ಅರವಿಂದ್ ಶುಕ್ಲಾ ಇದು ಲಕ್ನೋ ನಗರಕ್ಕೆ ತೀರ ಸಮಿಪ ಇರುವ ಕನಸ್ರಾಬಾಗ್‌ದಲ್ಲಿ ಇರುವ ಸಂಗೀತ ಸಾಮ್ರಾಟ್, ಗಾನಪ್ರಿಯ ಬಟೂಕ ಭೈರವನ ಕಥೆ. ಲಯಕರ್ತೃ ಶಿವನು ಸಂಗೀತ ಮತ್ತು ನಾಟ್ಯ ಪ್ರಿಯ ಅದರಂತೆ ಮದ್ಯಪ್ರಿಯನು ಹೌದು. ಈ ಮಂದಿರಕ್ಕೆ ಭಕ್ತರು ಸೇರಿದಂತೆ ಸಂಗೀತಾರಾಧಕರು ಮತ್ತು ಸಂಗೀತ ಕಲೆಯ ಉಪಾಸಕರು ಬರುವುದು ವಾಡಿಕೆ.
ಸಂಗೀತಕ್ಕೆ ಮತ್ತು ಕಥಕ್ ನೃತ್ಯಕ್ಕೆ ಹೆಸರು ಮಾಡಿರುವ ಇದು ಕಥಕ್ ಘರಾನಾದ ಮೂಲ ಎಂದು ಪ್ರತೀತಿ ಇದೆ. ಹಿಂದೂಸ್ತಾನಿ ಸಂಗೀತದಲ್ಲಿ ಘರಾನಾ ಶಬ್ದ ಬಳಕೆಯಲ್ಲಿದ್ದು. ವಿಶಿಷ್ಟ ರೀತಿಯ ಸಂಗೀತವನ್ನು ಅಳವಡಿಸಿಕೊಂಡ ನಂತರ ಬರುವ ಶೈಲಿಗೆ, ಆ ಮನೆತನದ ಇಲ್ಲವೆ, ಆ ಪ್ರದೇಶದ ಹೆಸರನ್ನು ಮುಂದೆ ಸೂಚಿಸುವ ಮೂಲಕ ಆ ಶೈಲಿಯ ಸಂಗೀತದ ವ್ಯುತ್ಪನ್ನದ ಮೂಲವನ್ನು ಘರಾನಾ ಶಬ್ದ ತಿಳಿಸುತ್ತದೆ.
ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಅಂತಿಮ ರವಿವಾರದಂದು ಬಟೂಕ ಭೈರವನ ದೇವಸ್ಥಾನದಲ್ಲಿ ಸಂಗೀತ ಮತ್ತು ನೃತ್ಯ ಕಲಿಯಲು ಇಚ್ಚಿಸುವವರು ಅಂದು ತಮ್ಮ ಅಧ್ಯಯನಕ್ಕೆ ಓಂಕಾರ ಹಾಕುತ್ತಾರೆ. ಅಂದು ನಡೆಯುವ "ಘುಂಘ್ರುವಾಲಿ ರಾತ್" ಸಂಗೀತ ರಸಸಂಜೆಯಲ್ಲಿ ಭೈರವನಿಗೆ ಸೋಮರಸವನ್ನು ನೈವೇಧ್ಯವಾಗಿ ಅರ್ಪಿಸಿ, ಪ್ರಸಾದ ರೂಪದಲ್ಲಿ ಅದನ್ನು ಸ್ವೀಕರಿಸಿ ಸಂಗೀತದ ರಸಾನುಭವವನ್ನು ಭಕ್ತರು ಪಡೆದುಕೊಳ್ಳುತ್ತಾರೆ. ಭಾದ್ರಪದ ಮಾಸದ ಕೊನೆಯ ರವಿವಾರದಂದು ನಡೆಯುವ "ಘುಂಘ್ರುವಾಲಿ ರಾತ್" ಸಂಗೀತ ಕಾರ್ಯಕ್ರಮ ಒಂದು ರೀತಿಯಲ್ಲಿ ಜಾತ್ರೆಯ ಸ್ವರೂಪ ಪಡೆಯುವುದು ವಾಡಿಕೆ. ಸುಮಾರು 33 ವರ್ಷಗಳ ಭವ್ಯ ಇತಿಹಾಸ ಇರುವ ಕಥಕ್ ಘರಾನಾ ಶೈಲಿಯ ನೃತ್ಯ ಲಕ್ನೋದಲ್ಲಿ ಮರುಜೀವ ಪಡೆಯುತ್ತದೆ. ಲಾಖ್ ನವಿ ಎಂದು ಮೊದಲು ಹೆಸರು ಪಡೆದಿದ್ದ ಲಕ್ನೋ ನಗರ ಇತಿಹಾಸ ಕಾಲದಿಂದಲೂ ಸಂಗೀತ ಕಲೆಗಳ ತವರೂರು ಎಂದು ಬೇರೆ ಹೇಳಬೇಕಾಗಿಲ್ಲ. ಸಾಧುಗಳು, ಸಂತರು ಅಂದು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಬಟೂಕ ಭೈರವನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
|