ಕೊಲ್ಹಾಪುರದ ಮಹಾಲಕ್ಷ್ಮೀ, ವಾರಣಾಸಿಯ ವಿಶಾಲಾಕ್ಷಿ, ಗಯಾದ ಮಂಗಳಾವತಿ, ಬಂಗಾಲದಲ್ಲಿರುವ ಸುಂದರಿ ಭವಾನಿ ಮತ್ತು ನೇಪಾಳದಲ್ಲಿ ಇರುವ ಗುಹ್ಯಕೇಶ್ವರಿ ಪ್ರಮುಖವಾಗಿವೆ.
ಮೌಂಟ್ ಅಬುವಿನ ಹತ್ತಿರ ಅಂಬಾ ಭವಾನಿ ಮಂದಿರವಿದ್ದು, ಪಾಲನಪುರ್‍ದಿಂದ 65 ಕಿಮಿ ದೂರದಲ್ಲಿದೆ. ಅಂಬಾ ಭವಾನಿಯ ಮೂಲಸ್ಥಳ ಬೇಟ್ಟದ ಮೇಲಿದ್ದು ಇದು ಪಟ್ಟಣದಿಂದ ಮೂರು ಕಿಮಿ ದೂರದಲ್ಲಿದೆ.
ಪೂರ್ವ ಆರ್ಯರ ಕಾಲದಲ್ಲಿ ಅಂಬಾ ಭವಾನಿ ಪೂಜಿಸಲ್ಪಡುತ್ತಿದ್ದಳು ಎಂಬ ನಂಬಿಕೆ ಇದ್ದು, ಆರ್ಯರ ಆಗಮನದ ನಂತರ ಅವರ ಸಂಸ್ಕೃತಿಯಲ್ಲಿ ಕೂಡ ಅಂಬಾ ಭವಾನಿಗೆ ಸ್ಥಾನ ಸಿಕ್ಕಿತು ಎಂದು ವಾದಿಸುವವರು ಇದ್ದಾರೆ.
ಪಕ್ಕದ ಅರಾವಳಿ ಪರ್ವತ ಶ್ರೇಣಿಯ ಪಾದದಡಿಯಲ್ಲಿ ಒಂದು ಅರಸೂರ ಎಂಬ ಗ್ರಾಮವಿದ್ದು ಅಲ್ಲಿ ಶ್ರೀಕೃಷ್ಣನ ಕೇಶ ಮುಂಡನವನ್ನು ಮಾಡಲಾಯಿತು. ಅಲ್ಲಿನ ದೇವಸ್ಥಾನದಲ್ಲಿ ಕೂಡ ಯಾವುದೇ ದೇವತೆಯ ಮೂರ್ತಿ ಇಲ್ಲ.ಅಲ್ಲಿನ ದೇವಸ್ಥಾನದಲ್ಲಿ 51 ಶ್ಲೋಕಗಳ ಪಟ್ಟಿ ಇದೆ.
ಇಲ್ಲಿನ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿ ನವರಾತ್ರಿ ಹಬ್ಬಕ್ಕೆ ಲಕ್ಷದ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ತಲುಪುವುದು ಹೇಗೆ: ಅಹ್ಮದಾಬಾದ್‌ನಿಂದ 180 ಕಿಮಿ ಅಬು ರೋಡ್ ಸ್ಟೆಷನ್‌ನಿಂದ 180 ಕಿಮಿ ಮೌಂಟ್ ಅಬುನಿಂದ 45 ಕಿಮಿ ದೆಹಲಿಯಿಂದ 700 ಕಿಮಿ ಸಮೀಪದ ರೈಲ್ವೆ ನಿಲ್ದಾಣ ಅಬು ರೋಡ್ ಸಮೀಪದ ವಿಮಾನ ನಿಲ್ದಾಣ ಅಹ್ಮದಾಬಾದ್
|