WD ಪರಶಿವನ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರ್ಯಂಬಕ ಎಂಬ ಪುಟ್ಟ ಗ್ರಾಮದಲ್ಲಿದೆ. ಸಹ್ಯಾದ್ರಿಯ ಬೆಟ್ಟಗಳ ಅಡಿಯಲ್ಲಿ ಬರುವ ಈ ಗ್ರಾಮದ ಉದ್ದಗಲಕ್ಕೂ ಹರಡಿರುವ ವನಸಿರಿ, ಹಸಿರು ಗಿಡಮರಗಳ ಸಾಲಿನಲ್ಲಿ ಪ್ರಣವ ಸ್ವರೂಪಿ ಓಂಕಾರ ನಾದ ಮತ್ತು ಮಹಾಮೃತ್ಯುಂಜಯ ಮಂತ್ರ, ಭಾವುಕ ಮನದ ವ್ಯಕ್ತಿಗೆ ಭಕ್ತಿ ಮಾರ್ಗದ ಮೋಕ್ಷವನ್ನು ಸಾಕ್ಷಾತ್ಕರಿಸುತ್ತದೆ.ನಾಸಿಕ್ ನಗರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಗ್ರಾಮವನ್ನು ಪ್ರವೇಶಿಸಿದ ಕೂಡಲೆ ನಮಗೆ ತ್ರ್ಯಂಬಕೇಶ್ವರ