WD ಭಾರತವು ವಿಭಿನ್ನ ನಂಬಿಕೆಗಳು, ಆಚರಣೆಗಳ ನೆಲೆವೀಡು. ಇಲ್ಲಿ ನೆಲೆಸಿದ ಸಾಧು ಸಂತರು, ಮಹಾನ್ ಪುರುಷರು ತಮ್ಮದೇ ವೈವಿಧ್ಯಮಯ ಸರಳ ಜೀವನ ಶೈಲಿಯಿಂದ, ಮಹಾನ್ ಸಾಧನೆಗಳಿಂದ, ಪವಾಡಗಳಿಂದ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ. ಅಂತಹ ಪುಣ್ಯ ಪುರುಷರ ಸಾಲಿನ ಅಗ್ರಗಣ್ಯರಲ್ಲೊಬ್ಬರು ಶ್ರೀ ಶಿರಡಿ ಸಾಯಿ ಬಾಬಾ.ಗೋದಾವರಿ ತಟದ ಅಹಮದ್ ನಗರವು ಹಲವಾರು ಪುಣ್ಯ ಪುರುಷರಿಗೆ ಆಶ್ರಯಸ್ಥಾನವಾಗಿ ಪುಣ್ಯ ಸಂಪಾದಿಸಿದೆ. ಸಾಧು ಸಂತರು ಈ ಪ್ರದೇಶದಲ್ಲಿ ಅವತಾರವೆತ್ತಿ ಈ ಸ್ಥಳವನ್ನು ಪಾವನವಾಗಿಸಿದ್ದಾರೆ. ಅಹಮದ್