ಮುಖ್ಯ ಪುಟ > ಧರ್ಮ > ನೀವು ನಂಬುವಿರಾ > ಕಥನ > ದೆವ್ವ ಬಾಧೆ ಪೀಡಿತ ಹಳ್ಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆವ್ವ ಬಾಧೆ ಪೀಡಿತ ಹಳ್ಳಿ
ಮಾನವ ಶರೀರದೊಳಗೆ ಪ್ರೇತಾತ್ಮ ಸೇರಿಕೊಳ್ಳುವ ಕಥೆಗಳ ಬಗ್ಗೆ ನೀವೀಗಾಗಲೇ ಕೇಳಿದ್ದೀರಿ. ಈ ಬಾರಿಯ ನಮ್ಮ ‘ನೀವು ನಂಬುವಿರಾ’ ಸರಣಿಯಲ್ಲಿ, ಇಡೀ ಹಳ್ಳಿಯೇ ದೆವ್ವಗಳು-ಪಿಶಾಚಿಗಳಿಂದ ಪೀಡಿತವಾಗಿರುವ ಬಗ್ಗೆ ನಿಮಗೆ ವಿವರಿಸಲಿದ್ದೇವೆ.

ಮಧ್ಯಪ್ರದೇಶದ ಖರ್ಗೋನ್ ಎಂಬಲ್ಲಿನ ಬೈದಾ ಎಂಬ ಗ್ರಾಮದಲ್ಲಿ ಐವರು ಹಳ್ಳಿಗರಿಗೆ ವಿಚಿತ್ರ ಕಾಯಿಲೆಯೊಂದು ಬಾಧಿಸಿ, ಅವರು ದಿಢೀರ್ ಆಗಿ ಸಾವನ್ನಪ್ಪಿದರು. ಈ ಆಕಸ್ಮಿಕ ಸಾವಿಗೆ ಕಾರಣ ಏನು ಅಂತ ಹಳ್ಳಿಗರು ತಲೆಕೆಡಿಸಿಕೊಂಡು, ಕೊನೆಗೆ ದಾರಿಕಾಣದೆ ಒಬ್ಬ ಸ್ಥಳೀಯ ಮಂತ್ರವಾದಿಯನ್ನು ಭೇಟಿಯಾದರು. ಈ ಸಾವಿಗೆ ಪ್ರೇತಾತ್ಮವೇ ಕಾರಣ ಎಂದು ಹೇಳಿದ ಮಂತ್ರವಾದಿ, ಈ ಬಗ್ಗೆ ಸಮರ್ಪಕ ಕ್ರಿಯಾಕರ್ಮಗಳನ್ನು ಕೈಗೊಳ್ಳದಿದ್ದರೆ, ಈ ದೆವ್ವಗಳು ಇತರರನ್ನೂ ಕಾಡಬಹುದು ಎಂದು ಎಚ್ಚರಿಸಿಬಿಟ್ಟ. ಬೆದರಿದ ಗ್ರಾಮಸ್ಥರು, ದೆವ್ವಬಾಧೆಯಿಂದ ತಮ್ಮನ್ನು ಪಾರು ಮಾಡುವಂತೆ ಮಂತ್ರವಾದಿಯನ್ನು ಕೋರಿಕೊಂಡರು.

ಈ ಗ್ರಾಮವನ್ನು ದೆವ್ವಗಳು ಆವರಿಸಿಕೊಂಡಿದೆ ಎಂಬ ನಂಬಿಕೆಯೊಂದಿಗೆ, ಯಾರೆಲ್ಲಾ ಮೂಲತಃ ಈ ಗ್ರಾಮದವರಲ್ಲವೋ, ಅವರೆಲ್ಲರೂ ತಕ್ಷಣವೇ ಹಳ್ಳಿ ತೊರೆಯುವಂತೆ ಮಂತ್ರವಾದಿ ಸೂಚಿಸಿದ. ಉಳಿದ ಹಳ್ಳಿಗರೆಲ್ಲರೂ ಸ್ಥಳೀಯ ದೇವಸ್ಥಾನದಲ್ಲಿ ತಾನು ಕೈಗೊಳ್ಳಲಿರುವ ಮಂತ್ರ-ತಂತ್ರಗಳಲ್ಲಿ ಭಾಗವಹಿಸುವಂತೆಯೂ ಆದೇಶಿಸಿದ.
WD


ಕೊನೆಗೆ, ದೆವ್ವಗಳನ್ನು ಗ್ರಾಮದಿಂದ ಓಡಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ವಿಚಿತ್ರವಾದ ದಿರಿಸು ಧರಿಸಿ ಮಾಂತ್ರಿಕ ಚಿತ್ರ ವಿಚಿತ್ರ ವಿಧಿಗಳನ್ನು ನಡೆಸಿದ. ಇದರ ಪರಿಣಾಮ, ಇಡೀ ವಾತಾವರಣದಲ್ಲಿ ಒಂದು ರೀತಿಯ ಭಯ ಮಿಶ್ರಿತ ಕುತೂಹಲ. ಆ ಬಳಿಕ ಗ್ರಾಮದ ಸುತ್ತ ಹಾಲನ್ನು ಸುರಿದು ಗಡಿ ಗುರುತಿಸಿದ. ಮಾತ್ರವಲ್ಲದೆ, ಹಳ್ಳಿಯು ಇದೀಗ ದೆವ್ವ ಬಾಧೆಯಿಂದ ಮುಕ್ತವಾಗಿದೆ ಎಂದು ಘೋಷಿಸಿದ. ಜನರೆಲ್ಲರೂ ಸಂಭ್ರಮಿಸಿದರು.

ಬಹುಶಃ ಇದುವೇ ಮಾನವನ ಸಹಜ ಗುಣ ಅನ್ನಿಸುತ್ತದೆ. ತಮಗೆ ವಿಚಿತ್ರವಾಗಿ ಕಾಣುವ ಅಥವಾ ಏನೆಂದು ಅರ್ಥ ಮಾಡಿಕೊಳ್ಳಲಾಗದ ವಿದ್ಯಮಾನ ನಡೆದಾಗ ಅದನ್ನು ಮೂಢ ನಂಬಿಕೆಯ ಜೊತೆ ತಳುಕು ಹಾಕುತ್ತಾನೆ ಮಾನವ. ಆದರೆ, ಇಂಥ ಪ್ರಸಂಗಗಳ ದುರ್ಲಾಭ ಪಡೆಯಲು, ಮುಗ್ಧರನ್ನು ವಂಚಿಸಿ, ತಾವು ಸಾಕಷ್ಟು ದುಡ್ಡು ಮಾಡಿಕೊಳ್ಳಲು ಜನರು ಕಾಯುತ್ತಲೇ ಇರುತ್ತಾರೆ.

ಈ ಬಗ್ಗೆ ನಿಮಗೇನು ಅನ್ನಿಸುತ್ತದೆ? ಇಂಥದ್ದನ್ನೆಲಾ ನೀವು ನಂಬ್ತೀರಾ? ನಮಗೆ ಬರೆದು ತಿಳಿಸಿ.
ವೀಡಿಯೋ ವೀಕ್ಷಿಸಿ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಮ್ತಾಜ್ ಬೇಗಂಳ ಆತ್ಮ!  
ರೂಪ ಬದಲಾಯಿಸೋ ' ನಾಗಿಣಿ '  
ಮೈಮೇಲೆ ಬರುವ ದುರ್ಗೆ, ಕಾಳ ಭೈರವ  
ಪುಣ್ಯ ಸ್ಥಳ ಈ ಸ್ಮಶಾನ!  
ವಾನರನ ಅಂತ್ಯಕ್ರಿಯೆಯಿಂದ ಗ್ರಾಮ ಸಮೃದ್ಧಿ  
ಜೋಡಿ ನಾಗರ ಹರಕೆಯಿಂದ ಇಷ್ಟಾರ್ಥ ಸಿದ್ಧಿ