ಸೃಷ್ಟಿ,ಸ್ಥಿತಿ ಮತ್ತು ಲಯ ಶಕ್ತಿಗಳು ಏಕರೂಪದ ಪ್ರತಿರೂಪ ದತ್ತಾತ್ರೇಯನಾದರೆ, ಇಚ್ಚಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿಗಳ ಸಂಗಮ ತ್ರಿಶಕ್ತಿಗಳಲ್ಲಿ ಆಗಿದೆ ಎನ್ನುವುದನ್ನು ಪುರಾಣಗಳಲ್ಲಿ ವೇದ್ಯವಾಗಿರುವ ಸಂಗತಿ. ವಿಜಯವಾಡದಲ್ಲಿ ಈ ಮೂರು ಕ್ರಿಯಾಶಕ್ತಿಗಳ ಸಂಗಮವಾದ ದೇವಸ್ಥಾನವಿದೆ. ಅದೇ ಈ ಬಾರಿ ನಮ್ಮ ಧಾರ್ಮಿಕ ಪಯಣದ ಗುರಿ.
ಕೃಷ್ಣೆಯ ತಟದಲ್ಲಿ ವಿಜಯವಾಡದಲ್ಲಿರುವ ತ್ರಿಶಕ್ತಿ ಪೀಠವೇ ಈ ಬಾರಿಯ ನಮ್ಮ ಧಾರ್ಮಿಕ ಕ್ಷೇತ್ರದ ಪಯಣ. ಆಂದ್ರ ಪ್ರದೇಶದ ವಿಜಯವಾಡ ಎಂಬ ನಗರದಲ್ಲಿ ಮಹಾಕಾಳಿಯ ದೇವಸ್ಥಾನವಿದ್ದು, ಇದನ್ನು ತ್ರಿಶಕ್ತಿ ಪೀಠ ಎಂದು ಕರೆಯಲಾಗುತ್ತದೆ. ಐತಿಹಾಸಿಕ ಹಿನ್ನಲೆ: ಸಮಿಪದ ನೆಲ್ಲೊರ್ ಕಾಡಿನಲ್ಲಿ ಸಿಕ್ಕ ಸ್ವಯಂಭೂ ಮೂರ್ತಿಯನ್ನು ತಂದ ಮಿಲಿಟರಿ ಇಂಜಿನಿಯರ್ ಓರ್ವ ವಿಜಯವಾಡದಲ್ಲಿ ಸ್ಥಾಪಿಸಿದನು. ನಂತರ 14 ಅಗಸ್ಟ್ 1947ರಿಂದ ಸತತವಾಗಿ 11 ವರ್ಷಗಳ ಕಾಲ ಕಾಳಿದಾಸ ಎಂದು ಹೆಸರು ಪಡೆದ ಗುಂಜಾ ರಾಮಸ್ವಾಮಿಯನ್ನು ಕಾಳಿಯ ಅರ್ಚನೆ ಮಾಡಿದನು. ನಂತರ ಕೆಲ ವಿಚಿತ್ರ ಕಾರಣಗಳಿಂದ ಮಂದಿರದಲ್ಲಿ ದೇವತಾರಾಧನೆ ಸ್ಥುಗಿತಗೊಂಡಿತು. 1965ರ ನಂತರವೇ ಮಂದಿರದ ಪೂಜಾ ಕೈಂಕರ್ಯ ತುರುಗಾ ವೇಂಕಟೇಶ್ವರಲುರಿಂದ ಪ್ರಾರಂಭವಾಯಿತು. ಸತತ ಹದಿನೈದು ವರ್ಷಗಳ ಕಾಲ ಮುಚ್ಚಿದ ಬಾಗಿಲಲ್ಲಿ ಇದ್ದ ಕಾಳಿಕಾದೇವಿಯ ಮೂರ್ತಿಯ ಎದುರು ನಿತ್ಯ ನಂದಾ ದೀಪ ಇರುತ್ತಿತ್ತು ಎಂದು ನೋಡಿದವರು ಹೇಳುತ್ತಾರೆ. ಅಂದಿನಿಂದಲೇ ತ್ರಿಶಕ್ತಿಯ ಮಹಾತ್ಮೆ ಅರಿತು ನಿತ್ಯ ಪೂಜೆ ಪ್ರಾರಂಭವಾಯಿತು.
|