ಮುಖ್ಯ ಪುಟ > ಧರ್ಮ > ನೀವು ನಂಬುವಿರಾ > ಕಥನ > ಮುಮ್ತಾಜ್ ಬೇಗಂಳ ಆತ್ಮ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಮ್ತಾಜ್ ಬೇಗಂಳ ಆತ್ಮ!
ಆಗ್ರಾದ ತಾಜ್ ಮಹಲ್ ಪ್ರೀತಿಯ ಸಂಕೇತ. ಮೊಘಲ್ ಚಕ್ರವರ್ತಿ ಶಹಜಹಾನ್ ಮತ್ತು ಬೇಗಂ ಮುಮ್ತಾಜ್ ಜಗತ್ತಿಗೇ ಪ್ರೇಮ ಸಂದೇಶ ಸಾರಿದ ಸ್ಥಳವಿದು. ಆದರೆ, ತಾಜ್ ಮಹಲ್ ಕಟ್ಟಿಸುವ ಮೊದಲು, ಮುಮ್ತಾಜ್‌ಳ ಮೃತದೇಹವನ್ನು ಇರಿಸಿದ್ದು ಬುರ್ಹಾನ್‌ಪುರದ ಬುಲಾರಾ ಮಹಲ್‌ನಲ್ಲಿ ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಆ ಅರಮನೆಯಲ್ಲಿ ಮುಮ್ತಾಜ್‌ಳ ಆತ್ಮ ಇನ್ನೂ ತಿರುಗಾಡುತ್ತಿದೆ ಎಂದು ನಂಬಿದ್ದಾರೆ ಜನ.

400 ವರ್ಷಗಳ ಹಿಂದೆ ಮೊಘಲ್ ರಾಣಿ ಮುಮ್ತಾಜ್, ಬುಲಾರಾ ಮಹಲಿನಲ್ಲಿ ತೀರಿಕೊಂಡಾಗ ಆಕೆಯ ಸ್ಮರಣಾರ್ಥವಾಗಿ ಒಂದು ಅದ್ಭುತ ಸ್ಮಾರಕ ಕಟ್ಟಿಸಬೇಕೆಂಬ ಇಚ್ಛೆ ಶಹಜಹಾನ್‌ನದ್ದಾಗಿತ್ತು. ಆಗ ಆತನಿಗೆ ಹೊಳೆದದ್ದೇ ತಾಜ್ ಮಹಲು ಕಟ್ಟಿಸುವ ಯೋಚನೆ. ಬುರ್ಹಾನ್‌ಪುರದಲ್ಲೇ ಕಟ್ಟಿಸಬೇಕೆಂಬ ಇಚ್ಛೆ ಇದ್ದಿತ್ತಾದರೂ, ಕೊನೆಗೆ ಯಾವುದೋ ಕಾರಣಕ್ಕೆ ಅದನ್ನು ಆಗ್ರಾದಲ್ಲಿ ಕಟ್ಟಿಸಲಾಯಿತು. ತಾಜ್ ಮಹಲ್ ಪೂರ್ಣಗೊಂಡ ಬಳಿಕ ಮುಮ್ತಾಜ್ ಮೃತದೇಹವನ್ನು ಅಲ್ಲಿಗೆ ವರ್ಗಾಯಿಸಲಾಯಿತು. ಆದರೆ ಆಕೆಯ ದೇಹ ಹೋದರೂ, ಆತ್ಮ ಮಾತ್ರ ಇನ್ನೂ ಬುರ್ಹಾನ್‌ಪುರ ಅರಮನೆಯಲ್ಲೇ ಇದೆ ಎಂಬುದು ಸ್ಥಳೀಯರ ನಂಬಿಕೆ.

WD
ಇಲ್ಲಿ ಚಿತ್ರ ವಿಚಿತ್ರ ಸದ್ದು, ಕೂಗಾಟ, ಅರಚಾಟ ಮುಂತಾದವು ಆಗಾಗ್ಗೆ ಕೇಳಿಬರುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಆದರೆ ಇದುವರೆಗೂ ಈ ಆತ್ಮವು ಯಾರಿಗೂ ತೊಂದರೆ ನೀಡಿಲ್ಲವಂತೆ.

ವಾಸ್ತವಾಂಶಗಳ ಪ್ರಕಾರ, 1631ರಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ ಬಳಿಕ ಮುಮ್ತಾಜ್ ಮೃತಪಟ್ಟಿದ್ದಳು. ಈ ಕಾರಣದಿಂದಾಗಿಯೇ ಅವಳ ಅತೃಪ್ತ ಆತ್ಮವು ಅಲ್ಲಿ ಸುತ್ತಾಡುತ್ತಿದೆ ಎಂದು ನಂಬಲಾಗುತ್ತಿದೆ.

ಬುರ್ಹಾನ್‌ಪುರದ ಅರಮನೆಯಲ್ಲಿ ಆತ್ಮ ಸುತ್ತಾಡುತ್ತಿದೆ ಎಂಬುದು ನಿಜ ಅಂತ ಅನ್ನಿಸ್ತಿದೆಯಾ? ಅಥವಾ ಇಲ್ಲಿ ಅಕ್ರಮ ವ್ಯವಹಾರ ನಡೆಸುವಂತಾಗಲು ಜನರನ್ನು ದೂರವಿಡುವ ಸ್ಥಳೀಯ ಕಿಡಿಗೇಡಿಗಳ ತಂತ್ರವಾಗಿರಬಹುದೇ?

ಈ ವಿಷಯದ ಬಗ್ಗೆ ನೀವೇನಂತೀರಿ? ನಮಗೆ ಬರೆಯಿಸಿ.
ವೀಡಿಯೋ ವೀಕ್ಷಿಸಿ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೂಪ ಬದಲಾಯಿಸೋ ' ನಾಗಿಣಿ '  
ಮೈಮೇಲೆ ಬರುವ ದುರ್ಗೆ, ಕಾಳ ಭೈರವ  
ಪುಣ್ಯ ಸ್ಥಳ ಈ ಸ್ಮಶಾನ!  
ವಾನರನ ಅಂತ್ಯಕ್ರಿಯೆಯಿಂದ ಗ್ರಾಮ ಸಮೃದ್ಧಿ  
ಜೋಡಿ ನಾಗರ ಹರಕೆಯಿಂದ ಇಷ್ಟಾರ್ಥ ಸಿದ್ಧಿ  
ಕರ್ರಗಿನ ಶಾಲಿನಿಂದ ರೋಗ ಚಿಕಿತ್ಸೆ!