ಮುಖ್ಯ ಪುಟ > ಧರ್ಮ > ನೀವು ನಂಬುವಿರಾ > ಕಥನ > ರೂಪ ಬದಲಾಯಿಸೋ ' ನಾಗಿಣಿ '
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೂಪ ಬದಲಾಯಿಸೋ ' ನಾಗಿಣಿ '
(ವೆಬ್‌ದುನಿಯಾ ಡೆಸ್ಕ್)

ರೂಪ ಬದಲಾಯಿಸೋ ಹಾವು ಅಥವಾ ನಾಗಿಣಿಯ ಬಗ್ಗೆ ನೀವು ಚಲನಚಿತ್ರಗಳಲ್ಲಿ ಮಾತ್ರ ನೋಡಿರಬಹುದು. ಆದರೆ, ಈ ಬಾರಿಯ ನೀವು ನಂಬುವಿರಾ ಸರಣಿಯಲ್ಲಿ ನಾವು ನಿಮಗೆ ಪರಿಚಯಿಸ್ತಿರೋದು ತನ್ನ ಪ್ರೀತಿಯ ಪತಿಯನ್ನು ಪಡೆಯುವುದಕ್ಕೋಸ್ಕರ ಮರ್ತ್ಯಲೋಕದಲ್ಲಿ ಪ್ರಯತ್ನದಲ್ಲಿ ನಿರತವಾಗಿರುವ ರೂಪ ಬದಲಾಯಿಸುವ ಹಾವಿನ ಬಗ್ಗೆ.

ಹವನ ಮಾಡುತ್ತಿರುವಾಗಿನ 24 ತಾಸುಗಳ ಅವಧಿಯಲ್ಲೊಂದು ಬಾರಿ ತಾನು ಹಾವಾಗಿ ರೂಪ ಪರಿವರ್ತನೆಗೊಂಡು, ತನ್ನ ಮೂವರು ಸಹೋದರಿಯರನ್ನು ಭೇಟಿಯಾಗುತ್ತೇನೆ ಎಂದು ತನ್ನನ್ನು ರೂಪ ಬದಲಾಯಿಸೋ ಹಾವು ಎಂದು ಕರೆದುಕೊಳ್ಳುವ ಮಾಯಾ ಹೇಳುತ್ತಾಳೆ. ಈ ಸಹೋದರಿಯರು ತನ್ನ ಪ್ರೀತಿಯ ಪತಿಯನ್ನು ಪಡೆಯುವುದು ಹೇಗೆಂದು ಈಕೆಗೆ ಸಲಹೆ ನೀಡುತ್ತಾರಂತೆ. ಮಾಯಾ ಹೇಳುವ ಪ್ರಕಾರ, ಆಕೆಯ ಮೂವರು ಸಹೋದರಿಯರು ಕೂಡ ರೂಪ ಬದಲಿಸಿರೋ ಹಾವುಗಳಂತೆ.
WD


ತನಗೆ ಮದುವೆಯಾಗಿದೆ, ಮತ್ತು ಶೀಘ್ರದಲ್ಲೇ ತಾನು ತನ್ನ ಪತಿಯನ್ನು ಸೇರಿಕೊಳ್ಳುತ್ತೇನೆ ಎಂಬ ಭಾವನೆ ಮಾಯಾಳಿಗೆ ಬಾಲ್ಯದಿಂದಲೇ ಇತ್ತು. ತನ್ನ ಪತಿಯು ಈ ಲೌಕಿಕ ಜಗತ್ತಿನ ಸಂಸಾರ ಲಾಲಸೆಯಲ್ಲಿ ಸಂಪೂರ್ಣವಾಗಿ ಮುಳುಗಿದ್ದು, ತನ್ನೆಲ್ಲಾ ಶಕ್ತಿಯನ್ನು ಕಳೆದುಕೊಂಡಿದ್ದಾನೆ ಎನ್ನುತ್ತಾಳೆ ಮಾಯಾ.

WD
ತನ್ನ ಪೂರ್ವ ಜನ್ಮದ ಕಥೆ ಹೇಳುವ ಮಾಯಾ, ದ್ವಾಪರ ಯುಗದಲ್ಲಿ ತಾನೊಂದು ಪ್ರಪಾತಕ್ಕೆ ಬಿದ್ದೆ. ಪೀರ್ ಬಾಬಾ ಅವರು ತನ್ನ ರಕ್ಷಣೆಗಾಗಿ ಗೋಪಾಲ ಹೆಸರಿನ ಸರ್ಪವೊಂದನ್ನು ಕಳುಹಿಸಿದರು. ಆ ಸಂದರ್ಭ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತು. ಆದರೆ, ಅದ್ಯಾವುದೋ ಸಮಸ್ಯೆಯಿಂದಾಗಿ ಅವರಿಬ್ಬರಿಗೂ ವಿವಾಹವಾಗುವುದು ಸಾಧ್ಯವಿರಲಿಲ್ಲ, ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅಂದಿನಿಂದ ಈ ನಾಗಿಣಿಯು ತನ್ನ ಪ್ರಿಯಕರನಿಗಾಗಿ ಅಲೆದಾಡುತ್ತಿದೆ ಎನ್ನುತ್ತಾಳೆ ಆಕೆ.

WD
ನಾಗಲೋಕ ಮತ್ತು ಮರ್ತ್ಯ ಲೋಕವನ್ನೊಳಗೊಂಡ ವಿಚಿತ್ರವಾದ, ರೂಪ ಬದಲಾಯಿಸುವ ಹಾವಿನ ಕಥೆ ಕೇಳಿಬರುತ್ತಿರುವುದು ಮಧ್ಯಪ್ರದೇಶದ ಬಾಢ್‌ನಗರ ಎಂಬಲ್ಲಿ. ಈ ಕಥೆಗಳಿಂದ ಪ್ರೇರಣೆ ಪಡೆದಿರುವ ಸ್ಥಳೀಯ ಜನರು ಮಾಯಾಳನ್ನು ತಾಯಿ ಭಗವತಿ ಎಂದು ಪೂಜಿಸಲಾರಂಭಿಸಿದ್ದಾರೆ. ಆಕೆಯನ್ನು ಪೂಜಿಸುವುದು ಜನರ ಭಕ್ತಿಯ ಸಂಕೇತವೇ ಅಥವಾ ರೂಪ ಬದಲಾಯಿಸುವ ಕಥೆಯೇ ಒಂದು ಮೂಢ ನಂಬಿಕೆಯೇ? ವಿಜ್ಞಾನ ಯುಗದಲ್ಲೂ ಇಂಥ ಪ್ರಕರಣಗಳನ್ನು ನಂಬಬಹುದೇ? ನಿಮ್ಮ ಅಭಿಪ್ರಾಯ ತಿಳಿಸಿ.
ಸಂಬಂಧಿತ ಮಾಹಿತಿ ಹುಡುಕಿ
ವೀಡಿಯೋ ವೀಕ್ಷಿಸಿ
ಮತ್ತಷ್ಟು
ಮೈಮೇಲೆ ಬರುವ ದುರ್ಗೆ, ಕಾಳ ಭೈರವ  
ಪುಣ್ಯ ಸ್ಥಳ ಈ ಸ್ಮಶಾನ!  
ವಾನರನ ಅಂತ್ಯಕ್ರಿಯೆಯಿಂದ ಗ್ರಾಮ ಸಮೃದ್ಧಿ  
ಜೋಡಿ ನಾಗರ ಹರಕೆಯಿಂದ ಇಷ್ಟಾರ್ಥ ಸಿದ್ಧಿ  
ಕರ್ರಗಿನ ಶಾಲಿನಿಂದ ರೋಗ ಚಿಕಿತ್ಸೆ!  
ನೀರಲ್ಲಿ ತೇಲುವ ಶ್ರೀ ನರಸಿಂಹ ವಿಗ್ರಹ!