ಗುಜರಾತ್‌ನ ವಡೋದರಾ ನಗರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಚಂಪಾನೇರ್ ಎಂಬ ಪ್ರದೇಶದಲ್ಲಿ ಈ ಪವಾಗಢ ಶಕ್ತಿ ಪೀಠವಿದ್ದು, ಚಂಪಾನೇರ್ ಗುಜರಾತಿನ ಪ್ರಾಚೀನ ರಾಜಧಾನಿಯಾಗಿತ್ತು.
ಅರಸೂರಿನ ಅಂಬಾಜಿ, ಚುನ್ವಾಲ್‌ನ ಬಾಲಾ ಮಂದಿರ ಮತ್ತು ಪವಾಗಢದ ಕಾಳಿಕಾ ಮಂದಿರ ಗುಜರಾತ್ ರಾಜ್ಯದಲ್ಲಿ ಮೂರು ಪ್ರಮುಖ ಶಕ್ತಿಪೀಠ ಕೇಂದ್ರಗಳಾಗಿದ್ದು, ಇದೇ ರಾಜ್ಯದಲ್ಲಿ ಇನ್ನೂ ಹಲವು ಶಕ್ತಿಪೀಠಗಳಿವೆ. ಅವುಗಳಲ್ಲಿ ಮೌಂಟ್ ಅಬುವಿನ ಅರ್ಬುದಾದೇವಿ, ಹಳ್ವಾಡಿನ ಸುಂದರಿ ಮತ್ತು ಕೊಯ್ಲಾದ ಹರಸಿದ್ಧಿ ಅಲ್ಲದೆ ನರ್ಮದಾದಲ್ಲಿನ ಅನಸೂಯಾ ಪೀಠಗಳು ಪ್ರಖ್ಯಾತಿ ಪಡೆದಿವೆ.
ದಕ್ಷ ಸಂಹಾರದ ಸಂದರ್ಭದಲ್ಲಿ ಶಿವನ ರುದ್ರ ತಾಂಡವ ಪ್ರಾರಂಭವಾಯಿತು. ಈ ಸಮಯದಲ್ಲಿ ಅಗ್ನಿಗೆ ತನ್ನನ್ನು ಅರ್ಪಿಸಿಕೊಂಡ ಗಿರಿಜೆಯ ದೇಹದ ಭಾಗಗಳು ದೇಶದ ಎಲ್ಲೆಡೆ ಚದುರಿ ಬಿದ್ದವು. ಹಾಗೆ ಬಿದ್ದ ಅವಯವಗಳ ಸ್ಥಳ ಶಕ್ತಿ ಪೀಠವಾಗಿ ರೂಪುಗೊಂಡವು ಎಂಬ ಪ್ರತೀತಿ ಇದ್ದು. ಗಿರಿಜೆಯ ಎಡ ಸ್ತನ ಚಂಪಾನೇರದಲ್ಲಿ ಬಿದ್ದಿತು ಎಂದು ಇಲ್ಲಿನ ನಾಗರಿಕರು ನಂಬಿದ್ದಾರೆ.
|