಎಂದೆಲ್ಲಾ ಕರೆಯುವುದನ್ನು ಗಣೇಶ್ ಭಾಯಿ ಇಷ್ಟಪಡುವುದಿಲ್ಲ. ತನ್ನ ಚಿಕಿತ್ಸೆಯಿಂದ ಜನ ಹೇಗೆ ಗುಣಮುಖರಾಗುತ್ತಾರೆ ಎಂಬುದು ಸ್ವತಃ ಅವರಿಗೇ ತಿಳಿದಿಲ್ಲ. ಇದೆಲ್ಲಾ ದುರ್ಗಾ ಮಾತೆಯ ದಯೆ ಎನ್ನುತ್ತಾರೆ ಅವರು.
ಗಣೇಶ್ ಭಾಯಿ ಮೇಲೆ ನಂಬಿಕೆಯುಳ್ಳ ಭಕ್ತರೊಬ್ಬರು ಅವರಿಗಾಗಿ 12 ಎಕರೆ ಜಮೀನನ್ನೇ ದಾನ ಮಾಡಿದ್ದಾರೆ. ಇದೀಗ ಆ ಸ್ಥಳದಲ್ಲಿ ದುರ್ಗಾಮಾತೆಗೆ ಮಂದಿರ ಕಟ್ಟಿಸುವ ಇರಾದೆಯಲ್ಲಿದ್ದಾರೆ ಗಣೇಶ್ ಭಾಯಿ. ಈ ಯೋಜನೆಗಾಗಿ ತನ್ನನ್ನು ನಂಬಿ ಬಂದವರಿಂದ ಅವರು ಡೊನೇಶನ್ ಕೂಡ ಸ್ವೀಕರಿಸುತ್ತಾರೆ.
ಗಣೇಶ್ ಭಾಯಿ ಅವರ ಈ ವ್ಯವಹಾರ ಏರುತ್ತಲೇ ಇದೆ. ಅವರು ವಿಜ್ಞಾನಕ್ಕೆ ಮತ್ತು ವೈದ್ಯರಿಗೆ ಬಹಿರಂಗ ಸವಾಲನ್ನೇ ಹಾಕುತ್ತಾರೆ. ಗಣೇಶ್ ಭಾಯಿ ಅವರ ಅನುಯಾಯಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಯಾವುದೇ ವೈದ್ಯರಿಗಿಂತಲೂ ಜನರಿಗೆ ಹೆಚ್ಚು ನಂಬಿಕೆ ಗಣೇಶ್ ಭಾಯಿ ಮೇಲೆ.
ಆದರೆ, ಅತ್ಯಂತ ಗಮನಾರ್ಹ ಸಂಗತಿಯೆಂದರೆ... ಗಣೇಶ್ ಭಾಯಿ ನಿಜಕ್ಕೂ ರೋಗಿಗೆ ಚಿಕಿತ್ಸೆ ನೀಡುತ್ತಾರೆಯೇ? ಅಥವಾ ಸ್ಥಳೀಯಾಡಳಿತದ ಬೆಂಬಲದಿಂದ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆಯೇ? R ಈ ಬಗ್ಗೆ ನೀವೇನು ಹೇಳುತ್ತೀರಿ?
|
|