ಮುಖ್ಯ ಪುಟ  ಧರ್ಮ  ಹಿಂದೂಧರ್ಮ  ದೇವರು/ದೇವತೆಗಳು
 
ಗಣಪತಿಯ ಹುಟ್ಟಿನ ಕುರಿತ ನಂಬುಗೆಗಳು
webdunia
ಶಿವ ಪಾರ್ವತಿಯರ ಮಗನಾಗಿರುವ ಗಣಪತಿಗೆ ವಿಘ್ನವಿನಾಶಕನೆಂಬ ಹೆಸರು. ಯಾವುದೇ ಶುಭ ಸಂದರ್ಭದಲ್ಲಿ ಮೊದಲ ಪೂಜೆ ಗಣೇಶನಿಗೆ. ಗಣೇಶನನ್ನು ವಂದಿಸಿಯೇ ಇತರ ಕೆಲಸ ಆರಂಭಿಸುವುದು ಹಿಂದೂ ಆಸ್ತಿಕ ಸಂಪ್ರದಾಯ.

ಗಣಪತಿಯ ಜನನದ ಕುರಿತು ಮತ್ತು ಆತನ ಆನೆಯ ತಲೆಯ ಕುರಿತು ಬೇರೆ ಬೇರೆ ಕಥೆಗಳಿವೆ. ಶಿವ ಪುರಾಣದಲ್ಲಿರುವ ಅತ್ಯಂತ ಜನಪ್ರಿಯ ಕಥೆಯ ಪ್ರಕಾರ-
ಒಂದು ದಿನ ಶಿವನ ಪತ್ನಿ ಪಾರ್ವತಿ ಸ್ನಾನಕ್ಕೆ ಹೊರಟಿದ್ದಳು. ಆ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ಯಾರಾದರೂ ಬಂದು ಆಕಸ್ಮಿಕವಾಗಿ ಮನೆಗೆ ನುಗ್ಗಿದರೆ ತಡೆಯಲು ಯಾರೂ ಇರಲಿಲ್ಲ.

ಹಾಗಾಗಿ ಪಾರ್ವತಿ ತಾನು ಸ್ನಾನಕ್ಕೆ ಬಳಸಲು ಸಿದ್ಧಪಡಿಸಿಟ್ಟ ಅರಿಶಿನದ ಪುಡಿಯಿಂದ ಬಾಲಕನ ಮೂರ್ತಿಯೊಂದನ್ನು ಸೃಷ್ಟಿಸಿ, ತನ್ನ ಶಕ್ತಿಯಿಂದ ಮೂರ್ತಿಗೆ ಜೀವತುಂಬಿದಳು. ನಂತರ ತಾನು ಸ್ನಾನಕ್ಕೆ ತೆರಳುವುದಾಗಿಯೂ ಮನೆಯೊಳಗೆ ಯಾರನ್ನೂ ಬಿಡಬಾರದೆಂದು ಬಾಲಕನಿಗೆ ಆಜ್ಞಾಪಿಸಿದಳು.

ಪಾರ್ವತಿ ಸ್ನಾನಕ್ಕೆ ತೆರಳಿದ ಸ್ವಲ್ಪ ಹೊತ್ತಿನಲ್ಲಿ ಹೊರಗಡೆ ತೆರಳಿದ್ದ ಶಿವ ಮನೆಗೆ ಮರಳಿದ. ತಾಯಿಯ ಅಜ್ಞಾಪಾಲಕನಾಗಿದ್ದ ಗಣಪತಿ ಶಿವನನ್ನು ಮನೆಯೊಳಗೆ ಬಿಡಲಿಲ್ಲ. ತಾನು ಪಾರ್ವತಿಯ ಗಂಡನೆಂದು ಪರಿಪರಿಯಾಗಿ ತಿಳಿಹೇಳಿದರೂ ಗಣೇಶ ಶಿವನಿಗೆ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸಿಟ್ಟಿನಿಂದ ಸಹನೆ ಕಳೆದುಕೊಂಡ ಶಿವ ತನ್ನ ತ್ರಿಶೂಲದಿಂದ ಬಾಲಕನ ಶಿರಚ್ಛೇದಿಸಿದ.

ಸ್ನಾನ ಮುಗಿಸಿ ಹೊರಬಂದ ಪಾರ್ವತಿ ತನ್ನ ಪುತ್ರನ ದುಸ್ಥಿತಿ ಕಂಡು ತೀವ್ರವಾಗಿ ಮರುಗಿದಳಲ್ಲದೆ ಅತೀವ ಕೋಪಗೊಂಡಳು. ತನ್ನ ಮಗನಿಗೆ ಮತ್ತೆ ಜೀವದಾನ ನೀಡುವಂತೆ ಶಿವನನ್ನು ವಿನಂತಿಸಿದಳು. ಆದರೆ ಶಿವನ ತ್ರಿಶೂಲ ಅತ್ಯಂತ ಶಕ್ತಿಯುತವಾಗಿದ್ದು, ಬಾಲಕನ ತಲೆಯನ್ನು ಬಹುದೂರ ಎಸೆಯಲ್ಪಟ್ಟಿತ್ತು. ತಲೆಯನ್ನು ಹುಡುಕಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು.

ಕೊನೆಯದಾಗಿ ಶಿವ ಬ್ರಹ್ಮನೊಡನೆ ಸಮಾಲೋಚನೆ ನಡೆಸಿದ. ಈ ವೇಳೆಗೆ ಬ್ರಹ್ಮ, ಪ್ರಥಮವಾಗಿ ದೃಷ್ಟಿಗೆ ಬಿದ್ದ ಉತ್ತರಕ್ಕೆ ತಲೆ ಮಾಡಿ ಮಲಗಿದ್ದ ಯಾವುದೇ ಜೀವಿಯ ತಲೆಯನ್ನು ತಂದು ಬಾಲಕನಿಗೆ ಜೋಡಿಸುವಂತೆ ಸಲಹೆ ನೀಡಿದರು.

ಶಿವ ತನ್ನ ಗಣವನ್ನು ಕರೆದು, ಉತ್ತರಕ್ಕೆ ತಲೆ ಹಾಕಿ ಮಲಗಿರುವ ಯಾವುದೇ ಜೀವಿಯ ತಲೆಯನ್ನು ತರುವಂತೆ ಆದೇಶಿಸಿದ. ಶಿವನ ಆದೇಶದಂತೆ ತೆರಳಿದ ಗಣಕ್ಕೆ ಉತ್ತರಕ್ಕೆ ತಲೆಹಾಕಿ ಮಲಗಿದ್ದು ಸಾಯುವ ಸ್ಥಿತಿಯಲ್ಲಿರುವ ಆನೆಯೊಂದು ಕಂಡು ಬಂತು. ಆನೆ ಸತ್ತಬಳಿಕ ಆನೆಯ ತಲೆಯನ್ನು ತಂದು ಬಾಲಕನಿಗೆ ಜೋಡಿಸಿ ಮರುಜೀವ ನೀಡಲಾಗಿ, ಗಣಪತಿ ಅಥವಾ ಗಣಗಳ ನಾಯಕನೆಂಬ ನಾಮಕರಣ ಮಾಡಲಾಯಿತು.
1| 2| 3| 4
ಮತ್ತಷ್ಟು
ಸೃಷ್ಟಿಕರ್ತ ಬ್ರಹ್ಮ