ಮುಖ್ಯ ಪುಟ > ಧರ್ಮ > ನೀವು ನಂಬುವಿರಾ > ಕಥನ > ಮೈಮೇಲೆ ಬರುವ ದುರ್ಗೆ, ಕಾಳ ಭೈರವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಮೇಲೆ ಬರುವ ದುರ್ಗೆ, ಕಾಳ ಭೈರವ
ಮಾನವನ ಶರೀರದೊಳಗೆ ದೈವದೇವರುಗಳು ಆವಾಹನೆಯಾಗುವುದನ್ನು ಕೇಳಿದ್ದೀರಾ? ದೇವರು ಮೈಮೇಲೆ ಬಂದಿರುವ ವ್ಯಕ್ತಿ ಕೆಂಡದ ಮೇಲೆ ಬರಿಗಾಲಲ್ಲಿ ನಡೆದರೆ ಆತನಿಗೆ ಏನೂ ಆಗಲಾರದೆ? ಈ ಬಾರಿಯ “ನೀವು ನಂಬುವಿರಾ” ಸರಣಿಯಲ್ಲಿ ನಾವು ಈ ಕುರಿತಾದ ವಿಶಿಷ್ಟ ತಾಣವೊಂದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಇಲ್ಲಿ ಹಲವರ ಮೈಮೇಲೆ ದೇವಿ ಬಂದು, ತನ್ನ ಭಕ್ತರ ಸಮಸ್ಯೆಗಳನ್ನು ನಿವಾರಿಸಲು ನೆರವಾಗುತ್ತಾಳಂತೆ.

ಇದು ಇರೋದು ಮಧ್ಯಪ್ರದೇಶದ ಇಂದೋರ್ ಪಟ್ಟಣದಲ್ಲಿ. ಇಲ್ಲಿನ ದುರ್ಗಾ ದೇವಿಯ ಮಂದಿರದಲ್ಲಿ, ಭಜನೆಯ ಸಂದರ್ಭ ಕೆಲವು ಮಹಿಳೆಯರ ಮೈಮೇಲೆ ದುರ್ಗೆ ಹಾಗೂ ಪುರುಷರ ಮೈಮೇಲೆ ಆಕೆ ತನ್ನ ವಾಹನ ಹುಲಿಯ ಅಥವಾ ಕಾಳ ಭೈರವ ರೂಪದಲ್ಲಿ ಬರುತ್ತಾಳೆ ಅಂತ ಜನ ನಂಬುತ್ತಾರೆ. ದೇವಿಯೇ ತಮ್ಮ ಶರೀರದೊಳಗೆ ಆವಾಹಿಸಿದ್ದಾಳೆ ಎಂದು ಅವರಿಗೆ ಎಷ್ಟರ ಮಟ್ಟಿಗೆ ಬಲವಾದ ನಂಬಿಕೆ ಅಂದರೆ, ಉರಿಯುತ್ತಿರುವ ಕರ್ಪೂರವನ್ನು ಅವರು ನಾಲಿಗೆಯಲ್ಲಿ ಇರಿಸಿಕೊಳ್ಳುತ್ತಾರೆ. ಕೆಲವರು ಕೈಯಲ್ಲಿಯೂ ಉರಿಯುವ ಕರ್ಪೂರ ಇರಿಸಿಕೊಳ್ಳುತ್ತಾರೆ.

WD
ಇಷ್ಟು ಮಾತ್ರವೇ ಅಲ್ಲ, ದೇವಿ ಮತ್ತು ಕಾಳ ಭೈರವರು ಅಲ್ಲಿರುವ ಕೆಲವರ ಮೈಮೇಲೆ ಬಂದಾಗ, ಅವರು ಜತೆಯಾಗಿ ನೃತ್ಯವನ್ನೂ ಮಾಡುತ್ತಾರೆ. ನಿಗಿ ನಿಗಿ ಕೆಂಡದ ಮೇಲೆ ಬರಿಗಾಲಲ್ಲೇ ನಡೆಯುತ್ತಾರೆ. ಇತರರು ಕೂಡ ದುರ್ಗಾ ದೇವಿಯ ಆರಾಧನೆಯ ಭಾವದೊಂದಿಗೆ ಈ ವಿಚಿತ್ರ ಕಾರ್ಯಕ್ಕೆ ನೆರವಾಗುತ್ತಾರೆ.

ದೇವರು ಮಾನವ ದೇಹದಲ್ಲಿ ಆವಾಹನೆಯಾಗುತ್ತಾರೆ ಎಂಬುದು ನಿಜವೇ? ಅಥವಾ ಇದು ಭಕ್ತಿಯ ಪರಾಕಾಷ್ಠೆಯೇ? ನಿಮಗೇನನ್ನಿಸುತ್ತದೆ?
ಸಂಬಂಧಿತ ಮಾಹಿತಿ ಹುಡುಕಿ
ವೀಡಿಯೋ ವೀಕ್ಷಿಸಿ
ಮತ್ತಷ್ಟು
ಪುಣ್ಯ ಸ್ಥಳ ಈ ಸ್ಮಶಾನ!  
ವಾನರನ ಅಂತ್ಯಕ್ರಿಯೆಯಿಂದ ಗ್ರಾಮ ಸಮೃದ್ಧಿ  
ಜೋಡಿ ನಾಗರ ಹರಕೆಯಿಂದ ಇಷ್ಟಾರ್ಥ ಸಿದ್ಧಿ  
ಕರ್ರಗಿನ ಶಾಲಿನಿಂದ ರೋಗ ಚಿಕಿತ್ಸೆ!  
ನೀರಲ್ಲಿ ತೇಲುವ ಶ್ರೀ ನರಸಿಂಹ ವಿಗ್ರಹ!  
ಮೊಬೈಲ್‌ನಲ್ಲಿ ಭಕ್ತರ ಮೊರೆ ಆಲಿಸುವ ಗಣೇಶ