ಮುಖ್ಯ ಪುಟ  ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
 
ಮನದಲ್ಲಿ ನೆನೆದು ನೋಡಿ ಅರುಣಾಚಲೇಶ್ವರನನ್ನ
ಪೌರಾಣಿಕ ಹಿನ್ನಲೆ
WD
ಶಿವ ಪುರಾಣದಲ್ಲಿ ಅರುಣಾಚಲೇಶ್ವರನ ಉದ್ಭವದ ಕುರಿತು ಉಲ್ಲೇಖವಿದೆ. ಒಂದು ದಿನ ಬ್ರಹ್ಮ ಮತ್ತು ವಿಷ್ಣು ತಾನು ಶ್ರೇಷ್ಟ ಎಂದು ಪರಸ್ಪರ ವಾದ ಮಾಡುತ್ತಿದ್ದರು ಎಂದೂ, ವಾದ ಪರಿಹಾರವಾಗದೇ ಇಬ್ಬರೂ ಶಿವನ ಬಳಿ ಬಂದು ನಮ್ಮೀರ್ವರಲ್ಲಿ ಯಾರು ಉತ್ತಮರು ಎಂದು ಕೇಳಿದರಂತೆ.

ಅವರಿಬ್ಬರ ಪ್ರಶ್ನೆಗೆ ಶಿವನು ನೀವಿಬ್ಬರಲ್ಲಿ ಯಾರಾದರೂ ಒಬ್ಬರು ನನ್ನ ತಲೆಯನ್ನು ಇಲ್ಲವೇ ಪಾದವನ್ನು ನೋಡಿದಲ್ಲಿ ಅವರೇ ಶ್ರೇಷ್ಟರು ಎಂದು ಹೇಳಿ ಭೂಮ್ಯಾಕಾಶದ ಎತ್ತರದಲ್ಲಿ ಬೆಳೆದು ನಿಂತನು. ಬ್ರಹ್ಮ ಹಂಸರೂಪ ಧರಿಸಿ ತಲೆ ನೋಡಲು ಹಾರಿದನು. ವಿಷ್ಣು, ವರಾಹ ರೂಪ ಧರಿಸಿ ಭೂಮಿಯಲ್ಲಿ ಅಡಗಿರುವ ಶಿವನ ಪಾದ ನೋಡುವುದಕ್ಕೆ ಎಂದು ಭೂಮಿಯನ್ನು ತನ್ನ ಹಲ್ಲುಗಳಿಂದ ಅಗೆಯಲು ಪ್ರಾರಂಭಿಸಿದನು ಎಂದು ಹೇಳಲಾಗಿದೆ.

ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ವಿಷ್ಣು ಶಿವನ ಪಾದ ಕಾಣದೇ ಸೋತು ಮರಳಿದನು. ಬ್ರಹ್ಮನು ಕೂಡ ದಣಿದು ಮರಳುತ್ತಿರುವಾಗ ಶಿವನ ಜಡೆಯಿಂದ ಬಿಳುತ್ತಿದ್ದ ತಳಂಬು ಹೂವನ್ನು ನಾನು ಶಿವನ ತಲೆ ನೋಡಿದೆ ಎಂದು ಹೇಳು ಎಂದು ಕೇಳಿಕೊಂಡನಂತೆ, ಬ್ರಹ್ಮನ ಸುಳ್ಳಿನಿಂದ ಕುಪಿತಗೊಂಡ ಶಿವ ಅಗ್ನಿಯ ರೂಪ ಧರಿಸಿದನು. ಶಿವನ ಮೈಯಿಂದ ಹೊರ ಬರುತ್ತಿದ್ದ ಶಾಖ ಭೂಮಿ ಮತ್ತು ಸ್ವರ್ಗದಲ್ಲಿ ಸಹಿಸಲು ಆಸಾಧ್ಯವಾಯಿತು. ಶಿವನ ರೌದ್ರಾವತಾರ ತಾಳದ ಅಷ್ಟದಿಕ್ಪಾಲಕರು ನಿನ್ನ ಕ್ರೋಧವನ್ನು ಕಡಿಮೆ ಮಾಡು ಎಂದು ಪ್ರಾರ್ಥಿಸಿದರು. ಇದರಿಂದ ಶಿವನು ತೃಪ್ತನಾದನು. ಈ ಘಟನೆ ಮಹಾಶಿವರಾತ್ರಿ ಕಾರಣ ಎಂದು ಹೇಳಲಾಗಿದೆ.

WD

ತಲುಪುವುದು ಹೇಗೆ
ರಸ್ತೆ: ತಿರುವನ್ನಾಮಲೈಗೆ ಚೆನ್ನೈನಿಂದ ಸುಮಾರು 187 ಕಮಿ ದೂರದಲ್ಲಿದೆ. ರಾಜ್ಯ ರಸ್ತೆ ಸಾರಿಗೆ ಬಸ್ ಸೌಕರ್ಯ ಇದೆ.
ರೈಲು ಸಂಪರ್ಕ: ಸುತ್ತು ಬಳಸಿದ ಪ್ರಯಾಣ ಚೆನ್ನೈ ಎಗ್ಮೋರ್‌ನಿಂದ ತಿಂಡಿವನಂ ಇಲ್ಲವೇ ವಿಲ್ಲುಪುರಂವರೆಗೆ ಹೋಗಿ ನಂತರ ತಿರುವನ್ನಾಮಲೈಗೆ ಬೇರೆ ರೈಲಿನಲ್ಲಿ ಪ್ರಯಾಣ ಮುಂದುವರಿಸಬಹುದು.
ವಿಮಾನ ಸಂಪರ್ಕ ಚೆನ್ನೈ ವಿಮಾನ ನಿಲ್ದಾಣ ನಂತರ ಬಸ್ ಇಲ್ಲವೆ ರೈಲು ಮೂಲಕ ಪ್ರಯಾಣ ಮುಂದುವರಿಸಬಹುದು.

ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ವೀಡಿಯೋ ವೀಕ್ಷಿಸಿ
 << 1 | 2   
ಫೋಟೋಗ್ಯಾಲರಿ
ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು
ರಾಜಸ್ಥಾನದ ಜೈನ ಪುಣ್ಯಕ್ಷೇತ್ರ: ಮಹಾವೀರ ಮಂದಿರ
ಮುಂಬಯಿಯ ಶ್ರೀ ಸಿದ್ಧಿವಿನಾಯಕ ಮಂದಿರ
ಇಂದೋರಿನ ಖಜ್ರಾನಾ ಗಣೇಶ
ಕಲಿಯುಗ ವರದ ಶಬರಿಮಲೆ ಅಯ್ಯಪ್ಪ
ಕೃಷ್ಣ ಭಕ್ತಿಯ ತಾಣ - ಇಸ್ಕಾನ್ ಮಂದಿರ
ಸರ್ಪರಾಜ ನಾಗಚಂದ್ರೇಶ್ವರ