WD ಮಧ್ಯಪ್ರದೇಶದ ಉಜ್ಜಯಿನಿ ದೇವಾಲಯಗಳ ನಗರ. ಪುರಾಣಗಳಲ್ಲೂ ಈ ನಗರದ ಉಲ್ಲೇಖವಿದೆ. ಈ ಬಾರಿ ನಮ್ಮ ಧಾರ್ಮಿಕ ಯಾತ್ರೆ ಉಜ್ಜಯಿನಿಯ ಮಂಗಳನಾಥ ದೇವಸ್ಥಾನವನ್ನು ಸಂದರ್ಶಿಸುತ್ತಿದೆ. ಉಜ್ಜಯಿನಿ ಇಂದಿನ ಮಧ್ಯಪ್ರದೇಶ ರಾಜ್ಯದ ಧಾರ್ಮಿಕ ರಾಜಧಾನಿ ಎನ್ನಬಹುದು. ಮಂಗಳನಾಥ ದೇವಸ್ಥಾನ ಉಜ್ಜಯಿನಿಯ ಕಾರಣಿಕದ ಪುಣ್ಯಕ್ಷೇತ್ರ. ಪುರಾಣಗಳಲ್ಲಿ ತಿಳಿಸಿರುವಂತೆ ಉಜ್ಜಯಿನಿ ಮಂಗಳ(ಕುಜ)ನ ತಾಯಿ.ಕುಜನ ಶಕ್ತಿ ಪ್ರಾಬಲ್ಯವಿರುವ ಜಾತಕ ಹೊಂದಿರುವ ವ್ಯಕ್ತಿಗಳ ಈ ದೇವಸ್ಥಾನವನ್ನು ಕಡ್ಡಾಯವಾಗಿ ಸಂದರ್ಶಿಸಿ, ಗ್ರಹದೋಷ ನಿವಾರಿಸಲು ಅಥವಾ ಗ್ರಹಸಂತೃಪ್ತಿಗಾಗಿ ಪೂಜಿಸುತ್ತಾರೆ.ಭಾರತದಲ್ಲಿ ಅವೆಷ್ಟೊ