ಮುಖ್ಯ ಪುಟ > ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಟ್ಟಮ್‌ನ ಸೆಂಟ್ ಮೇರಿ ಚರ್ಚ್
WD
ಎಸು ಕ್ರಿಸ್ತನ ಅನುಯಾಯಿ ಸೆಂಟ್ ಥಾಮಸ್ ದಕ್ಷಿಣ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಲ್ಲಿ ವಾಸಿಸುತ್ತಿದ್ದನೆಂದೂ ನಂತರ ಈ ಸ್ಥಳ ಕೊಕ್ಕಮಂಗಲಮ್ ಎಂದು ಹೆಸರು ಪಡೆಯಿತು. ಕೇರಳದಲ್ಲಿ ಸೆಂಟ್ ಥಾಮಸ್ ಸ್ಥಾಪಿಸಿದ ಏಳು ಚರ್ಚ್‌ಗಳ ಪೈಕಿ ಇದು ಒಂದು.

ಕಾಲಾನಂತರದಲ್ಲಿ ಈ ಪ್ರದೇಶದಲ್ಲಿ ಕ್ರಿಶ್ಚಿಯನ್‌ ಧರ್ಮ ಪ್ರಬಲವಾಗುತ್ತಿದ್ದಂತೆ ಮತ್ತೊಂದು ಚರ್ಚ್ ಅಸ್ತಿತ್ವಕ್ಕೆ ಬಂತು. ಕ್ರಿ.ಶ. 1023ರಲ್ಲಿ ಈಗಿನ ಚರ್ಚ್ ಸ್ಥಾಪನೆಗೊಂಡಿತು. 1476ರಲ್ಲಿ ಪೋಪ್ ಸಿಕ್ಟಸ್ ಕ್ರಿಸ್ತ ಧರ್ಮಿಯರಲ್ಲಿ ಆಚರಿಸುವ ಪರಿಶುದ್ಧತೆಯನ್ನು ಪರಿಚಯಿಸಿದರು. ಚರ್ಚ್ ಕುರಿತು ಡೊಗ್ಮಾ ಹೇಳಿದ ಯಾವುದೇ ವಿಚಾರಗಳಿಗೆ ವ್ಯಾಖ್ಯಾನ ನೀಡದೆ ಮಾತೆ ಮೇರಿ ಕುರಿತು ಇರುವ ನಂಬಿಕೆಗಳನ್ನು ನಂಬುವುದು ಬಿಡುವುದನ್ನು ರೋಮನ್ ಕ್ಯಾಥೋಲಿಕ್‌ರಿಗೆ ಬಿಟ್ಟ ವಿಚಾರ ಎಂದು ಹೇಳಿದರು.

ಈ ಚರ್ಚಿನಲ್ಲಿ ಎರಡು ಹಬ್ಬಗಳನ್ನು ಆಚರಿಸಲಾಗುತ್ತದೆ. ಡಿಸೆಂಬರ್ 8ರ ನಂತರ ಬರುವ ಮೊದಲ ರವಿವಾರದಂದು ಮಾತೆಯ ಹಬ್ಬವನ್ನು ಆಚರಿಸಲಾಗುತ್ತದೆ. ಎರಡನೆ ಹಬ್ಬ ಜನೇವರಿ 21ರಂದು ಆಚರಿಸಲಾಗುತ್ತದೆ. ಇದು ಮಾತೆಯ ವಿವಾಹದ ಹಬ್ಬ ಎಂಬ ನಂಬಿಕೆ ಇದೆ.
WD

16ನೇ ಶತಮಾನದಲ್ಲಿ ಪೋರ್ತುಗೀಸ್ ಶೈಲಿಯಲ್ಲಿ ಬೃಹತ್ತಾದ ಚರ್ಚ್ ನಿರ್ಮಿಸಲಾಯಿತು. ಸೆಂಟ್ ಪ್ರಾನ್ಸಿಸ್ ಗೋವಾ ಮತ್ತು ಕೇರಳಗಳಿಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ಚರ್ಚಿನಲ್ಲಿ ವಾಸವಾಗಿದ್ದನು. ಅರ್ಚ್ ಡೈಯಾಸಿಸ್ ಎರ್ನಾಕುಲಂ ಮತ್ತು ಅಂಗಾಮಲಿ, ಈ ಚರ್ಚ್‌ನ್ನು ಮಾತೆ ಮೇರಿಯ ಯಾತ್ರಾ ಸ್ಥಳ ಎಂದು ಗುರುತಿಸಿದ್ದಾರೆ.
ವೀಡಿಯೋ ವೀಕ್ಷಿಸಿ 1  |  2
 << 1 | 2   
ಫೋಟೋಗ್ಯಾಲರಿ
ಮಾತೆ ಮೇರಿ ಪೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು
ಮಸೀದಿಗಳ ಕಿರೀಟ ತಾಜುಲ್ ಮಸೀದಿ  
ಪವಾಗಢದ ಶಕ್ತಿಪೀಠ  
ವಿಜಯವಾಡದ ತ್ರಿಶಕ್ತಿ ಪೀಠ  
ಡಾಕೋರ್‌ನ ರಣಛೋಡ್‌ರಾಯಜಿ ಮಂದಿರ  
ಹರಮಂದಿರ್ ಸಾಹೀಬ- ಸ್ವರ್ಣ ಮಂದಿರ  
ಹನುಮಂತನ ನೂರಾರು ರೂಪಗಳು