ಮುಖ್ಯ ಪುಟ  ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
 
ಹರಮಂದಿರ್ ಸಾಹೀಬ- ಸ್ವರ್ಣ ಮಂದಿರ
WD
ದರ್ಬಾರ್ ಸಾಹೀಬ ಅಥವಾ ಸ್ವರ್ಣ ಮಂದಿರ ಎಂದೂ ಕರೆಯಲಾಗುವ ಶ್ರೀ ಹರ್ಮಂದಿರ್ ಸಾಹೀಬ ವಿಶ್ವ ವಿಖ್ಯಾತ. ತನ್ನ ಸ್ವರ್ಣ ಲೇಪನ ಮತ್ತು ಸೌಂದರ್ಯಭರಿತ ನೋಟದಿಂದಲೇ ಅದು ಗಮನ ಸೆಳೆಯುತ್ತದೆ. ವಿಶ್ವಾದ್ಯಂತ ಹರಡಿಕೊಂಡಿರುವ ಪ್ರತಿಯೊಬ್ಬ ಸಿಖ್ ಕೂಡ, ಅಮೃತಸರದಲ್ಲಿರುವ ಈ ಅದ್ಭುತ, ದೈವೀಕ ಮಂದಿರವನ್ನು ನೋಡುವ ಮತ್ತು ಶ್ರೀ ಹರಮಂದಿರ್ ಸಾಹೀಬದಲ್ಲಿ ಅರ್ದಾಸ್ (ಪ್ರಾರ್ಥನೆ) ಸಲ್ಲಿಸುವ ಅಭಿಲಾಷೆ ಇಟ್ಟುಕೊಂಡಿರುತ್ತಾನೆ.

ಐದನೇ ಸಿಖ್ ಗುರುವಾದ ಗುರು ಅರ್ಜನ್ ಸಾಹೀಬ್ ಅವರು ಸಿಖ್ಖರಿಗೆ ಪೂಜಿಸಲು ಒಂದು ತಾಣ ಬೇಕು ಎಂಬುದನ್ನು ಮನಗಂಡು, ಅವರೇ ಈ ಮಂದಿರದ ರೂಪುರೇಷೆ ಸಿದ್ಧಪಡಿಸಿದ್ದರು. ಪವಿತ್ರ ತೀರ್ಥವಾದ ಅಮೃತ ಸರ ಅಥವಾ ಅಮೃತ ಸರೋವರವನ್ನು ಉತ್ಖನನ ಮಾಡುವ ಯೋಜನೆ ಮೂರನೇ ಸಿಖ್ ಗುರುವಾದ ಗುರು ಅಮರದಾಸ ಸಾಹೀಬ ಅವರದ್ದಾಗಿತ್ತು.

ಆದರೆ ಅದನ್ನು ಬಾಬಾ ಬುದ್ಧಜೀ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಗತಗೊಳಿಸಿದವರು ಗುರು ರಾಮದಾಸ ಸಾಹೀಬ. ಆ ಪ್ರದೇಶದ ಜಮೀನುದಾರರಿಗೆ ಹಣ ನೀಡಿ ಅಥವಾ ದಾನ ರೂಪದಲ್ಲಿ ಹಿಂದಿನ ಗುರು ಸಾಹೀಬರು ಭೂಮಿಯನ್ನು ಅದಾಗಲೇ ಪಡೆದುಕೊಂಡಿದ್ದರು. ಅಲ್ಲೇ ಒಂದು ಪಟ್ಟಣವನ್ನು ರೂಪಿಸುವ ಕಾರ್ಯಕ್ಕೂ ಯೋಜನೆ ರೂಪಿಸಲಾಯಿತು.
WD
ಇದರೊಂದಿಗೆ ಪಟ್ಟಣ ಮತ್ತು ಸರೋವರದ ನಿರ್ಮಾಣ ಕಾರ್ಯವು 1570ರಲ್ಲಿ ಏಕಕಾಲಕ್ಕೆ ಆರಂಭವಾಯಿತು.ಎರಡೂ ಯೋಜನೆಗಳು ಪೂರ್ಣಗೊಂಡದ್ದು ಕ್ರಿ.ಶ. 1577ರಲ್ಲಿ.


ಗುರು ಅರ್ಜನ್ ಸಾಹೀಬರು ಮಂದಿರದ ನಿರ್ಮಾಣಕ್ಕೆ 1588ರಲ್ಲಿ ಲಾಹೋರಿನ ಮುಸ್ಲಿಂ ಸಂತ ಹಜರತ್ ಮಿಯಾ ಮೀರ್ ಜಿ ಮೂಲಕ ಅಡಿಗಲ್ಲು ಹಾಕಿಸಿದರು. ನಿರ್ಮಾಣ ಕಾರ್ಯದ ಮೇಲ್ವಿಚಾರಣೆ ಗುರು ಅರ್ಜನ್ ಸಾಹೀಬರದೇ. ಇದಕ್ಕೆ ಪ್ರಮುಖ ಸಿಖ್ ಮುಂದಾಳುಗಳಾದ ಬಾಬಾ ಬುದ್ಧಜಿ, ಭಾಯಿ ಗುರುದಾಸ್‌ಜಿ, ಭಾಯಿ ಸಾಹ್ಲೋಜಿ ಮತ್ತಿತರರು ಹೆಗಲು ನೀಡಿದರು.
ವೀಡಿಯೋ ವೀಕ್ಷಿಸಿ
  1 | 2  >> 
ಫೋಟೋಗ್ಯಾಲರಿ
ಸ್ವರ್ಣಮಂದಿರದ ಫೋಟೊಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಹನುಮಂತನ ನೂರಾರು ರೂಪಗಳು  
ಸಂಗೀತ ಸಾಮ್ರಾಟ್ ಬಟೂಕ ಭೈರವ  
ಜೈ ಕನಕ ದುರ್ಗಾ...ಜೈಜೈ ಕನಕ ದುರ್ಗಾ  
ಪರಮ ಪಾವನೆ ಭಕ್ತವತ್ಸಲೆ ಕೊಲ್ಲೂರು ಶ್ರೀಮೂಕಾಂಬಿಕೆ  
ಗುಜರಾತಿನ ಅಂಬಾಭವಾನಿ ಮಂದಿರ  
ಖ್ವಾಜಾ-ಮೊಯಿನುದ್ದಿನ್ ಚಿಸ್ತಿ