WDWD ಮಹಾಕಾಲ ದೇವರ ನಗರವಾದ ಉಜ್ಜಯನಿಯನ್ನು ಮಂದಿರಗಳ ನಗರವೆಂದು ಕರೆಯಲಾಗುತ್ತದೆ.ನಗರದ ಪ್ರತಿ ಬಡಾವಣೆಯಲ್ಲಿ ಸಾಮಾನ್ಯವಾಗಿ ಮಂದಿರಗಳನ್ನು ಕಾಣಬಹುದು. ಆದರೆ ನಾಗಚಂದ್ರೇಶ್ವರ ಮಂದಿರ ತನ್ನ ವೈಶಿಷ್ಠತೆಗಾಗಿ ಹೆಸರುವಾಸಿಯಾಗಿ ಭಕ್ತ ಸಮೂಹವನ್ನು ತನ್ನತ್ತ ಸೆಳೆಯುತ್ತಿದೆ. ಮಹಾಕಾಳೇಶ್ವರದ ಮಂದಿರದ ತುತ್ತ ತುದಿಯಲ್ಲಿ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ವರ್ಷಕೊಂದು ಬಾರಿ, ನಾಗರಪಂಚಮಿ ಹಬ್ಬದಂದು ಮಾತ್ರ ಮಂದಿರದ ಬಾಗಿಲನ್ನು ತೆರೆಯಲಾಗುತ್ತದೆ. ನಾಗರಪಂಚಮಿಯಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾವುಗಳ ರಾಜ ತಕ್ಷಕ ದೇವರನ್ನು ಪೂಜಿಸುತ್ತಾರೆ. ಫೋಟೋ ಗ್ಯಾಲರಿಗಾಗಿ ಇಲ್ಲಿ