ಮುಖ್ಯ ಪುಟ > ಧರ್ಮ > ನೀವು ನಂಬುವಿರಾ > ಕಥನ > ವಾನರನ ಅಂತ್ಯಕ್ರಿಯೆಯಿಂದ ಗ್ರಾಮ ಸಮೃದ್ಧಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾನರನ ಅಂತ್ಯಕ್ರಿಯೆಯಿಂದ ಗ್ರಾಮ ಸಮೃದ್ಧಿ
ಗಾಯತ್ರಿ ಶರ್ಮಾ
ಮಂಗಗಳು ಹನುಮಂತನ ಅವತಾರಗಳು ಎಂದು ಭಕ್ತಿ ಭಾವದಿಂದ ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ, ಒಂದು ವಾನರ ಸಾವಿಗೀಡಾದ ಬಳಿಕ, ಬೇರೊಬ್ಬರ ಕನಸಿನಲ್ಲಿ ಬಂದು "ನನ್ನ ಅಂತ್ಯಸಂಸ್ಕಾರ ಕ್ರಿಯೆಗಳನ್ನು ನೆರವೇರಿಸಿದರೆ ನಿನ್ನೆಲ್ಲಾ ಸಮಸ್ಯೆಗಳು ದೂರವಾಗುತ್ತವೆ" ಎಂದು ಹೇಳುವುದನ್ನು ಕೇಳಿದ್ದೀರಾ? ಖಂಡಿತಾ ನೀವಿದನ್ನು ನಂಬಲಾರಿರಿ. ಆದರೆ ಇಂಥದ್ದೊಂದು ವಿಸ್ಮಯ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಹಳ್ಳಿಯೊಂದರಿಂದ ನಾವೀ ಸಂಗತಿಯನ್ನು ಕೇಳಬಹುದು. ಇಲ್ಲೊಂದು ಬಾರ್ಸಿ ಎಂಬ ಹಳ್ಳಿಯಿದೆ. ಕಳೆದ ವರ್ಷದ ದೀಪಾವಳಿ ಸಂದರ್ಭ ಒಂದು ನಾಯಿ ಮಂಗವೊಂದನ್ನು ಕೊಂದು ಹಾಕಿತು. ಕೋತಿ ಹನುಮಂತನ ಅವತಾರ ಎಂಬ ನಂಬಿಕೆಯಿಂದ ಸ್ಥಳೀಯರು ಮೃತದೇಹವನ್ನು ಹೂತು ಹಾಕಿದರು.

ಆದರೆ, ವರ್ಷದ ಬಳಿಕ, ಇದೇ ಮಂಗವು ಗ್ರಾಮದ ಸರಪಂಚನ ಕನಸಿನಲ್ಲಿ ಕಾಣಿಸಿಕೊಂಡಿತು ಮತ್ತು ತನಗೆ ಸರಿಯಾಗಿ ಅಂತ್ಯ ಸಂಸ್ಕಾರ ನೆರವೇರಿಸಿದರೆ ನಿಮ್ಮೆಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಿತು. ರೋಗಪೀಡಿತ ಹಸುಗಳೆಲ್ಲವೂ ಗುಣಮುಖವಾಗುತ್ತವೆ ಎಂದಿತಲ್ಲದೆ, ಗ್ರಾಮದಲ್ಲಿ ಉತ್ತಮ ಮಳೆ-ಬೆಳೆಯಾಗಿ ಎಲ್ಲಾ ಕುಟುಂಬಗಳಲ್ಲಿ ಸಮೃದ್ಧಿ-ಸಂತಸದ ಹೊನಲು ಹರಿಯುತ್ತದೆ ಎಂದೂ ಹೇಳಿತು.
WD


ಈ ಘಟನೆಯ ಬಗ್ಗೆ ಸರಪಂಚರಾದ ಶಂಕರ್ ಸಿಂಗ್ ಅವರು ಎಲ್ಲಾ ಹಳ್ಳಿಗರಿಗೆ ಮಾಹಿತಿ ನೀಡಿದರು. ಇದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಗ್ರಾಮಸ್ಥರು ಸಮೀಪದ ಹಳ್ಳಿಗೆ ತೆರಳಿ, ನಾಗ ದರ್ಶನ ಮಾಡಿಸಿದರು. ನಾಗದೇವತೆಯು ಕೂಡ ಗ್ರಾಮಸ್ಥನೊಬ್ಬನ ದೇಹ ಪ್ರವೇಶಿಸಿ, ಮಂಗ ಹೇಳಿದ್ದು ನಿಜ, ಅದಕ್ಕೆ ಸರಿಯಾದ ಅಂತ್ಯಕ್ರಿಯೆ ನೆರವೇರಿಸಿ ಎಂದು ಆದೇಶಿಸಿತಂತೆ.

ನಂತರ ಎಲ್ಲಾ ಹಳ್ಳಿಗರು ಸೇರಿ, ಮೃತ ವಾನರನ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ನೆರವೇರಿಸಿದರು. ಸಮೀಪದ ಗ್ರಾಮದ 15 ಮಂದಿಯನ್ನು ಕರೆಸಿದರು. ಅಖಂಡ ರಾಮಾಯಣದ ಪಾಠ ಪ್ರವಚನವೂ ಸಂಜೆಗೆ ನಡೆಯಿತು. ಮನುಷ್ಯನೊಬ್ಬ ಸತ್ತರೆ, ಅವನಿಗೆ ಮಾಡಬಹುದಾದ ಅಂತ್ಯವಿಧಿಗಳೆಲ್ಲವನ್ನೂ ನೆರವೇರಿಸಲಾಯಿತು. ಸುಮಾರು 20-25 ಮಂದಿ ಇದರಲ್ಲಿ ಪಾಲ್ಗೊಂಡರು. ಅವರೆಲ್ಲರೂ ತಮ್ಮ ಕುಟುಂಬದ ಸದಸ್ಯನೇ ಸಾವನ್ನಪ್ಪಿದಂತೆ ಕ್ಷೌರ ಮಾಡಿಸಿಕೊಂಡರು. ಉಜ್ಜಯಿನಿಯ ಕ್ಷಿಪ್ರಾ ನದಿ ತೀರದಲ್ಲಿ ಹಲವು ಅಪರ ಕರ್ಮಗಳು ನಡೆದವು.

WD
ಸಾವನ್ನಪ್ಪಿದ್ದ ಕೋತಿಯ ಅಂತ್ಯ ಸಂಸ್ಕಾರ ನೆರವೇರಿಸಿದ ಎರಡು ದಿನಗಳ ಬಳಿಕ, ಆ ಗ್ರಾಮದಲ್ಲಿ ಸಮೃದ್ಧ ಮಳೆಯಾಯಿತು. ಎಲ್ಲೆಡೆ ಹಚ್ಚ ಹಸಿರಿನ ನಾಡು ನಿರ್ಮಾಣವಾಯಿತು ಎನ್ನುತ್ತಾರೆ ಸ್ಥಳೀಯರು.

ಬಾರ್ಸಿ ಹಳ್ಳಿಯಲ್ಲಿ ನಡೆದ ಈ ಘಟನೆ ಬಗ್ಗೆ ನೀವೇನು ಹೇಳುತ್ತೀರಿ? ಇದು ಧಾರ್ಮಿಕ ನಂಬಿಕೆಯೇ ಅಥವಾ ಕೇವಲ ಮೂಢ ನಂಬಿಕೆಯೇ? ನಿಮಗೇನನ್ನಿಸುತ್ತದೆ?
ಸಂಬಂಧಿತ ಮಾಹಿತಿ ಹುಡುಕಿ
ವೀಡಿಯೋ ವೀಕ್ಷಿಸಿ
ಮತ್ತಷ್ಟು
ಜೋಡಿ ನಾಗರ ಹರಕೆಯಿಂದ ಇಷ್ಟಾರ್ಥ ಸಿದ್ಧಿ  
ಕರ್ರಗಿನ ಶಾಲಿನಿಂದ ರೋಗ ಚಿಕಿತ್ಸೆ!  
ನೀರಲ್ಲಿ ತೇಲುವ ಶ್ರೀ ನರಸಿಂಹ ವಿಗ್ರಹ!  
ಮೊಬೈಲ್‌ನಲ್ಲಿ ಭಕ್ತರ ಮೊರೆ ಆಲಿಸುವ ಗಣೇಶ  
ಚಹರೆ ನೋಡಿ ಗುಣಾವಗುಣ ಹೇಳೋದು ಸಾಧ್ಯವೇ?  
ಜೀವನ ಬದಲಾಯಿಸುತ್ತದೆಯೇ ಕನಸು?