ಮುಖ್ಯ ಪುಟ  ಧರ್ಮ  ಕ್ರೈಸ್ತ ಧರ್ಮ  ಕ್ರೈಸ್ತ ಧರ್ಮದ ಕುರಿತು
 
ಏಸುಕ್ರಿಸ್ತ ಆಯ್ಕೆ ಮಾಡಿದ ಹನ್ನೆರಡು ಮಂದಿ ಶಿಷ್ಯರು.
ಹನ್ನೆರಡು ಮಂದಿ ಶಿಷ್ಯರಲ್ಲದೇ ಸಂತಪಾಲ್ ಎಂಬ ಬೇರೊಬ್ಬ ಶಿಷ್ಯರು ಏಸುವಿಗೆ ಅತ್ಯಂತ ಪ್ರೀತಿ ಪಾತ್ರರಾಗಿದ್ದರು. ಇವರು ಚಿಕ್ಕ ವಯಸ್ಸಿನಿಂದಲೇ ಯಹೂದಿ ಮತದ ನಿಷ್ಟಾವಂತರಾಗಿದ್ದರು. ಇವರು ತಮ್ಮ 35ನೇ ವಯಸ್ಸಿನಲ್ಲಿ ಏಸುವನ್ನು ನಾಯಕರನ್ನಾಗಿ ಪರಿಗಣಿಸಿದರು.

ನಿರೋ ರಾಜನ ಅಡಳಿತದಲ್ಲಿ ಇವರು ತ್ಯಾಗ ಮಾಡುವ ಮೂಲಕ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು. ಹೊಸ ಒಡಂಬಡಿಕೆಯಲ್ಲಿ 13 ಗ್ರಂಥಗಳ ಕರ್ತ ಸಂತಪಾಲ್ ಅವರು. ಅಲ್ಲದೇ ಏಸುವಿನ ಮರಣದ ನಂತರ ಅವರ ಸಂದೇಶಗಳನ್ನು ಹಲವಾರು ದೇಶಗಳಲ್ಲಿ ಪ್ರಚಾರ ಮಾಡಿದ ಹಿರಿಮೆ ಸಂತಪಾಲ್ ಅವರಿಗೆ ಸಲ್ಲುತ್ತದೆ.

ಹನ್ನೆರಡು ಮಂದಿ ಶಿಷ್ಯರಲ್ಲಿ ಸಂತ ಯಾಕೂಬ್ ,ಯೋಹಾನ್ ಎಂಬುವರು ಪರಮ ಆಪ್ತ ಶಿಷ್ಯರಾಗಿದ್ದರು.ಏಸುವನ್ನು ಹಿಡಿಯಲು ಮಧ್ಯೆರಾತ್ರಿಯಲ್ಲಿ ಕೊಲೆಗಾರರು ಬಂದಾಗ ಜತೆಯಲ್ಲಿದ್ದವರು ಮೀನು ಹಿಡಿಯುವ ವೃತ್ತಿಯವರು. ಮತ್ತೆ ಕೆಲವು ಶಿಷ್ಯರು ವಿವಿಧ ವ್ಯಾಪಾರಿಗಳಾಗಿದ್ದರು. ಎಲ್ಲರು ಇಸ್ರೇಲ್ ದೇಶದ ನಿವಾಸಿಗಳು.

ಗುರು ಹೇಗೋ ಶಿಷ್ಯರು ಹಾಗೇಯೇ ಎಂಬಂತೆ ತಮ್ಮ ನಾಯಕನ ಮರಣದ ನಂತರ ಇವರೆಲ್ಲರು ಧರ್ಮ ಬೋಧನೆಯಲ್ಲಿ ನಿರತರಾದರು, ರೋಗಿಗಳಿಗೆ ಸಹಾಯ ಮಾಡಿದರು. ಅಂಗವಿಕಲರು ಮತ್ತು ಅನಾಥರಿಗೆ ರಕ್ಷಣೆ ನೀಡಿ ಸಲುಹಿದರು.

ಸಂತ ಥಾಮಸ್ ಏಸುಕ್ರಿಸ್ತನ ಸಂದೇಶವನ್ನು ವಿಶ್ವದಾದ್ಯಂತ ಪ್ರಚಾರ ಮಾಡಿದರು. ಅವರು ಭಾರತಕ್ಕೆ ಬಂದು ಚನ್ನೈ ನಗರದ ಮೈಲಾಪುರದಲ್ಲಿ ಕೊಲೆಯಾದರೆಂಬ ಐತಿಹಾಸಿಕ ಉಲ್ಲೇಖವಿದೆ. ಈ ಶಿಷ್ಯರಲ್ಲಿ ಅನೇಕ ಮಂದಿ ನೀಡಿರುವ ವಿವರಗಳು ಬೈಬಲ್‌ನಲ್ಲಿ ಲಭ್ಯವಾಗಿವೆ.ಅವುಗಳು ಹೊಸ ಒಡಂಬಡಿಕೆಯ ಮುಖ್ಯಭಾಗದಲ್ಲಿ ಸೇರಿಕೊಂಡಿವೆ. ಇವರಲ್ಲಿ ಬಹುಮಂದಿ ಸಹಜವಾದ ಮರಣವನ್ನು ಕಾಣಲಿಲ್ಲ. ಬಹುಪಾಲು ಶಿಷ್ಯರು ಆತ್ಮಾರ್ಪಣೆ ಮಾಡಿಕೊಂಡಿರುವ ಉಲ್ಲೇಖಗಳು ದೊರೆಯುತ್ತವೆ.

ಡಾ. ವಿ. ಗೋಪಾಲಕೃಷ್ಣ
1| 2
ಮತ್ತಷ್ಟು
ಕ್ರಿಸ್ತ ಧರ್ಮದ ಆರಾಧನೆ ಮತ್ತು ಆಚರಣೆಗಳು
ಕ್ರಿಸ್‌ಮಸ್ ಆಚರಣೆ
ಬೈಬಲ್ : ಹಳೆಯ ಒಡಂಬಡಿಕೆ
ಕ್ರಿಶ್ಚನ್‌ರ ಪವಿತ್ರ ಗ್ರಂಥ ಬೈಬಲ್
ಕ್ರಿಸ್ತೋದಯ ಹಾಗೂ ಸಂದೇಶ