ನಾಗೇಂದ್ರ ತ್ರಾಸಿ WD ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು, ಸೌಪರ್ಣಿಕಾ ತಟದಲ್ಲಿರುವ ವಾಸ್ತುಶಿಲ್ಪ ಆಧಾರಿತ ಶಾಸ್ತ್ರೋಕ್ತವಾದ ಮಧ್ಯಮ ಗಾತ್ರದ ಶಿಲಾಮಯ ಪುಣ್ಯಕ್ಷೇತ್ರ. ಇಲ್ಲಿ ಭಕ್ತ ವತ್ಸಲೆಯಾದ ಶ್ರೀದೇವಿಯು ಮೂಕಾಂಬಿಕೆಯ ರೂಪದಲ್ಲಿ ನೆಲೆಸಿ ಭಕ್ತ ಜನಕೋಟಿಯನ್ನು ಹರಸುತ್ತಿದ್ದಾಳೆ.ವಿಶೇಷತೆ:ಈ ಪುಣ್ಯ ಕ್ಷೇತ್ರವು ವಿದ್ಯಾದಶಮಿ ದಿನ ನಡೆಯುವ ಅಕ್ಷರಾಭ್ಯಾಸಕ್ಕೆ ಹೆಸರುವಾಸಿ. ದೇಶದೆಲ್ಲೆಡೆಯಿಂದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳಿಗೆ ಭಕ್ತಿಯ ತಾಣವಿದು. ತಮಿಳುನಾಡು ಮಾಜಿ ಮುಖ್ಯಮಂತ್ರಿ/ನಟ ಎಂಜಿಆರ್ ಅವರು ಈ ಕ್ಷೇತ್ರಕ್ಕೆ ಚಿನ್ನದ ಖಡ್ಗ ಒಪ್ಪಿಸಿದ್ದರೆ, ಸಂಗೀತ